ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆ. 24 ರಂದು ರಾಜ್ಯ ಬಜೆಟ್ ಮಂಡನೆ : ಆಚಾರ್ಯ

By Mrutyunjaya Kalmat
|
Google Oneindia Kannada News

VS Acharya
ಬೆಂಗಳೂರು, ಫೆ. 4 : 2011-12 ನೇ ಸಾಲಿನ ರಾಜ್ಯ ಬಜೆಟ್ ಫೆ. 24 ರಂದು ಮಂಡನೆಯಾಗಲಿದೆ, ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿದೆ. 15 ದಿನಗಳ ಕಾಲ ಬಜೆಟ್ ಅಧಿವೇಶನ ನಡೆಸಲು ಸರಕಾರ ಉದ್ದೇಶಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ವಿ ಎಸ್ ಆಚಾರ್ಯ ತಿಳಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರತಿ ವರ್ಷ ಕೇಂದ್ರ ಬಜೆಟ್ ಮಂಡನೆಯಾದ ನಂತರವೇ ರಾಜ್ಯ ಬಜೆಟ್ ಮಂಡನೆಯಾಗುತ್ತಿತ್ತು. ಆದರೆ, ಈ ವರ್ಷ ಕೇಂದ್ರ ಬಜೆಟ್ ಗೂ ಮುನ್ನ ರಾಜ್ಯ ಬಜೆಟ್ ಮಂಡಿಸಲು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆ.

ಪಂಪ್ ಸೆಟ್ ಸಕ್ರಮ : ಅಕ್ರಮ ಕೃಷಿ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಲು ನಿರ್ಧರಿಸಲಾಗಿದ್ದು, ಇದಕ್ಕಾಗಿ 10 ಸಾವಿರ ಮತ್ತು ಎರಡು ತಿಂಗಳ ಠೇವಣಿ ಮೊತ್ತ ವಸೂಲು ಮಾಡಲು ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕೃಷಿ ಪಂಪ್ ಸೆಟ್ ಸಕ್ರಮಗೊಳಿಸಲು 70 ಸಾವಿರ ರುಪಾಯಿ ವೆಚ್ಚ ತಗಲುತ್ತದೆ. ಇದರಲ್ಲಿ 10 ಸಾವಿರ ರೈತರಿಂದ ವಸೂಲು ಮಾಡಿದರೆ, 25 ಸಾವಿರ ರಾಜ್ಯ ಸರಕಾರ ಮತ್ತು 30 ಸಾವಿರ ಆಯಾ ವಿದ್ಯುತ್ ಸರಬರಾಜು ಕಂಪನಿಗಳು ಭರಿಸುತ್ತವೆ ಎಂದು ಆಚಾರ್ಯ ವಿವರಿಸಿದರು.

English summary
The Budget session of the Karnataka legislature will begin from February 24 and Chief Minister B S Yeddyurappa will present the 2011-12 budget on the opening day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X