ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎತ್ತಿನಹೊಳೆ ನದಿಯಿಂದ ಬೆಂಗಳೂರಿಗೆ ನೀರು

By Mrutyunjaya Kalmat
|
Google Oneindia Kannada News

Basavaraj Bommai
ಬೆಂಗಳೂರು, ಫೆ. 1 : ಬೆಂಗಳೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಯೋಜನೆಗೆ ಸಂಬಂಧಿಸಿದಂತೆ ಯೋಜನಾ ವರದಿಯನ್ನು ನಿರೀಕ್ಷಿಸಲಾಗಿದ್ದು, ಈ ಎರಡು ಜಿಲ್ಲೆಗಳಿಗೆ ಹಾಸನ ಜಿಲ್ಲೆಯ ಎತ್ತಿನಹೊಳೆ ಜಲಾಶಯದಿಂದ ನೀರು ಹರಿಸಲು ಯೋಜನೆಯ ವಿಷಯವನ್ನು ಸದ್ಯದಲ್ಲೇ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೂರು ನದಿಗಳು ಸಂದಿಸುವ ಎತ್ತಿನಹೊಳೆ ಜಲಾಶಯದಿಂದ 9 ಟಿಎಂಸಿ ನೀರು ಲಭ್ಯವಾಗುವ ಅಂದಾಜು ಮಾಡಲಾಗಿದೆ. ಈ ಯೋಜನೆಯಿಂದ ಪರಿಸರಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಉದ್ಭವಿಸುತ್ತಿಲ್ಲ ಎಂದು ಬೊಮ್ಮಾಯಿ ವಿವರಿಸಿದರು.

ಕೃಷ್ಣಾ ನ್ಯಾಯಾಧೀಕರಣ ತೀರ್ಪಿನ ಹಿನ್ನೆಲೆಯಲ್ಲಿ ಆಲಮಟ್ಟಿ ಆಣೆಕಟ್ಟೆಯಲ್ಲಿ 524 ಅಡಿ ನೀರು ನಿಲ್ಲಿಸುವ ವಿಚಾರದಲ್ಲಿ ಆತುರ ತೋರುವುದಿಲ್ಲ. ಇದರಿಂದ ಬಾಧಿತರಾಗಿರುವ 22 ಹಳ್ಳಿಗಳ ಜನರ ಸ್ಥಳಾಂತರ, ಭೂಮಿ ಕಳೆದುಕೊಳ್ಳುವವರಿಗೆ ಪರ್ಯಾಯ ವ್ಯವಸ್ಥೆಯಂತಹ ದೊಡ್ಡ ಜವಾಬ್ದಾರಿ ಸರಕಾರದ ಮೇಲಿದೆ. ಆಣೆಕಟ್ಟೆಯಲ್ಲಿ ನೀರು ಸಂಗ್ರಹ ಹೆಚ್ಚಿಸುವ ತೀರ್ಮಾನಕ್ಕೆ ಮುನ್ನ ಸಾಮಾಜಿಕ ತಜ್ಞರು, ಪರಿಸರವಾದಿಗಳು ಮತ್ತಿತರರ ಒಳಗೊಂಡು ವೈಜ್ಞಾನಿಕ ಪರಿಹಾರ ಸೂತ್ರದ ಮಾದರಿಯನ್ನು ಸಿದ್ಧಪಡಿಸಲಾಗುವುದು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.(ಬಸವರಾಜ ಬೊಮ್ಮಾಯಿ)

English summary
Karnataka Water Resources Minister Basavaraj Bommai said the government is planning to provide drinking water to Bangalore Urban and Chikkaballapur Districts from Yettinahole in Hassan District.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X