ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ ಶಾಲೆಗೆ ಪ್ರೇಮ ಬಾಣ ನಾಟಿದೆ !

By Mahesh
|
Google Oneindia Kannada News

Valentine's Day in TWS Bengaluru
ಬೆಂಗಳೂರು, ಫೆ. 12: ಬೆಂಗಳೂರಿನ ಶಾಲೆಯೊಂದಕ್ಕೆ ಪ್ರೇಮಬಾಣ ನಾಟಿದೆ. ಪ್ರೇಮಿಗಳ ದಿನ(Feb.14)ಕ್ಕೂ ಮುಂಚಿತವಾಗಿ ಶಾಲೆಯಲ್ಲಿ ವ್ಯಾಲೆಂಟೈನ್ಸ್ ಡೇ ಆಚರಿಸಿ, ಸಂಭ್ರಮಪಡಲಾಗಿದೆ. ಕೊಡಿಗೆಹಳ್ಳಿಯ ಟ್ರಯೋ ವರ್ಲ್ಡ್ ಸ್ಕೂಲ್ ನಲ್ಲಿ ಶುಕ್ರವಾರದಂದು ಪ್ರೇಮಿಗಳ ದಿನಾಚರಣೆ ಆಯೋಜಿಸಲಾಗಿತ್ತು. ಫೆ.14 ರಂದು ಶಾಲಾ ಮಕ್ಕಳಿಗೆ ಶೈಕ್ಷಣಿಕ ಪರೀಕ್ಷೆ ಆರಂಭವಾಗುವ ಕಾರಣ ಮುಂಚಿತವಾಗಿ ಪ್ರೇಮಿಗಳ ಹಬ್ಬ ಆಚರಿಸಲಾಯಿತು ಎಂದು ಶಾಲೆಯ ವಕ್ತಾರ ಬಿಶ್ವಜೀತ್ ಭಟ್ಟಾಚಾರ್ಯ ಹೇಳುತ್ತಾರೆ.

ಎಲ್ಲಾ ಸರಿ, ಪ್ರೇಮಿಗಳ ದಿನಾಚರಣೆ ಏಕೆ? : ಮಕ್ಕಳ ನಡುವೆ ಪ್ರೀತಿ, ಶಾಂತಿಯ ವಾತಾವರಣ ಸೃಷ್ಟಿಸಲು ಪ್ರೇಮಿಗಳ ದಿನವನ್ನು ಆಚರಿಸುತ್ತಿದ್ದೇವೆ. ಮಕ್ಕಳ ಪೋಷಕರು, ಸ್ನೇಹಿತರು ಸಹಾ ಇದರಲ್ಲಿ ಪಾಲ್ಗೊಳ್ಳುತ್ತಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಮಕ್ಕಳಲ್ಲಿ ಸಾಮಾಜಿಕ ಕಾಳಜಿ ಬೆಳೆಸಲು ವಂತಿಗೆ ಸಂಗ್ರಹ ಮಾಡಲಾಗುತ್ತದೆ ಪಡುತ್ತಾರೆ ಎಂದು Trio World School ಶಾಲಾ ಆಡಳಿತ ಮಂಡಳಿಯವರು ಹೇಳುತ್ತಾರೆ.

ನಮ್ಮ ಶಾಲೆಯಲ್ಲಿ ಸುಮಾರು 35 ವಿವಿಧ ದೇಶಗಳಿಂದ ಬಂದಿರುವ ವಿದ್ಯಾರ್ಥಿಗಳಿದ್ದಾರೆ. ವ್ಯಾಲೆಂಟೈನ್ಸ್ ಡೇ ವಿದ್ಯಾರ್ಥಿಗಳನ್ನು ಒಗ್ಗೂಡಿಸಲು ಸಹಕಾರಿಯಾಗಿದೆ. ವಸ್ತು ಪ್ರದರ್ಶನ ಹಾಗೂ ಮಾರಾಟ, ವಂತಿಗೆಯಿಂದ ಸಂಗ್ರಹವಾದ ಹಣವನ್ನು ಸೀಡ್ಸ್ ಹೆಸರಿನ ಫೌಂಡೇಷನ್ ಗೆ ನೀಡಲಾಗುತ್ತದೆ. ಈ ಫೌಂಡೇಷನ್ ಮೂಲಕ ನಿರ್ಗತಿಕ ಮಕ್ಕಳ ವಿದ್ಯಾಭ್ಯಾಸಕ್ಕೆ ದಾರಿ ಮಾಡಿಕೊಡಲಾಗುತ್ತದೆ.

ಮುಕ್ತ ಸಮಾಜ ನಿರ್ಮಾಣ: ಪ್ರೇಮಿಗಳ ದಿನದಂದು ಶಾಲಾ ಮಕ್ಕಳು ಮುಕ್ತ ಮನಸ್ಸಿನಿಂದ ಪ್ರೀತಿಯನ್ನು ಹಂಚುಕೊಂಡಿದ್ದಾರೆ. ಚಾಕಲೋಟ್, ಹೂಗುಚ್ಛ, ಶುಭಾಶಯ ಪತ್ರಗಳು ಬಗೆ ಬಗೆ ಗಿಫ್ಟ್ ಗಳ ವಿನಿಮಯ ಜೋರಾಗಿ ನಡೆದಿದೆ.

ಮಕ್ಕಳು ಪ್ರೀತಿ ಪ್ರೇಮ ಎಂದು ಚಿಕ್ಕ ವಯಸ್ಸಿನಲ್ಲೇ ಮಾತಾಡಿ, ಹಬ್ಬ ಆಚರಿಸುತ್ತಿರುವುದು ಅವರ ಪೋಷಕರಿಗೂ ತಿಳಿದಿದೆ. ಬದಲಾಗಿರುವ ಕಾಲಕ್ಕೆ ತಕ್ಕಂತೆ ಮಕ್ಕಳ ಆದ್ಯತೆ ಹಾಗೂ ಅವಶ್ಯಕತೆಗೆ ಪೋಷಕರು ಸಾಥ್ ನೀಡುತ್ತಿದ್ದಾರೆ. ತ್ವರಿತ ಗತಿಯಲ್ಲಿ ಎಲ್ಲವನ್ನೂ ಕಲಿಯಬಲ್ಲ ಮಕ್ಕಳಿಗೆ ಪ್ರೀತಿ, ಪ್ರೇಮದ ವಿಷಯದಲ್ಲಿ ಯಾಕೆ ನಿರ್ಬಂಧ ವಿಧಿಸಬೇಕು, ಯಾವುದೂ ಸರಿ, ಯಾವುದೂ ತಪ್ಪು ಎಂಬ ನಿರ್ಣಯವನ್ನು ಚಿಕ್ಕಂದಿನಿಂದಲೇ ಕಲಿಯಬೇಕಾದ್ದು ಅವಶ್ಯ ಎಂದು ಪೋಷಕರು ಹೇಳುತ್ತಾರೆ. ಒಟ್ಟಿನಲ್ಲಿ ಬೆಂಗಳೂರು ಪ್ರಕಾಶಿಸುತ್ತಿದೆ. ಬಹಳ ಮುಂದುವರೆದಿದೆ.

English summary
Valentine’s Day Cupid strikes Bangalore kids.Trio World School (TWS) on Kodigehalli Main Road has celebrated Valentine’s Day in advance on Feb.12. Since, Monday school students are having exams.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X