ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನಗಣತಿ : ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ ಹರ್ಷ

By Prasad
|
Google Oneindia Kannada News

A file photo of a transgender
ಬೆಂಗಳೂರು, ಫೆ. 11 : ಭಾರತದಲ್ಲಿ ಫೆಬ್ರವರಿ 9ರಿಂದ ಪ್ರಾರಂಭವಾಗಿರುವ ಜನಗಣತಿಯಲ್ಲಿ ಸ್ತ್ರೀ ಪುರುಷರ ಜೊತೆಗೆ ಪ್ರಥಮ ಬಾರಿಗೆ ಲೈಂಗಿಕ ಅಲ್ಪಸಂಖ್ಯಾತರನ್ನೂ ಸೇರಿಸಲು ನಿರ್ಧರಿಸಿರುವುದನ್ನು ಸ್ವಾಗತಿಸಿರುವುದಾಗಿ ಕರ್ನಾಟಕ ಲೈಂಕಿಕ ಅಲ್ಪಸಂಖ್ಯಾತರ ವೇದಿಕೆ ಹೇಳಿದೆ.

ಗುರುವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಜನಗಣತಿ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ ಕಾರ್ಯಕರ್ತರು ಸರಕಾರಕ್ಕೆ ತಾವು ಸಲ್ಲಿಸುತ್ತಿರುವ ಬೇಡಿಕೆಗಳ ಬಗ್ಗೆ ವಿವರ ನೀಡಿದರು.

ಭಾರತದಲ್ಲಿ 1872ರಿಂದ ಜನಗಣತಿ ಪ್ರಾರಂಭವಾಗಿ ಪ್ರತಿ 10 ವರ್ಷಗಳಿಗೊಮ್ಮೆ ನಡೆಯುತ್ತಿದೆ. ಸರಣಿಯಲ್ಲಿ 15ನೆಯ ಹಾಗೂ ಸ್ವಾತಂತ್ರ್ಯ ಬಳಿಕದ 7ನೇ ಜನಗಣತಿ ಇದಾಗಿದೆ. ಈಗಾಗಲೇ ಜನಗಣತಿಗೆ ಸಕಲ ಸಿದ್ದತೆಗಳಾಗಿದ್ದು ಸ್ತ್ರೀ ಪುರುಷರ ಜೊತೆಗೆ ಭಾರತ ಇತಿಹಾಸದಲ್ಲೇ ಪ್ರಥಮ ಬಾರಿಗೆ ಲೈಂಗಿಕ ಅಲ್ಪಸಂಖ್ಯಾತರನ್ನು ದಾಖಲಿಸಲು ಮುಂದಾಗಿದೆ. ಇದನ್ನು ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ ಸ್ವಾಗತಿಸುತ್ತದೆ ಎಂದು ವೇದಿಕೆ ಹರ್ಷ ವ್ಯಕ್ತಪಡಿಸಿತು.

ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ : ಈ ವೇದಿಕೆಯು ಕರ್ನಾಟದ ಲೈಂಗಿಕ ಅಲ್ಪಸಂಖ್ಯಾತರ ಸಮುದಾಯದವರ ರಾಜ್ಯಮಟ್ಟದ ಪ್ರಜಾಸತ್ತಾತ್ಮಕ ಸಂಸ್ಥೆಯಾಗಿದ್ದು, 22ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕಾರ್ಯನಿರತವಾಗಿದೆ. ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ ಲೈಂಗಿಕ ಅಲ್ಪಸಂಖ್ಯಾತರ ಮಾನವ ಹಕ್ಕುಗಳನ್ನು ಸಂರಕ್ಷಿಸುವುದು ಮತ್ತು ಅವರ ಪರವಾಗಿ ಸರ್ಕಾರ, ಮಾದ್ಯಮ, ಸರ್ಕಾರೇತರ ಸಂಸ್ಥೆಗಳು ಮತ್ತು ಸಮುದಾಯ ಆಧಾರಿತ ಸಂಸ್ಥೆಗಳೊಂದಿಗೆ ವಕಾಲತ್ತು ನಡೆಸುತ್ತಿದೆ. ವೇದಿಕೆಯು ಲೈಂಗಿಕ ಅಲ್ಪಸಂಖ್ಯಾತರ ವಿಷಯದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವುದು, ಸಾಮಾಜಿಕ ಚಳವಳಿಗಳೊಂದಿಗೆ ಕೈ ಜೋಡಿಸಿ ಸಾರ್ವಜನಿಕ ಕಾರ್ಯಕ್ರಮಗಳ ಮುಖಾಂತರ ಲೈಂಗಿಕ ಅಲ್ಪಸಂಖ್ಯಾತರ ಪರವಾಗಿ ಸಮಾಜ ಬದಲಾವಣೆ ಕೆಲಸ ಮಾಡುತ್ತಿದೆ.

ಸರ್ಕಾರಕ್ಕೆ ವೇದಿಕೆಯ ಬೇಡಿಕೆಗಳು:

1. ಕನ್ನಡದಲ್ಲಿ ಲಿಂಗತ್ವ ಅಲ್ಪಸಂಖ್ಯಾತರೆಂದು (ಜೆಂಡರ್ ಮೈನಾರ್ಟಿಸ್) ಹಾಗೂ ಇಂಗ್ಲಿಷ್‌ನಲ್ಲಿ ಟ್ರಾನ್ಸ್ ಜೆಂಡರ್ ಎಂದು ಬಳಸಬೇಕು.
2. ಮುಂಬರುವ ಅಧಿವೇಶನದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ 20 ಕೋಟಿ ರುಪಾಯಿಗಳನ್ನು ಮೀಸಲಿಡಬೇಕು.

English summary
Karnataka transgender's forum has expressed delightness for inclusion of them in India Census 2011. Forum had called a press conference in Bangalore to share their views and put forth their demands to the govt of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X