ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಲಪ್ಪ ರೇಪ್ ಪ್ರಕರಣ ಸಿಬಿಐ ತನಿಖೆಗೆ?

By Mahesh
|
Google Oneindia Kannada News

CBI to Investigate Haratal Halappa case?
ಬೆಂಗಳೂರು, ಫೆ.8: ಮಾಜಿ ಸಚಿವ ಹರತಾಳು ಹಾಲಪ್ಪ ಅತ್ಯಾಚಾರ ಪ್ರಕರಣ ಮಹತ್ವದ ತಿರುವು ಪಡೆದುಕೊಳ್ಳುವ ಎಲ್ಲಾ ಸಾಧ್ಯತೆಗಳು ಕಂಡು ಬಂದಿದೆ. ಇಡೀ ಪ್ರಕರಣದ ತನಿಖೆಯನ್ನು ಸಿಐಡಿ ಬದಲು ಸಿಬಿಐನ ವಿಚಾರಣೆಗೆ ಒಳಪಡಿಸಬೇಕೆಂದು ಕೋರಿ ರಾಜ್ಯ ಮಾನವ ಹಕ್ಕುಗಳ ಆಯೋಗ ಹೈಕೋರ್ಟ್ ಗೆ ಮೊರೆ ಹೋಗಿದೆ. ಹಾಲಪ್ಪ ನಿರ್ದೋಷಿಯಾದರೆ ಸಿಬಿಐ ತನಿಖೆಗೆ ಯಾಕೆ ಹೆದರಬೇಕು ಎಂದು ಪ್ರಶ್ನಿಸಿರುವ ಮುಖ್ಯ ನ್ಯಾಯಮೂರ್ತಿ ಜೆ.ಎಸ್ ಖೇಹರ್ ಅವರಿರುವ ವಿಚಾರಣಾ ಪೀಠ, ಸಿಬಿಐಗೆ ಕೇಸ್ ವಹಿಸುವ ಸಾಧ್ಯತೆಯಿದೆ.

ನಿಷ್ಪಕ್ಷಪಾತವಾದ ತನಿಖೆಯನ್ನು ಸಿಐಡಿಯಿಂದ ನಿರೀಕ್ಷಿಸುವುದು ಸಾಧ್ಯವಿಲ್ಲ ಎಂದು ಚಂದ್ರಾವತಿ ವೆಂಕಟೇಶ್ ಮೂರ್ತಿ ದಂಪತಿಗಳು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಮನವಿ ಸಲ್ಲಿಸಿದ್ದರು. ನಂತರ ಈ ಬಗ್ಗೆ ಹೈಕೋರ್ಟ್ ಗೆ ಅರ್ಜಿ ಹಾಕಲಾಗಿತ್ತು. ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸದಂತೆ ಮನವಿ ಮಾಡಿದೆ. ಮುಂದಿನ ವಿಚಾರಣೆಯನ್ನು ಮಾರ್ಚ್ 8ಕ್ಕೆ ಮುಂದೂಡಲಾಗಿದೆ.

ಕೇಸ್ ಹಿಸ್ಟರಿ:
ವೆಂಕಟೇಶಮೂರ್ತಿ ಮತ್ತು ಚಂದ್ರಾವತಿ ದಂಪತಿಗಳ ಮನೆಗೆ ಭೋಜನಕ್ಕಾಗಿ ಬಂದಿದ್ದ ಮಾಜಿ ಸಚಿವ ಹರತಾಳು ಹಾಲಪ್ಪ, ನಡುರಾತ್ರಿಯಲ್ಲಿ ವೆಂಕಟೇಶಮೂರ್ತಿ ಅವರನ್ನು ಮಾತ್ರೆ ತರಲು ಗೆಸ್ಟ್ ಹೌಸ್ ಗೆ ಕಳಿಸಿ ಅವರ ಪತ್ನಿ ಚಂದ್ರಾವತಿ ಮೇಲೆ ಅತ್ಯಾಚಾರ ನಡೆಸಿದ್ದರು ಎನ್ನುವುದು ಹಾಲಪ್ಪ ಅವರ ಮೇಲಿರುವ ಗಂಭೀರ ಆರೋಪ. ಇದೇ ಕಾರಣ ಅವರು ತಮ್ಮ ಮಂತ್ರಿ ಪದವಿಯನ್ನು ಕಳೆದುಕೊಂಡಿದ್ದರು.

ನಂತರ ಹಲವು ವಲಯಗಳಿಂದ ತೀವ್ರ ಒತ್ತಡ ಬಂದ ನಂತರ ಮುಖ್ಯಮಂತ್ರಿ ಯಡಿಯೂರಪ್ಪಅವರು ಹಾಲಪ್ಪ ಅತ್ಯಾಚಾರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದ್ದರು. ಇತ್ತ ಹಾಲಪ್ಪ ಅನಾರೋಗ್ಯದ ನೆಪವೊಡ್ಡಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಜಂಪ್ ಮಾಡುತ್ತಾ ಜೈಲುವಾಸ ತಪ್ಪಿಸಿಕೊಂಡು ಹೈಕೋರ್ಟ್ ನಿಂದ ಜಾಮೀನು ಪಡೆದು ಊರು ಸೇರಿದ್ದರು.

ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರ ಮಾಜಿ ಕಾರ್ಯದರ್ಶಿ ಹುಲ್ತಿಕೊಪ್ಪ ಶ್ರೀಧರ್ ಈ ಸಂಚಿನಲ್ಲಿ ಭಾಗಿಯಾಗಿದ್ದಾರೆಂದು ಶಂಕಿಸಿ ಸಿಐಡಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಅದು ಬಿಟ್ಟರೆ ಸಿಐಡಿಯಿಂದಾಗಲಿ, ಹಾಲಪ್ಪ ಹಾಗೂ ಅವರ ಬೆಂಬಲಿಗರ ಕಡೆಯಿಂದ ಯಾವುದೇ ಬಿಸಿ ಬಿಸಿ ಸುದ್ದಿ ಹೊರಬಂದಿರಲಿಲ್ಲ.

English summary
Karnataka Human Rights Commission has submitted a plea to High Court requesting to hand over Halappa Sex Scandal case to Central Bureau of Investigation. Earlier rape victim Chandravati Venkateshmurthy has requested HRC Karnataka that she is not satisfied with CID investigation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X