ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀರಾವರಿ: ಕೋಲಾರ, ಚಿಕ್ಕಬಳ್ಳಾಪುರ ಸೋಮವಾರ ಬಂದ್

By Srinath
|
Google Oneindia Kannada News

rain-drops
ಕೋಲಾರ, ಫೆ. 13: ಶಾಶ್ವತ ನೀರಾವರಿ ಯೋಜನೆಗೆ ಆಗ್ರಹಿಸಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ಜನ ಸೋಮವಾರ (ಫೆ.14) ಬಂದ್ ಆಚರಿಸಲು ತೀರ್ಮಾನಿಸಿದ್ದಾರೆ. ಈ ಸಂಬಂಧ ಕೋಲಾರದಲ್ಲಿ ಶನಿವಾರ ಪಾದಯಾತ್ರೆ ನಡೆಸಿದ ನಾನಾ ಒಕ್ಕೂಟಗಳ ನಾಯಕರು ಬಂದ್ ಯಶಸ್ವಿಗೊಳಿಸಲು ಎರಡೂ ಬರಡು ಜಿಲ್ಲೆಗಳ ವ್ಯಾಪಾರಿಗಳು ಮತ್ತು ಜನತೆ ಸಹಕರಿಸಬೇಕು ಎಂದು ಕೋರಿದರು.

ಶಾಸಕ ವೈ.ಎ. ನಾರಾಯಣ ಸ್ವಾಮಿ, ಜಿ.ಕೆ. ವೆಂಕಟಶಿವಾರೆಡ್ಡಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಎಲ್. ಅನಿಲ್ ಕುಮಾರ್ ಬಂದ್‌ಗೆ ಸಹಮತ ವ್ಯಕ್ತಪಡಿಸಿದ್ದು, ಜನತೆಯ ಬೆಂಬಲ ಕೋರಿದ್ದಾರೆ. ಮಾಜಿ ಸಚಿವ ಅಲಗೂರು ಶ್ರೀನಿವಾಸ ಮತ್ತು ಸಹಕಾರಿ ಧುರೀಣ ಬ್ಯಾಲಹಳ್ಳಿ ಗೋವಿಂದ ಗೌಡ ಅವರು ಬಂದ್‌ಗೆ ಬೆಂಬಲ ಕೋರಿ ಮುಳಬಾಗಲು ಮತ್ತು ಮಾಲೂರಿನಲ್ಲಿ ಸಭೆ ನಡೆಸಿದರು.

ಪಿ.ಯು. ಪ್ರಾಕ್ಟಿಕಲ್ಸ್ ಫೆ.21ಕ್ಕೆ:

ಶಾಶ್ವತ ನೀರಾವರಿ ಯೋಜನೆ ಆಗ್ರಹಿಸಿ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಫೆಬ್ರವರಿ 14ರಂದು ನಡೆಯಬೇಕಿದ್ದ ದ್ವಿತೀಯ ಪಿಯುಸಿ ಪ್ರಾಕ್ಟಿಕಲ್ ಪರೀಕ್ಷೆಗಳನ್ನು ಫೆಬ್ರವರಿ 21ಕ್ಕೆ ಮುಂದೂಡಲಾಗಿದೆ ಎಂದು ಕೋಲಾರ ಪಿ.ಯು. ಶಿಕ್ಷಣದ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

English summary
Demanding for permanent water projects call for bandh has been given in Kolar and Chickballapur on Feb. 14
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X