ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಡಾ ಅತಾನು ಡೇ ಉಪನ್ಯಾಸ

By Shami
|
Google Oneindia Kannada News

Dr. Atanu Dey, Netcore solutions
ಬೆಂಗಳೂರು, ಜ. 29 : ಇಂದು ಶನಿವಾರ ಸಂಜೆ ಬೆಂಗಳೂರಿನಲ್ಲಿ ಒಂದು ಉಪನ್ಯಾಸ ಮತ್ತು ಮುಕ್ತ ಸಮಾಲೋಚನೆ ಸಭೆ ಏರ್ಪಾಟಾಗಿದೆ. "ಉತ್ತಮ ಭಾರತೀಯ ಸಮಾಜ ಕಟ್ಟುವ ಪರಿ ಎಂತು" ಎಂಬ ಚಿಂತನೆಯಲ್ಲಿ ತೊಡಗಿರುವ ಭಾರತೀಯ ಜನತಾ ಪಕ್ಷದ ಸ್ನೇಹಿತರು ಕೂಡಿ ವ್ಯವಸ್ಥೆ ಮಾಡಿರುವ ಈ ಸಭೆಯಲ್ಲಿ ಖ್ಯಾತ ಅರ್ಥಶಾಸ್ತ್ರಜ್ಞ ಡಾ.ಅತಾನು ಡೇ ಉಪನ್ಯಾಸ ಮಾಡುತ್ತಾರೆ. ವಿಷಯ : ಭಾರತ ಬಡ ದೇಶ, ಯಾಕೆ? Why is India Poor?

ಸ್ಥಳ : ಶೋಭಾ ಐರಿಸ್, ಕ್ಲಬ್ ಹೌಸ್. ದೇವರಬೀಸನಹಳ್ಳಿ. ಸರ್ಜಾಪುರ ಔಟರ್ ರಿಂಗ್ ರಸ್ತೆ. ಬೆಂಗಳೂರು. ಸ್ಥಳ ಸೂಚಿ : ಪಾಸ್ ಪೋರ್ಟ್ ಸೇವಾ ಕೇಂದ್ರ ಅಥವಾ ಅದ್ವೈತ್ ಹುಂಡೈ ಶೋರೂಮಿಗೆ ಸಮೀಪ. ಇಂಟೆಲ್ ಕಚೇರಿ ಎದುರುಗಡೆ. ಸಮಯ : ಸಂಜೆ 4 ರಿಂದ 6. ನೆರವು : ವಿಜಯ್ ಚಡ.

ಡಾ. ಅತಾನು ಡೇ ಅರ್ಥಶಾಸ್ತ್ರಜ್ಞರು. ಅವರ ಅತೀವ ಆಸಕ್ತಿಯ ಕ್ಷೇತ್ರ ಅಭಿವೃದ್ಧಿ ಅರ್ಥಶಾಸ್ತ್ರ. ವಿಶೇಷ ಆಸಕ್ತಿ ಕ್ಷೇತ್ರಗಳು: ಶಿಕ್ಷಣ, ತಂತ್ರಜ್ಞಾನ ಮತ್ತು ಗ್ರಾಮೀಣ ಜನತೆಯ ಅಭ್ಯುದಯ. ಈ ಮುನ್ನ ಅವರು ಅಮೆರಿಕಾದ ಸಿಲಿಕಾನ್ ಕಣಿವೆಯ ಹಿವ್ಲೆಟ್ ಪ್ಯಾಕಾರ್ಡ್ ನಲ್ಲಿ ಸೇವೆ ಸಲ್ಲಿಸಿದ್ದಾರೆ. 2001-02ರ ಅವಧಿಯಲ್ಲಿ ಅವರು ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ರಾಯಿಟರ್ ಫೆಲೋ ಆಗಿದ್ದರು. ಬರ್ಕಲಿಯ ಕ್ಯಾಲಿಫೋರ್ನಿಯಾ ವಿವಿಯಿಂದ ಅರ್ಥಶಾಸ್ತ್ರದಲ್ಲಿ ಪಿಎಚ್ ಡಿ, ರುಟ್ ಗರ್ ವಿವಿ ಮತ್ತು ಐಐಟಿ ಕಾನ್ ಪುರದಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಸ್ನಾತಕೋತ್ತರ ಪದವಿ ಅವರ ಸಂಚಯಿತ ಶೈಕ್ಷಣಿಕ ಸಂಪತ್ತಿಗೆ ಕೆಲವು ಉದಾಹರಣೆಗಳಾಗಿವೆ.

ಸದ್ಯ ಅವರು ಸ್ಯಾನ್ ಫ್ರಾನ್ಸಿಸ್ ಕೊ ಬೇ ಏರಿಯಾದಲ್ಲಿ ನೆಲೆಸಿದ್ದು ಮುಂಬೈನಲ್ಲಿರುವ ನೆಟ್ ಕೋರ್ ಸಲೂಷನ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾರತದ ಅಭಿವೃದ್ಧಿಗೋಸ್ಕರ ಮೀಸಲಾದ ಅವರ ಬ್ಲಾಗು www.deeshaa.org. [ಬಡತನ]

English summary
Why is India poor? An iteractive session with renowned netcore solutions Economist Dr. Atanu Dey. A Bangalore event (29 Jan) hosted by friends of BJP, how to build better India?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X