ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅದಿರು ರಫ್ತು ನಿಷೇಧ ತೆರವಿಗೆ ಸು.ಕೋರ್ಟ್ ಆದೇಶ

By Prasad
|
Google Oneindia Kannada News

Supreme Court of India
ನವದೆಹಲಿ, ಫೆ. 11 : ಕರ್ನಾಟಕದ ಪ್ರಮುಖ ಬಂದರುಗಳಲ್ಲಿ ಕೊಳೆಯುತ್ತ ಬಿದ್ದಿರುವ ಕಬ್ಬಿಣ ಅದಿರಿನ ರಫ್ತಿಗೆ ದಾರಿ ಸುಗಮ ಮಾಡಿಕೊಡಬೇಕೆಂದು ರಾಜ್ಯ ಸರಕಾರಕ್ಕೆ ಸರ್ವೋಚ್ಚ ನ್ಯಾಯಾಲಯಕ ಶುಕ್ರವಾರ ನಿರ್ದೇಶಿಸಿದೆ.

ನ್ಯಾಯಮೂರ್ತಿ ಆರ್.ವಿ. ರವೀಂದ್ರನ್ ಮತ್ತು ನ್ಯಾ. ಎ.ಕೆ. ಪಟ್ನಾಯಕ್ ಅವರಿದ್ದ ವಿಭಾಗೀಯ ಪೀಠ, ಮಾರ್ಚ್ 31ರೊಳಗಾಗಿ ಅಕ್ರಮ ಗಣಿಗಾರಿಕೆ ತಡೆಗಟ್ಟಲು ಸೂಕ್ತ ಕಾನೂನನ್ನು ರೂಪಿಸಬೇಕೆಂದೂ ರಾಜ್ಯ ಸರಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ಮಾರ್ಚ್ ಅಂತ್ಯದೊಳಗಡೆ ಅಕ್ರಮ ಗಣಿಗಾರಿಕೆ ತಡೆಗಟ್ಟಲು ಕಾಯ್ದೆ ತರದಿದ್ದರೆ ಗಣಿಗಾರಿಕೆ ನಡೆಸುತ್ತಿರುವ ಸಂಸ್ಥೆಗಳು ಮಧ್ಯಂತರ ಪರಿಹಾರಕ್ಕೆ ಅರ್ಹರಾಗಿರುತ್ತಾರೆ ಎಂದೂ ಹೇಳಿದ್ದು, ರಫ್ತು ನಿಷೇಧದಿಂದ ಆತಂಕಕ್ಕೀಡಾಗಿದ್ದ ಗಣಿ ಮಾಲಿಕರಿಗೆ ತಾತ್ಕಾಲಿಕ ಜಯ ದೊರೆತಂತಾಗಿದೆ.

ಕರ್ನಾಟಕದಲ್ಲಿ ಗಣಿಗಾರಿಕೆಗೆ ಸಂಬಂಧಿಸಿದಂತೆ ಪಕ್ಷಾತೀತವಾಗಿ ಆರೋಪಗಳು ಬರಲು ಪ್ರಾರಂಭಿಸಿದ ಮೇಲೆ, ಜುಲೈ 10, 2010ರಂದು ರಾಜ್ಯದ 10 ಪ್ರಮುಖ ಬಂದಿರುಗಳಲ್ಲಿ ಅದಿರು ರಫ್ತು ನಿಷೇಧ ಹೇರಿ ಕರ್ನಾಟಕ ಸರಕಾರ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಗಣಿ ಮಾಲಿಕರು ನ್ಯಾಯಾಲಯದ ಕದವನ್ನು ಬಡಿದಿದ್ದರು.

ಪ್ರಮುಖವಾಗಿ ಕಾರವಾರ ಮತ್ತು ಬೇಲೇಕೇರಿ ಬಂದರುಗಳ ಪಟ್ಟಿಯಲ್ಲಿ ಸೇರಿವೆ. ಉಳಿದಂತೆ ತದಡಿ, ಭಟ್ಕಳ, ಮಲ್ಪೆ, ಹಳೆ ಮಂಗಳೂರು ಹೊನ್ನಾವರ, ಕುಂದಾಪುರ, ಹಂಗಾರಕಟ್ಟೆ, ಪಡುಬಿದ್ರಿ ಬಂದರುಗಳಿಂದ ಸಹ ಅದಿರು ರಫ್ತು ನಿಷೇಧಿಸಲಾಗಿದೆ.

English summary
Supreme court of India has directed Karnataka Government to allow export of iron ore, which is piled up in 10 major ports in Karnataka. Karnataka govt had banned export of iron in order to check illegal mining.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X