ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನಾದರೂ ಲಭಿಸಲಿ ಎಚ್‌ಐವಿ ಬಾಧಿತರಿಗೆ ವಿಮೆ

By Srinath
|
Google Oneindia Kannada News

Insurance policy for AIDS
ನವದೆಹಲಿ, ಫೆ. 2: ಎಚ್‌ಐವಿ ಬಾಧಿತರತ್ತ ಕೇಂದ್ರ ಸರಕಾರ ಕೊನೆಗೂ ಕಣ್ಣುಬಿಟ್ಟಂತಿದೆ. ಶೀಘ್ರವೇ ದೇಶದಲ್ಲಿ ಮೊದಲ ಬಾರಿಗೆ ಎಚ್‌ಐವಿ ಬಾಧಿತರಿಗೆ ವಿಮೆ ಸೌಲಭ್ಯ ಕಲ್ಪಿಸುವ ಪ್ರಸ್ತಾವನೆ ಅಂಗೀಕಾರವಾಗುವ ಲಕ್ಷಣಗಳು ಸ್ಪಷ್ಟವಾಗಿವೆ.
ಈ ಸಂಬಂಧ ನಾಳೆ (ಫೆ. 3) ನವದೆಹಲಿಯಲ್ಲಿ ವಿಮಾ ಕಂಪನಿಗಳು, ವಿಮಾ ನಿಯಂತ್ರಣ ಅಭಿವೃದ್ಧಿ ಸಂಸ್ಥೆ (ಐಆರ್‌ಡಿಎ) ಮತ್ತು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (ನ್ಯಾಕೊ) ಸಭೆ ಸೇರಲಿವೆ. ಈ ಸಂದರ್ಭದಲ್ಲಿ ಎಚ್‌ಐವಿ/ಏಡ್ಸ್ ಬಾಧಿತರನ್ನೂ ವಿಮೆ ವ್ಯಾಪ್ತಿಗೆ ಒಳಪಡಿಸುವಂತೆ ನ್ಯಾಕೊ ಪ್ರಸ್ತಾವನೆ ಮಂಡಿಸಲಿದೆ ಎಂದು ಮೂಲಗಳು ತಿಳಿಸಿವೆ.

'ಎಚ್‌ಐವಿ/ಏಡ್ಸ್ ಅನ್ನು ಇದುವರೆಗೆ ಗುಣಪಡಿಸಲಾಗದ ಕಾಯಿಲೆ ಎಂದು ಪರಿಗಣಿಸಲಾಗಿತ್ತು. ಆದರೆ ಈಗ ಅದನ್ನು ಗುಣಡಿಸಬಹುದಾದ ಆರೋಗ್ಯ ಬಾಧೆ ಎಂದು ಪರಿಗಣಿಸಲಾಗಿದೆ' ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಈ ಹಿನ್ನೆಲೆಯಲ್ಲಿ ಎಚ್‌ಐವಿ/ಏಡ್ಸ್ ಬಾಧಿತರಿಗಾಗಿ ಪ್ರತ್ಯೇಕ ವೈದ್ಯಕೀಯ ವಿಮೆ ಪ್ಯಾಕೇಜ್ ಕಲ್ಪಸಬೇಕಾಗಿದೆ. ಪ್ರಪಂಚದ ಇತರೆ ಭಾಗಗಳಲ್ಲಿ ಎಚ್‌ಐವಿ/ಏಡ್ಸ್ ವಿಮೆ ಪರಿಕಲ್ಪನೆ ಹೇಗಿದೆ ಎಂಬುದರ ಬಗ್ಗೆ ಅಧ್ಯಯನ ನಡೆಯಬೇಕಿದೆ ಎನ್ನುತ್ತಾರೆ ಸಚಿವಾಲಯದ ಜಂಟಿ ಕಾರ್ಯದರ್ಶಿ ಆರಾಧನಾ ಜೊಹ್ರಿ.

ಇಂದಿನ ಅತ್ಯಾಧುನಿಕ ವೈದ್ಯಕೀಯ ಲೋಕ ಅಗಾಧ ಬೆಳವಣಿಗೆ ಸಾಧಿಸಿದೆ. ಎಚ್‌ಐವಿ/ಏಡ್ಸ್ ಬಾಧಿತರಿಗೂ ಚಿಕಿತ್ಸೆ ಲಭ್ಯವಾಗುತ್ತಿದೆ. ಇದರಿಂದ ಅವರು ಹೆಚ್ಚು ಕಾಲ ಬದುಕುವಂತಾಗಿದೆ. ಆದ್ದರಿಂದ ಅವರಿಗೆ ವಿಮೆ ಸೌಲಭ್ಯ ಕಲ್ಪಿಸುವುದರಿಂದ ಕಂಪನಿಗಳಿಗೆ ನಷ್ಟ ಅನುಭವಿಸುತ್ತದೆ ಎಂಬ ಮಾತು ಸರಿಯಲ್ಲ. ಆದ್ದರಿಂದ ಶೀಘ್ರವೇ ಎಚ್‌ಐವಿ/ಏಡ್ಸ್ ಬಾಧಿತರಿಗಾಗಿ ವಿಶೇಷ ವಿಮೆ ಒಸಗಿಸುವ ಜವಾಬ್ದಾರಿ ವಿಮಾ ಕಂಪನಿಗಳ ಮೇಲಿದೆ.

ವಿಶ್ವ ಎಚ್‌ಐವಿ/ಏಡ್ಸ್ ಬಾಧಿತರ ಪ್ರಮಾಣದಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ, ನಮೀಬಿಯಾ, ಉಗಾಂಡಾ, ಗಯಾನಾ ಮತ್ತು ಅಮೆರಿಕದಲ್ಲಿ ಈಗಾಗಲೇ ಇಂತಹ ವಿಮೆ ಸೌಲಭ್ಯ ಇದೆ. ಪ್ರಸ್ತುತ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಎಚ್‌ಐವಿ/ಏಡ್ಸ್ ಬಾಧಿತರಿಗೆ ವಿಮೆ ಸೌಲಭ್ಯ ಕಲ್ಪಿಸಲಾಗುತ್ತಿದೆ. ಸುಮಾರು 7,000 ಮಂದಿ ಇದರ ಪ್ರಯೋಜನ ಪಡೆಯುತ್ತಿದ್ದು, ವಾರ್ಷಿಕ 1,511 ರು. ಪ್ರೀಮಿಯಂಗೆ 30,000 ರು. ವಿಮೆ ಪರಿಹಾರ ಲಭಿಸುತ್ತಿದೆ.

English summary
Currently, HIV is excluded from any insurance policy available in the country. In a meeting with insurance companies and the IRDA on Feb 3, the NACO will press to make insurance "inclusive for PLHIV".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X