ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ಫೋನ್ ಕರೆಗೆ ದ.ಕ ಕ್ರೈಂ ಸುದ್ದಿ ಲಭ್ಯ

By Mahesh
|
Google Oneindia Kannada News

SP DK AS Rao
ಮಂಗಳೂರು, ಫೆ.7: ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಸಿಹಿ ಸುದ್ದಿ. ಇನ್ಮುಂದೆ ಪೊಲೀಸ್ ಅಧಿಕಾರಿಗಳ ಮೊಬೈಲ್ ನಂಬರ್, ಜಿಲ್ಲೆಯಲ್ಲಿ ನಡೆದ ಪೊಲೀಸ್ ಇಲಾಖೆಗೆ ಸಂಬಂಧಪಟ್ಟ ಘಟನೆಗಳ ಬಗ್ಗೆ ಸಾರ್ವಜನಿಕರು ಮಾಹಿತಿ ತಕ್ಷಣವೇ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಎಸ್‌ಪಿ.ಯವರ ಅಧೀನದಲ್ಲಿರುವ ಠಾಣೆಗಳಿಗೆ ಸಂಬಂಧಪಟ್ಟ ಮಾಹಿತಿಗಾಗಿ ನೂತನ ಕಂಟ್ರೋಲ್ ರೂಮ್ (PR Cell)ಅನ್ನು ಇತ್ತೀಚೆಗೆ ಆರಂಭಿಸಲಾಗಿದೆ. ಈ ಸೆಲ್ ಮೂಲಕ ಸಾರ್ವಜನಿಕರು ಮತ್ತು ಮಾಧ್ಯಮಗಳು ಮಾಹಿತಿ ಪಡೆಯಬಹುದಾಗಿದೆ.

ಈ ಕಂಟ್ರೋಲ್ ರೂಮನ್ನು ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಅವರು ಉದ್ಘಾಟಿಸಿದ ನಂತರ ಜಿಲ್ಲಾ ಎಸ್.ಪಿ. ಸುಬ್ರಮಣ್ಯೇಶ್ವರ್ ರಾವ್ ಕಂಟ್ರೋಲ್ ರೂಮಿನ ಬಗ್ಗೆ ಮಾಹಿತಿ ನೀಡಿದರು. ಈ ಯೋಜನೆ ದ.ಕ. ಜಿಲ್ಲೆಯಲ್ಲೇ ಪ್ರಥಮವಾಗಿದೆ. ಇದುವರೆಗೆ ಯಾವುದೇ ಘಟನೆಗಳು ನಡೆದ ಹಲವಾರು ಗಂಟೆಗಳ ಬಳಿಕ ಸಾರ್ವ ಜನಿಕರಿಗೆ ಮತ್ತು ಮಾಧ್ಯಮಗಳಿಗೆ ಮಾಹಿತಿ ನೀಡಲಾಗುತ್ತಿತ್ತು. ಆದರೆ ಇನ್ನು ಮುಂದಕ್ಕೆ ತಕ್ಷಣವೇ ಮಾಹಿತಿ ನೀಡಲಾಗುತ್ತದೆ ಎಂದರು. ದಕ್ಷಿಣ ಕನ್ನಡ ಪೊಲೀಸರು ಪ್ರತ್ಯೇಕ ವೆಬ್ ಸೈಟ್ ಕೂಡಾ ಹೊಂದಿದ್ದು, ಅದರಲ್ಲೂ ಪ್ರತಿನಿತ್ಯ ದಾಖಲಾದ ದೂರಿನ ವಿವರಗಳು ಲಭ್ಯವಿರುತ್ತದೆ.

ಅಲ್ಲದೆ ಪೊಲೀಸ್ ಅಧಿಕಾರಿಗಳ ಸಂಪರ್ಕ ಸಂಖ್ಯೆಯನ್ನೂ ಕಂಟ್ರೋಲ್ ರೂಮಿನಲ್ಲಿ ನೀಡಲಾಗುತ್ತಿದ್ದು ಈ ಕೆಲಸವನ್ನು ಎಸ್.ಐ.ಯವರು ನಿರ್ವಹಿಸಲಿದ್ದಾರೆ. ಇದಕ್ಕೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಕಂಟ್ರೋಲ್ ರೂಮಿನ ಸಂಖ್ಯೆ (0824)242 404 ಮತ್ತು ಮೊಬೈಲ್ ಸಂಖ್ಯೆ 94808 05300 ಆಗಿರುತ್ತದೆ ಈ ಕೇಂದ್ರ ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲ ಕಾರ್ಯ ನಿರ್ವಹಿಸಲಿದೆ ಎಂದರು.

ಅಮಿತ್ ಸಿಂಗ್ ಪ್ರಕರಣ : ಇತ್ತೀಚೆಗೆ ಬಂಟ್ವಾಳ ಠಾಣೆಯಲ್ಲಿ ಎಎಸ್ಪಿ ಅಮಿತ್ ಸಿಂಗ್ ಪ್ರಕರಣವನ್ನು ಪ್ರಸ್ತಾಪಿಸಿದ ಎಸ್.ಪಿ. ಸುಬ್ರಹ್ಮಣ್ಯೇಶ್ವರ್ ರಾವ್ ಪ್ರಕರಣವೊಂದಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ ಅವರ ವಿಚಾರಣೆ ಮುಗಿಯುವ ಮೊದಲೇ ಬಿ.ಜೆ.ಪಿ. ಮುಖಂಡರೋರ್ವರು ಠಾಣೆಗೆ ಬಂದು ನೇರವಾಗಿ ಆರೋಪಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಆರೋಪಿ ರೌಡಿ ಶೀಟರ್ ಆಗಿದ್ದು, ವಿಚಾರಣೆ ಮುಗಿಯದೆ ಹೊರಗಿನವರೊಂದಿಗೆ ಮಾತನಾಡಲು ಠಾಣಾಧಿಕಾರಿ ಅನುಮತಿ ನೀಡಿದ್ದರೆ ಅದು ಪೊಲೀಸ್ ವೈಫಲ್ಯವೇ ಸರಿ.

ಬಂಟ್ವಾಳ ಪೊಲೀಸರೇ ಸರಿಯಾಗಿ ವಿಚಾರಣೆ ನಡೆಸಿದ್ದರೆ ಪ್ರಕರಣದಲ್ಲಿ ಎಎಸ್ಪಿ ಅವರು ಮಧ್ಯೆ ಪ್ರವೇಶಿಸುವ ಪ್ರಮೇಯವೇ ಬರುತ್ತಿರಲಿಲ್ಲ. ಎಎಸ್ಪಿ ವಿರುದ್ಧ ಪ್ರತಿಭಟನೆ ನಡೆದ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ದೂರು ದಾಖಲಾದರೆ ಅಗತ್ಯವಾದ ಕಾನೂನು ಕ್ರಮ ಜಾರಿಗೊಳಿಸಬಹುದು ಎಂದರು.

English summary
District Information officer Rohini K inaugurated the PR Cell in Mangalore. The cell to be headed by the SP will have a sub-inspector of Police as the in-charge. The PR Cell which is open round the clock said Dakshina Kannada SP AS Rao.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X