ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಿತಾ ರೆಡ್ಡಿಗೆ ನಮ್ಮ ಬೆಂಗಳೂರು 2010 ಪ್ರಶಸ್ತಿ

By Mahesh
|
Google Oneindia Kannada News

Anita Reddy bags Namma Bengaluru award
ಬೆಂಗಳೂರು, ಫೆ.10: ಸಮಾಜ ಸೇವಕಿ, ಪದ್ಮಶ್ರೀ ಅನಿತಾ ರೆಡ್ಡಿ ಅವರು 2009-10ನೇ ಸಾಲಿನ "ನಮ್ಮ ಬೆಂಗಳೂರು ವರ್ಷದ ವ್ಯಕ್ತಿ" ಗೌರವಕ್ಕೆ ಪಾತ್ರರಾಗಿದ್ದಾರೆ. ಬುಧವಾರ ಸಂಜೆ ಬೆಂಗಳೂರಿನಲ್ಲಿ ಜರುಗಿದ ಸಮಾರಂಭದಲ್ಲಿ ಅವರಿಗೆ ಮತ್ತು ಇನ್ನಿತರ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ತೀರ್ಪುಗಾರರ ಪರವಾಗಿ ಮಾತನಾಡಿದ ನಮ್ಮ ಬೆಂಗಳೂರು ಪ್ರತಿಷ್ಠಾನದ ಅಧ್ಯಕ್ಷ, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ' ಪ್ರಶಸ್ತಿಗಳಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ನಗರದ ಬೆಳವಣಿಗೆಗೆ ಇನ್ನಷ್ಟು ಕೊಡುಗೆ ನೀಡುವಂತೆ ಪ್ರೇರೇಪಿಸುವ ನಿಟ್ಟಿನಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ' ಎಂದರು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ 10 ಸಾವಿರಕ್ಕೂ ಹೆಚ್ಚು ವ್ಯಕ್ತಿಗಳಲ್ಲಿ ಅಂತಿಮವಾಗಿ 10 ಮಂದಿಯನ್ನು ಆಯ್ಕೆ ಮಾಡಿ ಗೌರವಿಸಲಾಗಿದೆ.

ಚುನಾಯಿತ ಜನಪ್ರತಿನಿಧಿ ವಿಭಾಗದಲ್ಲಿ ನಮ್ಮ ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ವಿಜಯಕುಮಾರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬಿಬಿಎಂಪಿ ಆಯುಕ್ತ ಎಚ್ ಸಿದ್ದಯ್ಯ, ದರ್ಶಿನಿ ಹೋಟೆಲ್ ಸಮೂಹದ ಒಡೆಯ ವಾಸುದೇವ ಅಡಿಗ, ಅನಾಥ ಶವರಕ್ಷಕ ಟಿ.ರಾಜಾ ಮೊದಲಾದವರಿಗೆ ಈ ಪ್ರಶಸ್ತಿ ಸಂದಿದೆ.

ಪ್ರಶಸ್ತಿ ಪಡೆದವರ ಪಟ್ಟಿ:
* ಸಾರ್ವಜನಿಕ ವ್ಯಕ್ತಿ : ಸಿದ್ದಯ್ಯ
* ಜನ ಪ್ರತಿನಿಧಿ: ಬಿ.ಎನ್ ವಿಜಯಕುಮಾರ್
* ಸಾರ್ವಜನಿಕ ಸಂಸ್ಥೆ: ಬಿಎಂಟಿಸಿ
* ಖಾಸಗಿ ಸಂಸ್ಥೆ : ಚಿಲ್ಡ್ರನ್ ಮೂವ್ ಮೆಂಟ್ ಫಾರ್ ಸಿವಿಕ್ ಅವೇರ್ ನೆಸ್ (CMCA)
* ಖಾಸಗಿ ವ್ಯಕ್ತಿಗಳು : ಡಾ. ರಾಧಾ ಎಸ್ ಮೂರ್ತಿ ಮತ್ತು ಟಿ. ರಾಜಾ
* ಕ್ರೀಡಾಪಟು : ವಿಜಯ್ ರಾವ್ ಶಿಂಧೆ ಮತ್ತು ಅನುಪಮಾ ಪಚಿಮಂಡ
* ಉದ್ಯಮಿ: ವಾಸುದೇವ ಅಡಿಗ

ವರ್ಷದ ಬೆಂಗಳೂರಿಗ ಪ್ರಶಸ್ತಿ : ಶ್ರೀಮತಿ ಅನಿತಾ ರೆಡ್ಡಿ, AVAS ಟ್ರಸ್ಟ್ ಸ್ಥಾಪಕಿ, ಕೊಳಗೇರಿ ನಿವಾಸಿಗಳನ್ನು ಸುಶಿಕ್ಷಿತರನ್ನಾಗಿಸುವ ನಿಟ್ಟಿನಲ್ಲಿ ಮಹತ್ವದ ಕೊಡುಗೆ.

ನಮ್ಮ ಬೆಂಗಳೂರು ಪ್ರಶಸ್ತಿ : ವಿದ್ಯಾರ್ಥಿಗಳು, ಕ್ರೀಡಾಪಟುಗಳು, ಉದ್ಯಮಿಗಳು, ಸ್ವಯಂ ಸೇವಾ ಸಂಘಗಳು, ಎನ್ ಜಿಒಗಳು ಹೀಗೆ ವಿವಿಧ ಕ್ಷೇತ್ರಗಳಲ್ಲಿ ಅಸಾಮಾನ್ಯ ಸಾಧನೆ ತೋರಿರುವ ಜನ ಸಮಾನ್ಯರನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತದೆ. ನಾಗರೀಕರೇ ಮತ ನೀಡುವ ಮೂಲಕ ವಿಜೇತರನ್ನು ಆಯ್ಕೆ ಮಾಡುವ ಈ ಪ್ರಶಸ್ತಿ ಇಡೀ ದೇಶದಲ್ಲೇ ವಿಶಿಷ್ಟವಾಗಿದೆ. ಈ ಬಾರಿ ಸುಮಾರು 8 ವಿಭಾಗಗಳಿಗೆ 10 ಸಾವಿರಕ್ಕೂ ಹೆಚ್ಚು ನಾಮನಿರ್ದೇಶನಗಳನ್ನು ಸ್ವೀಕರಿಸಲಾಗಿತ್ತು.

ತೀರ್ಪುಗಾರರು: ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಸಂಸದ ರಾಜೀವ್ ಚಂದ್ರಶೇಖರ್, ಅನಿಲ್ ಕುಂಬ್ಳೆ, ತೇಜಸ್ವಿನಿ ಅನಂತಕುಮಾರ್, ಪ್ರಕಾಶ್ ಬೆಳವಾಡಿ, ಜಿ.ಎಸ್ ಸಿದ್ದಲಿಂಗಯ್ಯ ನಿವೃತ್ತ ಐಎಎಸ್ ಅಧಿಕಾರಿ ಡಾ. ಎ ರವೀಂದ್ರ ಸೇರಿದಂತೆ 23 ಜನ ಗಣ್ಯರು ಸಮಿತಿಯಲ್ಲಿದ್ದಾರೆ.

English summary
Social worker Padma Shri Awardee Ms.Anita Reddy, BBMP Commissioner H.Siddaiah, Vasudeva Adiga the pioneer of darshini hotels and T. Raja (Auto Raja) are among the 10 proud winners of Namma Bengaluru Awards, 2010. Namma Bengaluru Foundation and Member of Parliament & Chairman of the Jury Mr. Rajeev Chandrasekhar and Lokayukta Santosh Hegde presented award to the winners.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X