ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಹಿರಂಗ ಚುಂಬನಕ್ಕೆ ಶ್ರೀರಾಮಸೇನೆ ನಕಾರ

By Mahesh
|
Google Oneindia Kannada News

ನವದೆಹಲಿ, ಫೆ.10: ಪ್ರೇಮಿಗಳ ದಿನದಂದು ಶ್ರೀರಾಮ ಸೇನೆ ಶಾಂತಿ ಕದಡುವ ಯಾವುದೇ ಕಾರ್ಯ ಕೈಗೊಳ್ಳುತ್ತಿಲ್ಲ. ಹಾಗಂತ, ಸೇನೆ ಶಸ್ತ್ರತ್ಯಾಗ ಮಾಡುತ್ತಿಲ್ಲ. ಪ್ರೇಮಿಗಳ ಮೇಲೆ ದಾಳಿ ಮಾಡುವ ಬದಲು, ಸಾರ್ವಜನಿಕವಾಗಿ ಮುತ್ತಿಡುವುದು, ಅಪ್ಪಿಕೊಳ್ಳುವುದು ಮುಂತಾದ ಕ್ರಿಯೆಗಳಲ್ಲಿ ತೊಡಗಿದ್ದರೆ ವಿಡಿಯೋ, ಫೋಟೋ ತೆಗೆದು ಸಾರ್ವಜನಿಕ ವೀಕ್ಷಣೆಗಾಗಿ ಯೂಟ್ಯೂಬ್ ಗೆ ಹಾಕಲಾಗುತ್ತದೆ ಎಂದು ರಾಮ ಸೇನೆ ವಕ್ತಾರರು ಹೇಳಿದ್ದಾರೆ.

ಹಾಗಾಗಿ ವ್ಯಾಲೈಂಟೇನ್ ಡೇ ದಿನದಂದು ಪ್ರೇಮಿಗಳು ತಮ್ಮ ಭಾವನೆಗಳನ್ನು ಅದುಮಿಟ್ಟುಕೊಂಡು ಅಡ್ಡಾಡುವುದೇ ಒಳ್ಳೆಯದು. ಶ್ರೀರಾಮಸೇನೆ ದೆಹಲಿ ಘಟಕ ಇಂದಿನಿಂದಲೇ ಎಲ್ಲೆಡೆ ಸಂಚರಿಸತೊಡಗಿದ್ದು, ಸಾರ್ವಜನಿಕವಾಗಿ ಚುಂಬನಕ್ರಿಯೆಯಲ್ಲಿ ತೊಡಗುವ ಪ್ರೇಮಿಗಳ ಮೇಲೆ ಹದ್ದಿನ ಕಣ್ಣು ಇಡಲಿದೆ ಎಂದು ಮಿಡ್ ಡೇ ವರದಿ ಮಾಡಿದೆ.

ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸಿ, ಪ್ರೇಮಿಗಳ ದಿನಾಚರಣೆ ಕೈಬಿಡಿ ಎಂಬ ವಿಷಯದ ಬಗ್ಗೆ ಮೂರು ದಿನಗಳ ಜಾಗೃತಿ ಸಮಾವೇಶವನ್ನು ದೆಹಲಿ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ. ಮೂರು ದಿನಗಳ ಪ್ರೆಮೋಖ್ಯಾನ ಉಪನ್ಯಾಸ ಕೇಳಿ ಕೂಡಾ ಪ್ರೇಮಿಗಳು ಪಾರ್ಕ್, ಪಬ್, ಹೋಟೆಲ್, ರಸ್ತೆಗಳಲ್ಲಿ ಪ್ರೀತಿಯ ಚೇಷ್ಟೆ ಆರಂಭಿಸಿದರೆ ಸೇನೆ ಕಾರ್ಯಕರ್ತರು ಕೆಮೆರಾ ಮೂಲಕ ಪ್ರೇಮಿಗಳ ಬಹಿರಂಗ ಸರಸವನ್ನು ಸೆರೆ ಹಿಡಿಯುತ್ತಾರೆ. ಸಾಮಾನ್ಯ ಕೆಮೆರಾ ಜೊತೆಗೆ ಗುಪ್ತವಾದ ಮತ್ತೊಂದು ಕೆಮೆರಾ ಹೊತ್ತ ಪಡೆ ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುತ್ತದೆ ಎಂದು ಶ್ರೀರಾಮಸೇನೆಯ ವಕ್ತಾರರು ಹೇಳಿದ್ದಾರೆ.

ಪ್ರೀತಿಗೆ ಅಡ್ಡಿಪಡಿಸುವುದಿಲ್ಲ.. ಆದರೆ?:

English summary
Sunil Tyagi the chief of Sri Rama Sene New Delhi unit has warned against kissing in public places in the wake of Valentimness day. The sene is not against kissing as such but engaging in love making in public will harm Indian culture and tradition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X