ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೊಬೆಲ್ ಶಾಂತಿ ಪ್ರಶಸ್ತಿಗೆ ವಿಕಿಲೀಕ್ಸ್ ನಾಮಾಂಕಿತ

By Mahesh
|
Google Oneindia Kannada News

WikiLeaks Nobel Peace Prize Nomination
ಓಸ್ಲೋ, ಫೆ. 3: ಭ್ರಷ್ಟಾಚಾರವನ್ನು ಬಯಲು ಮಾಡುವ ವಿಕಿಲೀಕ್ಸ್ ವೆಬ್ ತಾಣವನ್ನು ಈ ಬಾರಿಯ ನೊಬೆಲ್ ಶಾಂತಿ ಪುರಸ್ಕಾರಕ್ಕೆ ನಾಮ ನಿರ್ದೇಶನಗೊಳಿಸಲಾಗಿದೆ. ನಾರ್ವೆಯ ಸೋಷಲಿಸ್ಟ್ ಎಡಪಕ್ಷದ ರಾಜಕಾರಣಿ ಸ್ನೊರೆ ವಾಲೆನ್ ಅವರು ವಿಕಿಲೀಕ್ಸ್ ಅನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ಕಳಿಸಿದ್ದಾರೆ.

ಮುಕ್ತವಾದ ವಾಕ್ ಸ್ವಾತಂತ್ರ್ಯವನ್ನು ಎತ್ತಿ ಹಿಡಿದು, ಭ್ರಷ್ಟಾಚಾರವನ್ನು ಬಯಲಿಗೆಳೆದು, ದುಷ್ಟರಿಗೆ ಮೈ ನಡುಕ ಹುಟ್ಟುವಂತೆ ಮಾಡುತ್ತಿರುವ ವಿಕಿಲೀಕ್ಸ್, ಪ್ರಜಾ ಪ್ರಭುತ್ವವನ್ನು ಬೆಳೆಸುತ್ತಾ, ಪಾರದರ್ಶಕ ಸಮಾಜವನ್ನು ಕಟ್ಟುತ್ತಿದೆ. ಟ್ಯುನೇಷಿಯಾದ ಮಾಜಿ ಅಧ್ಯಕ್ಷ ಜೈನ್ ಎಲ್ ಅಬಿಡೈನ್ ಬೆನ್ ಅಲಿ ಆಸ್ತಿ ಪಾಸ್ತಿ ವಿವರಗಳನ್ನು ಕಲೆ ಹಾಕಿ ಅವರನ್ನು ಭ್ರಷ್ಟತೆಯನ್ನು ಬಯಲಿಗೆಳೆದಿದ್ದು ವಿಕಿಲೀಕ್ಸ್ ನ ಉತ್ತಮ ಉದಾಹರಣೆ ಎನ್ನಬಹುದು.

ಜಾಗತಿಕವಾಗಿ ಸರ್ಕಾರಿ ಹಾಗೂ ಕಂಪೆನಿಗಳ ಭ್ರಷ್ಟಾಚಾರ, ಯುದ್ಧ ಸಂಬಂಧಿತ ಅಕ್ರಮ ವ್ಯವಹಾರ, ಯೋಧರಿಂದ ಕಿರುಕುಳ ಮುಂತಾದ ಭೂಗತವಾಗಿರುವ ಸತ್ಯಗಳನ್ನು ಹೊರಗೆಳೆದು ಜನತೆಯ ಕಣ್ಣು ತೆರೆಸಿದೆ ಎಂದು ವಾಲೆನ್ ಹೇಳಿದ್ದಾರೆ. ವಿಕಿಲೀಕ್ಸ್ ನಾಮ ನಿರ್ದೇಶನವನ್ನು ಓಸ್ಲೋದ ನಾರ್ವೆಜಿನ್ ನೊಬೆಲ್ ಸಮಿತಿ ಅಂಗೀಕರಿಸಿದ್ದು, ವೈಯಕ್ತಿಕವಾಗಿ ನಾಮ ನಿರ್ದೇಶನದ ಬಗ್ಗೆ ಪ್ರತಿಕ್ರಿಯೆ ನೀಡದಂತೆ ನಿರ್ಬಂಧ ವಿಧಿಸಿದೆ.

ವಿಕಿಲೀಕ್ಸ್ ವಾಣಿಜ್ಯ ಆದಾಯ ರಹಿತ ವೆಬ್ ತಾಣವಾಗಿದ್ದು, ರಹಸ್ಯ ದಾಖಲೆಗಳನ್ನು ಮಾಹಿತಿ ಬಹಿರಂಗಗೊಳಿಸಿ ಅಮೆರಿಕ ಸೇರಿದಂತೆ ವಿಶ್ವ ಅನೇಕ ಆಡಳಿತ ವ್ಯವಸ್ಥೆಯನ್ನೇ ಅಲ್ಲಾಡಿಸಿದೆ. ಅಫ್ಘನ್ ಯುದ್ಧ, ಇರಾಕ್ ಸಮರ, ಸ್ವಿಸ್ ಬ್ಯಾಂಕ್ ಹಣ, ಮೋದಿ ಕೊಲೆ ಸಂಜು ಸೇರಿದಂತೆ ಪ್ರಮುಖ ರಹಸ್ಯ ವರದಿಗಳು ವೆಬ್ ಸೈಟ್ ನಲ್ಲಿ ಕಾಣಿಸಿಕೊಂಡಿದೆ. ಕಳೆದ ಬಾರಿ ನೊಬೆಲ್ ಶಾಂತಿ ಪ್ರಶಸ್ತಿ ಚೀನಾದ ಮಾನವ ಹಕ್ಕುಗಳ ಹೋರಾಟಗಾರ ಜಿಯಬಾವೊ ಅವರಿಗೆ ಸಂದಿದೆ.

English summary
A Norwegian politician nominated the whistle-blower site WikiLeaks for the 2011 Nobel Peace Prize. Snorre Valen, a representative of Norway's Socialist Left Party, highlighted the work of WikiLeaks in exposing classified documents and promoting freedom of speech and transparency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X