ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಕೆಟ್ ಗೆ ಸೌರವ್ ಗಂಗೂಲಿ 'ಅಲ್ವಿದಾ'

By Mahesh
|
Google Oneindia Kannada News

Sourav Ganguly retires
ಕೊಲ್ಕತ್ತಾ ಫೆ 8 : ಭಾರತ ಕ್ರಿಕೆಟ್‌ ಕಂಡ ಅತ್ಯಂತ ಯಶಸ್ವಿ ನಾಯಕ ಸೌರವ್‌ ಗಂಗೂಲಿ ಎಲ್ಲ ಬಗೆಯ ಕ್ರಿಕೆಟ್ ಪ್ರಕಾರದಿಂದ ನಿವೃತ್ತಿ ಹೊಂದುವ ನಿರ್ಧಾರ ಪ್ರಕಟಿಸಿದ್ದಾರೆ. ಗಂಗೂಲಿ ಅವರನ್ನು ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದ ಐಪಿಎಲ್‌ ಆಟಗಾರರ ಹರಾಜಿನ ವೇಳೆ ಯಾವುದೇ ಫ್ರಾಂಚೈಸಿಗಳು ಕೊಂಡಿರಲಿಲ್ಲ. ಈ ಅವಮಾನವನ್ನು ಸಹಿಸಿಕೊಂಡಿದ್ದ ಗಂಗೂಲಿ, ಕೊಚ್ಚಿ ತಂಡವನ್ನು ಸೇರುವ ಸಾಧ್ಯತೆಯಿತ್ತು. ಆದರೆ, ಯಾವ ತಂಡದಿಂದಲೂ ಕರೆ ಬರದಿದ್ದಾಗ, ಮನಸ್ಸಿಲ್ಲದ ಮನಸ್ಸಿನಿಂದ ಪರೋಕ್ಷವಾಗಿ ತಮ್ಮ ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಐಪಿಎಲ್ ಬಿಡ್ ಸಮಯದಲ್ಲಿ ಹರಾಜಾಗದಿದ್ದ ಗಂಗೂಲಿ ಅವರನ್ನು ಟೀಮ್‌ ಕೊಚ್ಚಿ ತಂಡ ಖರೀದಿಸಲು ಮುಂದಾಗಿತ್ತು. ಆದರೆ ಈ ಪ್ರಕ್ರಿಯೆಗೆ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಸೇರಿದಂತೆ ಹಲವು ಫ್ರಾಂಚೈಸಿಗಳು ವಿರೋಧ ವ್ಯಕ್ತಪಡಿಸಿದ್ದವು. ಹಾಗಾಗಿ ಐಪಿಎಲ್‌ ಆಡಳಿತ ಮಂಡಳಿ ಗಂಗೂಲಿ ಮರು ಸೇರ್ಪಡೆಗೆ ಒಪ್ಪಿಗೆ ನೀಡಿರಲಿಲ್ಲ. ಐಪಿಎಲ್‌ನಲ್ಲಿ ಆಡುತ್ತೇನೆ ಎನ್ನುವ ನಿರೀಕ್ಷೆಗಳು ಹುಸಿಯಾದವು. ಆದ್ದರಿಂದ ದೇಶದಲ್ಲಿ ನಡೆಯುವ ಇತರ ಟೂರ್ನಿಗಳಲ್ಲಿ ಆಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಗಂಗೂಲಿ ಹೇಳಿದ್ದಾರೆ.

1996ರಲ್ಲಿ ಕ್ರಿಕೆಟ್‌ನ ಕಾಶಿ ಎಂದೇ ಹೆಸರಾದ ಇಂಗ್ಲೆಂಡಿನ ಲಾರ್ಡ್ಸ್‌ ಮೈದಾನದಲ್ಲಿ ತಮ್ಮ ಮೊಟ್ಟಮೊದಲ ಟೆಸ್ಟ್‌ ಪಂದ್ಯದಲ್ಲಿಯೇ ಶತಕ ಗಳಿಸುವ ಮೂಲಕ ತಮ್ಮ ವೃತ್ತಿ ಜೀವನವನ್ನು ಭರ್ಜರಿಯಾಗಿ ಗಂಗೂಲಿ ಪ್ರಾರಂಭಿಸಿದ್ದರು. ಮ್ಯಾಚ್‌ ಫಿಕ್ಸಿಂಗ್‌ ಹಗರಣದ ನಂತರ 2000ದಲ್ಲಿ ತಂಡದ ನಾಯಕತ್ವ ವಹಿಸಿಕೊಂಡ ಗಂಗೂಲಿ ಭಾರತ ಕಂಡ ಅತ್ಯಂತ ಯಶಸ್ವಿ ನಾಯಕ. ಗಂಗೂಲಿ ನಾಯಕರಾಗಿದ್ದ 49 ಟೆಸ್ಟ್‌ ಪಂದ್ಯಗಳಲ್ಲಿ ಭಾರತ 21 ಟೆಸ್ಟ್‌ಗಳಲ್ಲಿ ಜಯಗಳಿಸಿತ್ತು.

ವಿಡಿಯೋ:ಕ್ರಿಕೆಟ್ ಜಗತ್ತಿನ ದಾದಾ ವಿದಾಯ

100 ಟೆಸ್ಟ್‌ ಪಂದ್ಯಗಳನ್ನು ಆಡಿರುವ ಗಂಗೂಲಿ ಭಾರತದ ಏಳನೇ ಆಟಗಾರ. ಅಲ್ಲದೆ 300ಕ್ಕೂ ಹೆಚ್ಚಿನ ಏಕದಿನ ಪಂದ್ಯಗಳನ್ನು ಆಡಿ 10,000ಕ್ಕೂ ಹೆಚ್ಚಿನ ರನ್‌ ಗಳಿಸಿದ್ದಾರೆ. ತಂಡಕ್ಕೆ ಸ್ಫೂರ್ತಿ ನೀಡುವುದರಲ್ಲಿ ಹೆಚ್ಚಿನ ಗಮನ ವಹಿಸಿದ್ದ ಗಂಗೂಲಿ ಏಕದಿನದಲ್ಲಿ ಸಚಿನ್‌ ಜೊತೆ ಅತ್ಯಂತ ಹೆಚ್ಚಿನ ಶತಕದ ಜೊತೆಯಾಟ ಆಡಿದ ದಾಖಲೆಯನ್ನು ಹೊಂದಿದ್ದಾರೆ.

ಪ್ರಿನ್ಸ್ ಆಫ್ ಕೋಲ್ಕತ್ತಾಗೆ ಏನಾಯಿತು?: 07 .10 .2008 ರಂದು ಗಂಗೂಲಿ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸಿದ್ದರು. ಕಳೆದ ಮೂರು ಐಪಿಎಲ್ ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಪರವಾಗಿ ಆಡಿದ್ದ ದಾದಾ ಅವರನ್ನು ಈ ಸಲ ಶಾರೂಖ್ ಖಾನ್ ನೇತೃತ್ವದ ನೈಟ್ ರೈಡರ್ಸ್ ಸಹಾ ಕೈಬಿಟ್ಟಿತ್ತು.

ತನ್ನ ನಾಯಕತ್ವದ ಅವಧಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಗೆಲುವು ದಾಖಲಿಸಿದ್ದು, ಇಂಗ್ಲೆಂಡ್‌ನಲ್ಲಿ ನಡೆದ ನ್ಯಾಟ್‌ವೆಸ್ಟ್ ಏಕದಿನ ತ್ರಿಕೋನ ಸರಣಿಯಲ್ಲಿ ಗೆಲುವು ಸಾಧಿಸಿದ ಬಳಿಕ ಲಾರ್ಡ್ಸ್‌ನ ಡ್ರೆಸಿಂಗ್ ರೂಂನಲ್ಲಿ ತನ್ನ ಶರ್ಟು ಬಿಚ್ಚಿ ಗಾಳಿಯಲ್ಲಿ ತಿರುಗಿಸಿದ್ದು, 2003ರ ಏಕದಿನ ವಿಶ್ವಕಪ್‌ನಲ್ಲಿ ಭಾರತವನ್ನು ಫೈನಲ್‌ಗೇರಿಸಿದ್ದು, ಆ ಬಳಿಕ ಕೋಚ್ ಗ್ರೆಗ್ ಚಾಪೆಲ್ ಜೊತೆಗೆ ಬಾಂಧವ್ಯದಲ್ಲಿ ಬಿರುಕು ಸೃಷ್ಟಿ ಮಾಡಿಕೊಂಡಿದ್ದು ಗಂಗೂಲಿ ಕ್ರಿಕೆಟ್ ಜೀವನದ ಪ್ರಮುಖ ಹಂತಗಳೆನಿಸಿದೆ.

English summary
Sourav Ganguly on Monday announced his retirement from all forms of cricket. He has taken decision after IPL franchises reluctant to pick him for the team. Ganguly already retired from international cricket in 2008.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X