ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಡಿತರ ಚೀಟಿ, ಎಲ್ ಪಿಜಿ ಗೊಂದಲ : ಸ್ಪಷ್ಟೀಕರಣ

By Prasad
|
Google Oneindia Kannada News

Attention LPG connection holders
ಬೆಂಗಳೂರು, ಜ. 29 : ಗ್ಯಾಸ್ ಏಜೆನ್ಸಿಗೆ ನೀಡಬೇಕಾಗಿರುವ ದಾಖಲೆಗಳ ಕುರಿತು ಮತ್ತು ಕೊನೆಯ ದಿನಾಂಕಕ್ಕೆ ಸಂಬಂಧಿಸಿದಂತೆ ಗ್ರಾಹಕರಿಗೆ ಅನೇಕ ಗೊಂದಲಗಳು ಸೃಷ್ಟಿಯಾಗಿವೆ.

ಪಡಿತರ ಚೀಟಿ ಇಲ್ಲದಿದ್ದರೆ ಏನು ಮಾಡಬೇಕು? ಬಾಡಿಗೆ ಮನೆಯಲ್ಲಿದ್ದರೇ ದಾಖಲೆ ನೀಡಬೇಕಾ? ಒಂದೇ ಮನೆಯಲ್ಲಿ ಎರಡೆರಡು ಗ್ಯಾಸ್ ಕನೆಕ್ಷನ್ ಇದ್ದರೆ ಏನು ಮಾಡಬೇಕು? ಎರಡು ಗ್ಯಾಸ್ ಕನೆಕ್ಷನ್ ಗಳಿಗೆ ಒಂದೇ ವಿದ್ಯುಚ್ಛಕ್ತಿ ಬಿಲ್ ಇದ್ದರೆ ಹೇಗೆ ಮಾಡಬೇಕು? ಇತ್ಯಾದಿ ಪ್ರಶ್ನೆಗಳಿಗೆ ಗ್ರಾಹಕರು ಉತ್ತರ ಕಂಡುಕೊಳ್ಳಲು ತಡಕಾಡುತ್ತಿದ್ದಾರೆ.

ವಿದ್ಯುಚ್ಛಕ್ತಿ ಬಿಲ್ಲಿನೊಂದಿಗೆ ರೇಷನ್ ಕಾರ್ಡ್ ನ ಜೆರಾಕ್ಸ್ ಪ್ರತಿಯನ್ನು ಸಲ್ಲಿಸಬೇಕೆಂದು ಈಗಾಗಲೆ ಸೂಚಿಸಿರುವ ಸರಕಾರ ಈ ಗೊಂದಲಗಳಿಗೆ ತಕ್ಕಂತೆ ಕೆಲ ಸೃಷ್ಟೀಕರಣಗಳನ್ನು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಆಯುಕ್ತರು ನೀಡಿದ್ದಾರೆ. ನೆನಪಿನಲ್ಲಿಡಿ, ದಾಖಲಿ ಸಲ್ಲಿಸಲು ಕೊನೆಯ ದಿನಾಂಕ : ಫೆಬ್ರವರಿ 10, 2011.

ಸ್ಪಷ್ಟೀಕರಣಗಳು

* ಗ್ಯಾಸ್ ಸಂಪರ್ಕ ಹೊಂದಿದ್ದು ರೇಷನ್ ಕಾರ್ಡ್ ಇಲ್ಲದಿದ್ದ ಪಕ್ಷದಲ್ಲಿ - ಗ್ಯಾಸ್ ಸಂಪರ್ಕದ ಸಂಖ್ಯೆಯ ಜೊತೆಗೆ ವಿದ್ಯುತ್ ಬಿಲ್‌ನ ಜೆರಾಕ್ಸ್ ಪ್ರತಿನ್ನು ನೀಡತಕ್ಕದ್ದು.

* ಗ್ಯಾಸ್ ಸಂಪರ್ಕ ಹೊಂದಿದ್ದು ವಿದ್ಯುತ್ ಮೀಟರ್ ಇಲ್ಲದಿರುವವರು ಇದರ ಬಗ್ಗೆ ಧೃಢೀಕರಣ ನೀಡಿದಲ್ಲಿ ಸ್ಥಳ ತನಿಖೆ ಮಾಡಿ ಪರಿಶೀಲಿಸಲಾಗುವುದು.

* ಒಂದೇ ವಿದ್ಯುಚ್ಛಕ್ತಿ ಮೀಟರ್‌ನೊಂದಿಗೆ ಒಬ್ಬರಿಗಿಂತ ಹೆಚ್ಚಿನ ಗ್ಯಾಸ್ ಸಂಪರ್ಕದವರು ವಿದ್ಯುತ್‌ನ್ನು ಹಂಚಿಕೊಂಡಿದ್ದಲ್ಲಿ ಅಂತಹವರು ವಿದ್ಯುತ್‌ಚ್ಛಕ್ತಿ ಬಿಲ್ಲಿನ ಜೊತೆ ಗ್ಯಾಸ್ ಸಂಪರ್ಕದ ಸಂಖ್ಯೆ ನೀಡತಕ್ಕದ್ದು. ಇಂತಹವುಗಳನ್ನು ತನಿಖೆ ಮಾಡಿ ಪರಿಶೀಲಿಸಲಾಗುವುದು.

* ಬಾಡಿಗೆದಾರರು ಸಹ ವಿದ್ಯುಚ್ಛಕ್ತಿ ಬಿಲ್ಲಿನ ಜೊತೆ ಪಡಿತರ ಚೀಟಿಯ ಜೆರಾಕ್ಸ್ ಪ್ರತಿಯನ್ನು ನೀಡತಕ್ಕದ್ದು.

* ಇಲ್ಲಿಯವರೆಗೂ ದಾಖಲೆಗಳನ್ನು ನೀಡದೆ ಇರುವ ಗ್ರಾಹಕರು ತಮ್ಮ ದಾಖಲೆಗಳನ್ನು ಸಲ್ಲಿಸಲು ದಿನಾಂಕ ಫೆಬ್ರವರಿ 10, 2011ರವರೆಗೆ ಕಾಲಾವಕಾಶವನ್ನು ನೀಡಲಾಗಿದೆ. [ಅಡುಗೆ ಅನಿಲ]

English summary
Residents of Karnataka have to submit a copy of ration card and electricity bill to the lpg distributors. This is made mandatory by food and civil supplies department and consumer affairs department. Last date is extended till 10th Feb.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X