ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚರ್ಚ್ ದಾಳಿ : ಸಿಬಿಐ ತನಿಖೆಗೆ ಕ್ರೈಸ್ತರ ಪಟ್ಟು

By Prasad
|
Google Oneindia Kannada News

Archbishop Bernard Moras
ಬೆಂಗಳೂರು, ಫೆ. 5 : ರಾಜ್ಯದಲ್ಲಿ ನಡೆದ ಚರ್ಚ್ ದಾಳಿಗೆ ಸಂಬಂಧಿಸಿದಂತೆ ಸರಕಾರ ನೇಮಿಸಿದ್ದ ನ್ಯಾ. ಸೋಮಶೇಖರ್ ಆಯೋಗ ನೀಡಿದ ವರದಿಯನ್ನು ತಿರಸ್ಕರಿಸಲು ರಾಜ್ಯ ಕ್ರೈಸ್ತ ಸಮುದಾಯ ನಿರ್ಧರಿಸಿದ್ದು ಸಿಬಿಐ ತನಿಖೆಗೆ ಒತ್ತಾಯಿಸಿದೆ.

ಈ ಬಗ್ಗೆ ಹೇಳಿಕೆ ನೀಡುತ್ತಾ ಆರ್ಚ್ ಬಿಷಪ್ ಬರ್ನಾಡ್ ಮೋರಸ್, ಆಯೋಗ ನೀಡಿದ ಮಧ್ಯಂತರ ಮತ್ತು ಅಂತಿಮ ವರದಿಗೆ ಒಂದಕ್ಕೊಂದು ಹೋಲಿಕೆಯಾಗುತ್ತಿಲ್ಲ ಮತ್ತು ದ್ವಂದ್ವ ನೀತಿ ತಾಳಿದೆ. ಮಧ್ಯಂತರ ವರದಿಯಲ್ಲಿ ಕೆಲವೊಂದು ಸಂಘಟನೆಗಳು ದಾಳಿಯಲ್ಲಿ ಶಾಮೀಲಾಗಿರುವ ಬಗ್ಗೆ ಉಲ್ಲೇಖಿಸಲಾಗಿತ್ತು. ಈಗ ಆ ಸಂಘಟನೆಗಳಿಗೆ ಕ್ಲೀನ್ ಚಿಟ್ ನೀಡಲಾಗಿದೆ ಮತ್ತು ಉದ್ದೇಶಪೂರ್ವಕವಾಗಿ ದೋಷಮುಕ್ತ ಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಸರಕಾರದ ಕುಮ್ಮುಕ್ಕಿಲ್ಲದೆ ಈ ದಾಳಿ ನಡೆಯುವುದು ಅಸಾಧ್ಯ. ಇದೊಂದು ಪ್ರಚಾರ ಗಿಟ್ಟಿಸುವ ವರದಿ. ವರದಿಯಲ್ಲಿ ಸಮುದಾಯಕ್ಕೆ ಕಳಂಕ ತರುವ ಹುನ್ನಾರ, ಕ್ರೈಸ್ತ ಸಮುದಾಯದ ಮೇಲೆ ಮತಾಂತರದ ಆರೋಪ ಹೊರಿಸಲಾಗಿದೆ. ದಾಳಿ ಯಾರು ಮಾಡಿದ್ದಾರೆಂದು ಗುರುತಿಸಿಲ್ಲ. ಇದರಿಂದ ನಮ್ಮ ಸಮುದಾಯದ ಭಾವನೆಗೆ ನೋವುಂಟಾಗಿದೆ. ಹಾಗಾಗಿ ವರದಿಯನ್ನು ನಾವು ತಿರಸ್ಕರಿಸಿ ಸಿಬಿಐ ತನಿಖೆಗೆ ಒತ್ತಾಯಿಸುತ್ತೇವೆ ಎಂದು ಬರ್ನಾಡ್ ಹೇಳಿಕೆ ನೀಡಿದ್ದಾರೆ.

English summary
Christian community has demanded CBI enquiry into church attacks in Karnataka. Archbishop Bernard Moras said christians have decided to reject Justice Somasekhar commission report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X