ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸವಣೂರಲ್ಲಿ ಅಪರೂಪದ ಮಹಿಳಾ ರಥೋತ್ಸವ

By Prasad
|
Google Oneindia Kannada News

Parvati rathotsava by women in Savanur
ಸವಣೂರ, ಫೆ. 08 : ಕೇವಲ ಮಹಿಳೆಯರಿಂದಲೇ ಜರುಗುವ, ಬಡವ-ಬಲ್ಲಿದ, ಉಚ್ಚ-ನೀಚವೆಂಬ ಭೇದಭಾವನೆಗಳಿಂದ ಸಂಪೂರ್ಣವಾಗಿ ಮುಕ್ತವಾದ ಪಾರ್ವತಿ ದೇವಿಯ ರಥೋತ್ಸವ ಕಾರ್ಯಕ್ರಮವನ್ನು ಸವಣೂರ ತಾಲೂಕಿನ ಮಂತ್ರವಾಡಿ (ಮಂತ್ರೋಡಿ) ಗ್ರಾಮದಲ್ಲಿ ವೈಭವಪೂರ್ಣವಾಗಿ ಕೈಗೊಳ್ಳಲಾಯಿತು.

ಸ್ತ್ರೀ ಸಮಾನತೆಯ ಆಶಯಗಳನ್ನು ಸಮರ್ಥವಾಗಿ ಪ್ರತಿಬಿಂಬಿಸುವ ಈ ಮಹಿಳಾ ರಥೋತ್ಸವದಲ್ಲಿ ಕೇವಲ ಮಹಿಳೆಯರೇ ಪಾರ್ವತಿ ದೇವಿಯ ಬೃಹತ್ ತೇರನ್ನು ಎಳೆಯುವ ಸಾರಥ್ಯ ವಹಿಸುತ್ತಿದ್ದು, ಮಂತ್ರವಾಡಿಯ ಯೋಗಿಗಳಾಗಿದ್ದ ಲಿಂ. ಕೆಂಜಡೇಶ್ವರ ಶಿವಾಚಾರ್ಯರ ಕಾಲದಿಂದ ಈ ನಿಯಮವನ್ನು ಪ್ರತಿ ವರ್ಷವೂ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ರಾಜ್ಯದಲ್ಲಿಯೇ ಅತ್ಯಂತ ಅಪರೂಪದ ಈ ರಥೋತ್ಸವ ಈ ವರ್ಷವೂ ನಿವಿಘ್ನವಾಗಿ ನೆರವೇರಿತು.

ಸುಕ್ಷೇತ್ರವಾದ ಮಂತ್ರವಾಡಿಯ ಶ್ರೀ ರೇವಣಸ್ದಿದೇಶ್ವರ ಬೆಟ್ಟದ ತುದಿಯಿಂದ ಕೆಳಗಿರುವ ಪಾದಗಟ್ಟಿಯವರೆಗೆ ಬಳಿಕ ಪುನಃ ಪಾದಗಟ್ಟಿಯಿಂದ ಬೆಟ್ಟದ ತುದಿಯವರೆಗೆ ಪಾರ್ವತಿ ದೇವಿಯ ಅಲಂಕೃತ ತೇರನ್ನು ಎಳೆಯುವ ನೂರಾರು ಮಹಿಳೆಯರು, ನಿರಂತರವಾದ ಜಯಕಾರಗಳೊಂದಿಗೆ ಸಂಭ್ರಮಿಸಿದರು.

ಬೆಂಗಳೂರು ಸಮ್ಮೇಳನದಲ್ಲಿ ಮಹಿಳೆಯರ ದರ್ಬಾರು

ಧ್ವಜ, ತಳಿರು ತೋರಣ, ಹೂಗಳಿಂದ ಅಲಂಕೃತವಾಗಿದ್ದ ಪಾರ್ವತಿ ದೇವಿಯ ರಥೋತ್ಸವವನ್ನು ಈ ವರ್ಷವೂ ವೈಭವಪೂರ್ಣವಾದ ಕೈಗೊಳ್ಳಲಾಗಿದ್ದು, ಇದಕ್ಕೂ ಮೊದಲ ದಿವಸ ಸಂಜೆ ಶ್ರೀ ರೇವಣ ಸಿದ್ದೇಶ್ವರರ ರಥೋತ್ಸವ ಕೈಗೊಳ್ಳಲಾಗುತ್ತದೆ.

ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ರೇವಣಸಿದ್ದೇಶ್ವರ ಹಾಗೂ ಲಿಂ. ಕೆಂಜಡೇಶ್ವರ ಕತೃ ಗದ್ದುಗೆಗೆ ರುದ್ರಾಭಿಷೇಕ, ಪುಣ್ಯಾರಾಧನೆ, ಅನ್ನದಾಸೋಹ, ಶ್ರೀ ರೇವಣಸಿದ್ದೇಶ್ವರರ ಉತ್ಸವಮೂರ್ತಿ ಹಾಗೂ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯರ ಪಲ್ಲಕ್ಕಿ ಉತ್ಸವ, ಗುಗ್ಗಳ ಸೇವೆ, ಶಿವಾನುಭವಗೋಷ್ಠಿ, ಉಪನ್ಯಾಸ, ಕೀರ್ತನೆ ಮೊದಲಾದ ಕಾರ್ಯಕ್ರಮಗಳು ಜರುಗಿದವು.

English summary
Parvati Devi rathotsava was conducted in Savanur, Haveri district. Here only women tow the chariot to appease the goddess Parvati. This is rare kind of chariot festival observed in Haveri district, Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X