ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಸರಗೋಡಿನ ಕಾಮುಕ ಸತ್ತಾರ್ ಬಲೆಗೆ

By Mahesh
|
Google Oneindia Kannada News

Kumble rapist Sattar held
ಕಾಸರಗೋಡು, ಫೆ.2: ಯುವತಿರನ್ನು ಬ್ಲ್ಯಾಕ್‌ಮೇಲ್ ಮಾಡುವುದು, ಪುಸಲಾಯಿಸಿ ಮಂಚಕ್ಕೆ ಕರೆಯುವುದು, ಒಲಿದವರನ್ನು ಕೆಡಿಸಿ ಪರಾರಿಯಾಗುವುದನ್ನೇ ಕಾಯಕ ಮಾಡಿಕೊಂಡಿದ್ದ ಸತ್ತಾರ್ ಎಂಬ ಯುವಕನನ್ನು ಕುಂಬಳೆ ಪೊಲೀಸ್ ವೃತ್ತ ನಿರೀಕ್ಷಕ ದಾಮೋದರ್ ನೇತೃತ್ವದ ತಂಡದವರು ಬಂಧಿಸಿದ್ದಾರೆ. ಇತ್ತೀಚೆಗೆ 15ರ ಹರೆಯದ ತರುಣಿಯನ್ನು ಮಂಗಳೂರಿನ ವಸತಿಗೃಹದಲ್ಲಿ ಕೂಡಿ ಹಾಕಿ ಅತ್ಯಾಚಾರ ಮಾಡಿ ಪರಾರಿಯಾಗಿದ್ದ.

ಕಾಸರಗೋಡು ಅಡ್ಕತ್ತಬೈಲಿನ ಅಬ್ದುಲ್ ಸತ್ತಾರ್ (35) ಬಂಧಿತ ಆರೋಪಿ. ಆಲ್ಬಂ ಹಾಡುಗಳ ಶೂಟಿಂಗ್ ನೆಪದಲ್ಲಿ ಸತ್ತಾರ್ ಯುವತಿಯರನ್ನು ಬಲೆಗೆ ಹಾಕಿಕೊಳ್ಳುತ್ತಿದ್ದ. ಹೀಗೆ ಈತನ ಪಾಶಕ್ಕೆ ಬಿದ್ದ ಮಂಜೇಶ್ವರ ಸಮೀಪದ ಯುವತಿಯರನ್ನು ಈತ ದೇಹತೀಟೆಗೆ ಬಳಸಿದ್ದ. 2 ಮಕ್ಕಳ ತಂದೆಯಾಗಿರುವ ಈತ ಸಿನಿಮಾ ನಟನಂತೆ ಫೋಸ್ ನೀಡುತ್ತಿದ್ದು, ಈಗಾಗಲೇ ಕೆಲವಾರು ಯುವತಿಯರನ್ನು ವಂಚಿಸಿದ್ದಾನೆ

ತಮ್ಮ ಕಾಮಕೇಳಿಯ ದೃಶ್ಯಗಳನ್ನು ಯುವತಿಗೆ ಗೊತ್ತಿಲ್ಲದೆ ಪೆನ್ ಕ್ಯಾಮರಾ ಮೂಲಕ ಚಿತ್ರೀಕರಿಸಿದ್ದ ಸತ್ತಾರ್ ಮುಂದೆ ಆಕೆಯನ್ನು ನಿರಂತರ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎನ್ನಲಾಗಿದೆ. ನಿನ್ನ ಗೆಳತಿಯರನ್ನು ನನಗೊಪ್ಪಿ ಸದಿದ್ದಲ್ಲಿ ನಗ್ನ ದೃಶ್ಯಗಳು ಇಂಟೆರ್‌ನೆಟ್‌ನಲ್ಲಿ ಹರಿದಾಡಲಿದೆ ಎಂಬ ಬೆದರಿಕೆ ಹಾಕಿದ್ದ.

ಹೀಗೆ ಆಕೆಯ ಗೆಳತಿ 15ರ ತರುಣಿ ಸಂಪರ್ಕ ಸಾಧಿಸಿದ ಆರೋಪಿ ಕಳೆದ ಶುಕ್ರವಾರ ರಾತ್ರಿ ಆಕೆಯನ್ನು ಮಂಜೇಶ್ವರ ಪುಚ್ಚತ್ತಬೈಲಿನ ಉರುಸ್ ನಡೆಯುತ್ತಿದ್ದ ಸ್ಥಳದಿಂದ ಆಮಿಷವೊಡ್ಡಿ ಕಾರಿನಲ್ಲಿ ಮಂಗಳೂರಿನ ಲಾಡ್ಜಿಗೆ ಕೊಂಡೊಯ್ದು ಅತ್ಯಾಚಾರ ನಡೆಸಿದ್ದ ಎನ್ನಲಾಗಿದೆ. ಯುವತಿಯ ದೂರಿನನುಸಾರ ಕುಂಬಳೆ ಪೊಲೀಸರು ತಂಙಳ್ ಉರೂಸ್ ನಲ್ಲಿ ಪಾಲ್ಗೊಂಡಿದ್ದ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

English summary
A Blackmailer from Adkathbail, Kasaragod has been held by Kumble police. Sattar was blackmailing women and models and forcing them to act in album.He is also booked under rape case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X