ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಬೈಲ್ ಬ್ಯಾಂಕಿಂಗ್: ಒಮ್ಮೆ ಮಾತ್ರ ಪಿನ್ ಬಳಕೆ ಸಾಧ್ಯ

By Mahesh
|
Google Oneindia Kannada News

Mobile banking transaction
ನವದೆಹಲಿ, ಫೆ.1: ಮೊಬೈಲ್ ಫೋನ್ ಮೂಲಕ ಕ್ರೆಡಿಟ್ ಕಾರ್ಡ್ ಬಳಸುವ ಗ್ರಾಹಕರು ಇಂದಿನಿಂದ ಪ್ರತಿ ವಹಿವಾಟಿಗೂ ಪ್ರತ್ಯೇಕ ಪಾಸ್‌ವರ್ಡ್ ಬಳಸುವುದು (ಒಟಿಪಿ- ಒಂದು ಬಾರಿಯ ಪಾಸ್‌ವರ್ಡ್ ಬಳಕೆ) ಕಡ್ಡಾಯವಾಗಿದೆ. ಅಲ್ಲದೆ, ಮೊಬೈಲ್ ಬ್ಯಾಂಕಿಂಗ್ ವಹಿವಾಟಿಗೆ 'ಒಟಿಪಿ' ಬಳಕೆಯನ್ನು ಆರ್ ಬಿಐ ಕಡ್ಡಾಯಗೊಳಿಸಿದೆ. ಈ ಮೊದಲು, ಜನವರಿ 1 ರಿಂದಲೇ ಒಂದು ಬಾರಿಯ ಪಾಸ್‌ವರ್ಡ್ ವ್ಯವಸ್ಥೆ ಜಾರಿಗೊಳಿಸುವಂತೆ ಬ್ಯಾಂಕುಗಳಿಗೆ ಆರ್ ಬಿಐ ಸೂಚನೆ ನೀಡಿತ್ತು.

ಬ್ಯಾಂಕುಗಳಿಗೆ ಈ ಹೆಚ್ಚುವರಿ ಭದ್ರತೆಯನ್ನು ಫೆಬ್ರುವರಿ 1 ರಿಂದ ಜಾರಿಗೊಳಿಸುವಂತೆ ಸೂಚನೆ ನೀಡಲಾಗಿದೆ. ಆದರೆ, ತಾಂತ್ರಿಕ ಅಡೆತಡೆಗಳ ಕಾರಣ ಒಡ್ಡಿ ಒಂದು ಬಾರಿಯ ಪಾಸ್‌ವರ್ಡ್ ವ್ಯವಸ್ಥೆ ಅಳವಡಿಸಿಕೊಳ್ಳಲು ಹೆಚ್ಚಿನ ಕಾಲಾವಕಾಶ ನೀಡುವಂತೆ ಬ್ಯಾಂಕುಗಳು ಮನವಿ ಮಾಡಿದೆ.

ಇನ್ನು ಮುಂದೆ ಎಲ್ಲ ರೀತಿಯ ಫೋನ್ ಬ್ಯಾಂಕಿಂಗ್ ವಹಿವಾಟುಗಳಿಗೆ ಒಟಿಪಿ ಕಡ್ಡಾಯವಾಗಿದೆ. ಇಲ್ಲದಿದ್ದರೆ ಸ್ವಯಂಚಾಲಿತ ಐವಿಆರ್ ( interactive voice response) ಸೇವೆ ದೊರೆಯುವುದಿಲ್ಲ. ಒಟಿಪಿ ಒಂದು ಬಾರಿಯ ಬಳಕೆಗಷ್ಟೇ ಸೀಮಿತ. ಒಟಿಪಿಯನ್ನು ಆಯಾ ಬ್ಯಾಂಕುಗಳು ನೀಡುತ್ತವೆ. 30 ನಿಮಿಷದಿಂದ 12 ಗಂಟೆಯಲ್ಲಿ ಇದರ ಅವಧಿ ಪೂರ್ಣಗೊಳ್ಳಲಿದೆ. ಆದರೆ, ಹೆಚ್ಚಿನ ಸಂದರ್ಭಗಳಲ್ಲಿ ಒಟಿಪಿ ಬಳಕೆ 2 ಗಂಟೆಗಳಿಗೆ ಮಾತ್ರ ಸೀಮಿತಗೊಳಿಸಲಾಗುತ್ತದೆ.

ಮೊಬೈಲ್ ಮೂಲಕ ಐವಿಆರ್ ಆಧಾರಿತ ವಹಿವಾಟು, ಬಿಲ್ ಪಾವತಿ, ಡಿಟಿಎಚ್ ರೀಚಾರ್ಚ್, ಮುಂಗಡ ಟಿಕೆಟ್ ಬುಕ್ಕಿಂಗ್ ಮುಂತಾದ ವಹಿವಾಟುಗಳಿಗೆ ಒಟಿಪಿ ಅಗತ್ಯವಿದೆ. ವಿವಿಧ ರೀತಿಯಲ್ಲಿ ಎಸ್ಸೆಎಂಎಸ್ ಮೂಲಕ ಬ್ಯಾಂಕುಗಳು ಒಟಿಪಿ ಒದಗಿಸುತ್ತಿದೆ.

ಉದಾ: HDFC Bank, SMS "PWD XXXX" to 9717465555, where XXXX are the last four digits of your credit card. ಅಥವಾ ನಿಮ್ಮ ಬ್ಯಾಂಕಿನ ಕಾಲ್ ಸೆಂಟರ್ ಗೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದು. [ಬ್ಯಾಂಕ್]

English summary
In order to protect Mobile Banking transactions from Skimmers and Hackers, RBI has introduced single entry PIN(personal identification number) for Credit Card Usage over phone from Feb 1.RBI already introduced OTP(one-time password) in ATM transaction from January 1, 2011.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X