ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾರದರ್ಶಕ ಭ್ರಷ್ಟಾಚಾರವೇ ಸಿಎಂ ಸಾಧನೆ

By Mrutyunjaya Kalmat
|
Google Oneindia Kannada News

M Veerappa Moily
ಬೆಂಗಳೂರು, ಜ. 30 : ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವೆಲ್ಲ ಪಾರದರ್ಶಕವಾಗಿ ನಡೆಯುತ್ತಿದೆ. ಇದು ಬಿಜೆಪಿ ಸರಕಾರದ ಸಾಧನೆ ಎಂದು ಕೇಂದ್ರದ ಕಾನೂನು ಸಚಿವ ವೀರಪ್ಪ ಮೊಯ್ಲಿ ಕಟುವಾಗಿ ಟೀಕಿಸಿದ್ದಾರೆ.

ಕೆಪಿಸಿಸಿ ಕಚೇರಿಯ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಕರ್ನಾಟಕದಲ್ಲಿ ಇದುವರೆಗೂ ಆಡಳಿತ ಪಾರದರ್ಶಕವಾಗಿತ್ತು. ಆದರೆ ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ಭ್ರಷ್ಟಾಚಾರವೂ ಪಾರದರ್ಶಕವಾಗಿದೆ ಎಂದರು. ಕಂಸನ ಕೊನೆಗಾಲದಲ್ಲಿ ಎಲ್ಲಿ ನೋಡಿದರೂ ಅಲ್ಲಿ ಶ್ರೀಕೃಷ್ಣನೇ ಕಾಣುತ್ತಿದ್ದಂತೆ ಯಡಿಯೂರಪ್ಪರಿಗೆ ಎಲ್ಲಿ ನೋಡಿದಲ್ಲಿ ರಾಜ್ಯಪಾಲರೇ ಕಾಣುತ್ತಿದ್ದಾರೆ. ಇದರಿಂದ ಸರಕಾರ ಹೆಚ್ಚು ಕಾಲ ಉಳಿಯುವುದಿಲ್ಲ ಮೊಯ್ಲಿ ಭವಿಷ್ಯ ನುಡಿದರು.

ಭೂ ಹಗರಣ, ಗಣಿ ಹಗರಣ ಸೇರಿದಂತೆ ಎಲ್ಲ ಹಗರಣಗಳು ಪಾರದರ್ಶಕವಾಗಿದೆ. ಇದೇ ಯಡಿಯೂರಪ್ಪರ ಸರಕಾರದ ಸಾಧನೆ ಎಂದು ಟೀಕಿಸಿದರು. ರಾಜ್ಯದಲ್ಲಿ ಭ್ರಷ್ಟಾಚಾರ ಎಷ್ಟು ಭಯಾನಕವಾಗಿದೆ ಎಂದರೆ ಎಲ್ಲವೂ ಬ್ಯಾಂಕು ಖಾತೆಯ ಮೂಲಕ, ಡಿಡಿ, ಚೆಕ್ಕುಗಳ ಮೂಲಕ ನಡೆಯುತ್ತಿದೆ. ಇದು ಆತಂಕದ ಸಂಗತಿ. ಇಂತಹ ಸನ್ನಿವೇಶವನ್ನು ನಾವೆಂದೂ ಕಂಡಿರಲಿಲ್ಲ ಮೊಯ್ಲಿ ಅಸಮಾಧಾನ ವ್ಯಕ್ತಪಡಿಸಿದರು.

English summary
Union Law and Justice Minister Veerappa Moily on Saturday said that the present Karnataka government headed by the Bharatiya Janata Party (BJP) is the "most transparent corrupt government" in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X