ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಮೂಗೆ ಡಾಕ್ಟರೇಟ್ ನಿರಾಕರಿಸಿದ ರಾಜ್ಯಪಾಲ

By Mrutyunjaya Kalmat
|
Google Oneindia Kannada News

M Chidananda Murthy
ಬೆಂಗಳೂರು, ಫೆ. 4 : ಸರಕಾರದ ವಿರುದ್ಧ ಮುಖ್ಯವಾಗಿ ಮುಖ್ಯಮಂತ್ರಿಯೊಂದಿಗೆ ಹೋರಾಟ ಆರಂಭಿಸಿರುವ ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಇದೀಗ ಮತ್ತೊಂದು ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ. ಕೊನೆ ಗಳಿಗೆಯಲ್ಲಿ ಖ್ಯಾತ ಸಂಶೋಧಕ ಎಂ ಚಿದಾನಂದಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ತಿರಸ್ಕರಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸಂಘ ಪರಿವಾರದ ಹಿನ್ನೆಲೆಯವರು ಎನ್ನುವ ಏಕೈಕ ಕಾರಣದಿಂದ ಪದವಿ ನಿರಾಕರಿಸಲಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯದ 46ನೇ ಘಟಿಕೋತ್ಸವದ ಅಂಗವಾಗಿ ಖ್ಯಾತ ಕವಿ ನಾಡೋಜ ಕೆ ಎಸ್ ನಿಸಾರ್ ಅಹ್ಮದ್, ಡಾ. ಚಿದಾನಂದಮೂರ್ತಿ ಹಾಗೂ ಕಲಾವಿದ ಬಿಕೆಎಸ್ ವರ್ಮಾ ಅವರಿಗೆ ಗೌರವ ಡಾಕ್ಟರೇಟ್ ನೀಡಲು ತೀರ್ಮಾನಿಸಲಾಗಿತ್ತು. ಈ ಸಂಬಂಧದ ಪ್ರಸ್ತಾವನೆಯನ್ನು ಕುಲಾಧಿಪತಿಯೂ ಆದ ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಅನುಮೋದಿಸಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ರಾಜ್ಯಪಾಲರ ಮೇಲೆ ಒತ್ತಡ ಸೃಷ್ಟಿಯಾದ ಹಿನ್ನೆಲೆಯಲ್ಲಿ ಚಿದಾನಂದಮೂರ್ತಿ ಅವರ ಹೆಸರನ್ನು ಕೈಬಿಡಲಾಯಿತು.

ಈ ಸಂಬಂಧ ವಿಶ್ವವಿದ್ಯಾಲಯಕ್ಕೆ ರಾಜ್ಯಪಾಲರ ಕಚೇರಿಯಿಂದ ಸಂದೇಶ ರವಾನೆಯಾಗಿ ನಿಸಾರ್ ಅಹ್ಮದ್ ಮತ್ತು ಬಿಕೆಎಸ್ ವರ್ಮಾ ಅವರಿಗೆ ಮಾತ್ರ ಡಾಕ್ಟರೇಟ್ ನೀಡಲು ಸೂಚನೆ ನೀಡಲಾಯಿತು. ಚಿದಾನಂದಮೂರ್ತಿ ಅವರು ಸಂಘ ಪರಿವಾರದ ಹಿನ್ನೆಲೆಯವರಾಗಿದ್ದು, ಹಿಂದೂ ಧರ್ಮ ಪರವಾದ ವಿಚಾರಗಳ ಪ್ರತಿಪಾದನೆಗೆ ಸೀಮಿತರಾಗಿದ್ದಾರೆ. ಹೀಗಾಗಿ ಅವರಿಗೆ ಗೌರವ ಡಾಕ್ಟರೇಟ್ ನೀಡುವುದು ಸರಿಯಲ್ಲ ಎಂದು ರಾಜ್ಯಪಾಲರ ಮೇಲೆ ತೀವ್ರ ಒತ್ತಡ ಬಂದಿದ್ದರಿಂದ ಈ ರಾಜ್ಯಪಾಲರು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

English summary
In an apparent confrontation with the BJP government, Governor Hans Raj Bhardwaj has rejected Bangalore University's (BU) proposal to confer an honorary degree on a Kannada writer who has supported a ban on religious conversion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X