ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಳ್ಳಾರಿ ಜಿಲ್ಲಾಧಿಕಾರಿ ಶಿವಪ್ಪ ದಿಢೀರ್ ವರ್ಗಾವಣೆ

By Rohini Bellary
|
Google Oneindia Kannada News

Bellary DC B Shivappa
ಬಳ್ಳಾರಿ, ಫೆ. 9: ಬಳ್ಳಾರಿ ಜಿಲ್ಲಾಧಿಕಾರಿ ಬಿ. ಶಿವಪ್ಪ ಅವರು ದಿಢೀರನೆ ವರ್ಗಾವಣೆ ಆಗಿದ್ದು, ಇವರ ವರ್ಗಾವಣೆ ಆದೇಶವನ್ನು ಇ-ಮೇಲ್ ಮೂಲಕ ರವಾನೆ ಆಗಿದೆ. ಚಿತ್ರದುರ್ಗ ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಇಲ್ಲಿಗೆ ವರ್ಗವಾಗಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಮೂಲಗಳು ಈ ವಿಷಯ ದೃಢಪಡಿಸಿದ್ದು, ಬಿ. ಶಿವಪ್ಪ ಅವರಿಗೆ ಹೊಸ ಹುದ್ದೆಯನ್ನು ತೋರಿಸಿಲ್ಲ.

ಬಿ. ಶಿವಪ್ಪ ಅವರು ಅಕ್ಟೋಬರ್ 2011 ರ ಕೊನೆಯಲ್ಲಿ ಸೇವೆಯಿಂದ ನಿವೃತ್ತಿ ಹೊಂದಲಿದ್ದರು. ಇವರು ಸಚಿವ ಬಿ. ಜನಾರ್ದನರೆಡ್ಡಿ ಅವರ ವಿಶ್ವಾಸರ್ಹ ಅಧಿಕಾರಿ ಎಂದೇ ಗುರುತಿಸಿಕೊಂಡಿದ್ದರು. ಆದರೆ, ಸಂಸದೆ ಜೆ. ಶಾಂತ ಅವರ ಆಯ್ಕೆಯ ಹಿನ್ನಲೆಯಲ್ಲಿ ಹೈಕೋರ್ಟ್‌ನಿಂದ ತೀವ್ರ ತರಾಟೆಗೆ ಗುರಿ ಆಗಿದ್ದರು.

ಇವರು 2 ಬಾರಿ ವರ್ಗ ಆಗಿದ್ದಾಗ ಜಿ. ಜನಾರ್ದನರೆಡ್ಡಿ ಅವರೇ ಪ್ರತಿಷ್ಠೆಯಾಗಿ ಪರಿಗಣಿಗಿಸಿ ವರ್ಗಾವಣೆಯನ್ನು ರದ್ದುಗೊಳಿಸುವಲ್ಲಿ ಯಶಸ್ವಿ ಆಗಿದ್ದರು. ಬಿ. ಶಿವಪ್ಪ ಅವರು ಜುಲೈ 17, 2008 ರಂದು ಬಳ್ಳಾರಿ ಡಿಸಿ ಆಗಿ ಅಧಿಕಾರ ಸ್ವೀಕರಿಸಿದ್ದರು.

English summary
Bellary District Commissioner B Shivappa has been transferred and Chitradurga DC AA Biswas has been appointed as Bellary DC. B Shivappa is known as close aid of minister Janardhan Reddy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X