ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಲೇಗಾಂವ್ ಸ್ಫೋಟ : ಗೋಕಾಕ ವ್ಯಕ್ತಿ ಬಂಧನ

By Mrutyunjaya Kalmat
|
Google Oneindia Kannada News

Crimebeat
ಬೆಳಗಾವಿ, ಫೆ. 2 : ಮಾಲೇಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಪೊಲೀಸರು ಗೋಕಾಕ ಮೂಲದ ವ್ಯಕ್ತಿಯೊಬ್ಬನನ್ನು ಬೆಳಗಾವಿಯಲ್ಲಿ ಸೋಮವಾರ ಬಂಧಿಸಿದ್ದಾರೆ. ಬಂಧಿತ ಆರೋಪಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ಸಂಬಂಧಿ ಎಂದು ಹೇಳಲಾಗಿದೆ.

ಪ್ರವೀಣ ವೆಂಕಟೇಶ್ ಟಕ್ಕಳಕಿ(32) ಬಂಧಿತ ಆರೋಪಿ. ಸೋಮವಾರ ರಾತ್ರಿ ಬಂಧಿಸಿ ಭಯೋತ್ಪಾದನೆಗೆ ಸಂಬಂಧಿಸಿದ ವಿಶೇಷ ಮೋಕಾ ನ್ಯಾಯಾಲಯದ ಮುಂದೆ ಮಂಗಳವಾರ ಹಾಜರುಪಡಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯ ಫೆ.14ರ ವರೆಗೆ ಪೊಲೀಸರ ವಶಕ್ಕೆ ಒಪ್ಪಿಸಿದೆ. ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ರಾಮ್ ಜೀ ಕಾಲಸಂಗ್ರ ಮತ್ತು ಸಂದೀಪ ದಾಂಗೆ ಎಂಬಿಬ್ಬರು ತಲೆಮರೆಸಿಕೊಂಡಿದ್ದಾರೆ. ಬಂಧಿತ ಆರೋಪಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸಂಬಂಧಿ ಎನ್ನಲಾಗಿದ್ದು, ಆ ಬಗ್ಗೆ ತನಿಖೆ ಶುರುವಾಗಿದೆ ಎಂದು ಬೆಳಗಾವಿ ಎಸ್ಪಿ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಮಾಲೇಗಾಂವ್ ಸ್ಫೋಟದ ಪ್ರಮುಖ ಎಂದು ಹೇಳಲಾಗಿರುವ ಪ್ರಸಾದ್ ಶ್ರೀಕಾಂತ್ ಪುರೋಹಿತ್ ಅವರ ಸಹಾಯಕನಾಗಿ ಪ್ರವೀಣ ಕೆಲಸ ಮಾಡಿದ್ದ. ಹಿಂದೂ ರಾಷ್ಟ್ರ ನಿರ್ಮಾಣ ಇವರ ಏಕೈಕ ಉದ್ದೇಶವಾಗಿತ್ತು ಎಂದು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹದ ಪೊಲೀಸರು 2009ರ ಜನವರಿ 9ರಂದು ಮೋಕಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ದೋಷಾರೋಪ ಪಟ್ಟಿಯಲ್ಲಿ ರಾಮ್ ಜೀ ಕಾಲಸಂಗ್ರ, ಸಂದೀಪ್ ಪಾಟೀಲ್ ಮತ್ತು ಪ್ರವೀಣ ಟಕ್ಕಳಕಿ(ಮುತಾಲಿಕ್) ಆರೋಪಿಗಳು ಎಂದು ಹೆಸರಿಸಲಾಗಿತ್ತು. ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸುವಂತೆ ಮೋಕಾ ನ್ಯಾಯಾಲಯ ಪೊಲೀಸರಿಗೆ ಸೂಚನೆ ನೀಡಿತ್ತು. ಸಾಧ್ವಿ ಪ್ರಗ್ಯಾಸಿಂಗ್, ಪ್ರಸಾದ್ ಶ್ರೀಕಾಂತ್ ಪುರೋಹಿತ್ ಮತ್ತು ಅಭಿನವ್ ಭರತ್ ಅವರು ಘಟನೆಯ ರೂವಾರಿಗಳೆಂದು ಎಟಿಎಸ್ ಮೊಕದ್ದಮೆ ದಾಖಲಿಸಿದೆ. 2008ರ ಸೆಪ್ಟೆಂಬರ್ ನಲ್ಲಿ ಮಾಲೇಗಾಂವ್ ಸ್ಫೋಟ ಸಂಭವಿಸಿತ್ತು.

English summary
In a major breakthrough in the 2008 Malegaon bomb blast probe, the Maharashtra Anti-Terrorism Squad (ATS) arrested a key accused, Pravin Takkalike(Mutalik)(32), from Gokak in Karnataka’s Belgaum district late yesterday night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X