ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವಿಟ್, ಟ್ವಿಟ್ ಎನ್ನಲಾರಂಭಿಸಿದ ನಿರುಪಮಾ ರಾವ್ !

By Srinath
|
Google Oneindia Kannada News

nirupamarao
ಹೊಸದಿಲ್ಲಿ, ಫೆ.11: ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಅವರು ಇಂದಿನ ಅಂತರ್ಜಾಲ ಯುಗದ ಪ್ರಮುಖ ಸಂಪರ್ಕ ಸಾಧನವಾಗಿರುವ ಟ್ವಿಟ್ಟರ್‌ನಲ್ಲಿ ಶುಕ್ರವಾರ ಖಾತೆ ತೆರೆದಿದ್ದಾರೆ. ಇದರೊಂದಿಗೆ ಸ್ವಂತ ಟ್ವಿಟ್ಟರ್ ಖಾತೆಯನ್ನು ಹೊಂದಿದ ಮೊದಲ ಭಾರತೀಯ ಅಧಿಕಾರಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ತಮ್ಮ ಬ್ಲ್ಯಾಕ್‌ಬೆರಿ ಫೋನ್ ಮೂಲಕ ಶುಕ್ರವಾರ 12.12ಕ್ಕೆ (www.twitter.com/forsecnrao) ಮೂಲಕ ಇಂದು ರಾತ್ರಿ ನ್ಯೂಯಾರ್ಕ್‌ಗೆ ತೆರಳುತ್ತಿರುವುದಾಗಿ ಮೊದಲ ಬಾರಿಗೆ ಟ್ವೀಟ್ ಮಾಡಿದ್ದಾರೆ. ವಿಶ್ವಸಂಸ್ಥೆಯ ಸಭೆಯಲ್ಲಿ ಪಾಲ್ಗೊಳ್ಳಲು ವಿದೇಶ ಸಚಿವ ಎಸ್.ಎಂ. ಕೃಷ್ಣ ಜತೆ ಅವರು ಈಗಾಗಲೇ ವಾಷಿಂಗ್ಟನ್‌ನತ್ತ ಹಾರಿದ್ದಾರೆ. ನಿರುಪಮಾ ಅವರು ಕರ್ನಾಟಕದ ಮಾಜಿ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅವರ ಪತ್ನಿ.

ಸಚಿವಾಲಯದ ಸಾರ್ವಜನಿಕ ಸಂಪರ್ಕ ವಿಭಾಗವು ಕಳೆದ ವರ್ಷ ಆರಂಭಿಸಿದ (www.twitter.com/Indiandiplomacy) ಈಗಾಗಲೇ ಸುಮಾರು 6,000 ಫಾಲೋಯರ್‌ಗಳಿದ್ದಾರೆ. ವಿದೇಶಾಂಗ ಖಾತೆ ಸಹಾಯಕ ಸಚಿವ ಶಶಿ ತರೂರ್ ಅವರು ಟ್ವೀಟ್ ಮಾಡುತ್ತಲೇ ಅಧಿಕಾರ ಕಳೆದುಕೊಂಡಿದ್ದು ಇನ್ನೂ ಜನಮಾನಸದಲ್ಲಿ ಹಸಿರಾಗಿದೆ.

English summary
Foreign Secretary Nirupama Rao on Friday opened her Twitter account, became the first senior Indian bureaucrat to do so
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X