ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಪಲ್ ಐಪ್ಯಾಡ್ ಕೊಳ್ಳಿರೋ ಭಾರತೀಯರೆಲ್ಲರೂ

By Prasad
|
Google Oneindia Kannada News

Apple Ipad In India
ಬೆಂಗಳೂರು, ಜ. 28 : ಸ್ಟೀವ್ ಜಾಬ್ ನ ಆಪಲ್ ಟೆಕ್ ತೋಟದಲ್ಲಿ ಬೆಳೆದ ಅಚ್ಚರಿಯ ಐಪ್ಯಾಡ್ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿದೆ. ಬಿಡುಗಡೆಗೆ ಮುನ್ನವೇ ಹೊಸ ಹವಾ ಸೃಷ್ಟಿಸಿ, ಬೆರಗುಗೊಳಿಸಿದ ಐಪ್ಯಾಡ್ ಸುಮಾರು ಒಂದು ವರ್ಷದ ನಂತರ ಭಾರತದ ಮಾರುಕಟ್ಟೆಗೆ ಕಾಲಿಟ್ಟಿದೆ. ಇನ್ನು ಮುಂದೆ ಇದನ್ನು ಖರೀದಿಸಲು ದೂರದ ಅಮೆರಿಕಕ್ಕೆ ಹೋಗಬೇಕಿಲ್ಲ ಅಥವಾ ವಿದೇಶಕ್ಕೆ ಹೋದವರಲ್ಲಿ 'ನನಗೊಂದು ಆಪಲ್ ತನ್ನಿ' ಅಂತ ದುಂಬಾಲು ಬೀಳಬೇಕಿಲ್ಲ.

ಹೌದು, ಕೊನೆಗೂ ಆಪಲ್ ಐಪ್ಯಾಡ್ ಭಾರತಕ್ಕೆ ತಲುಪಿದೆ. ಇನ್ನು ಮುಂದೆ ನಿಮಗೆ ಹತ್ತಿರವಿರುವ ಆಪಲ್ ಮಳಿಗೆಗಳಲ್ಲಿ ಅಥವಾ ಆನ್ ಲೈನ್ ಐ-ಸ್ಟೋರ್ ನಲ್ಲಿ ಐಪ್ಯಾಡ್ ಖರೀದಿಸಬಹುದು. ಅರೇ, ಪ್ರೇಮಿಗಳ ದಿನ ಹತ್ತಿರ ಬಂದಿದೆ.. ನನ್ನ ಪ್ರೇಮಿಗೆ ಏನು ಗಿಫ್ಟ್ ಕೊಡ್ಲಿ ಅಂತ ಯೋಚಿಸುತ್ತಿದ್ದವರಿಗೆ "ಆಪಲ್ ಐಪ್ಯಾಡ್"ಗಿಂತ ಉತ್ತಮವಾದ ಉಡುಗೊರೆ ಯಾವುದಿದೆ?

ದರವೆಷ್ಟು? : ಭಾರತದಲ್ಲಿ ಆಪಲ್ ಐಪ್ಯಾಡ್ ದರ 27,990 ರು.ನಿಂದ ಆರಂಭವಾಗುತ್ತದೆ. 16 ಜಿಬಿ ಸಂಗ್ರಹ ಸಾಮರ್ಥ್ಯದ ಮೂಲ ವರ್ಷನ್ ಗೆ ಸುಮಾರು 33 ಸಾವಿರ ರು. ಈಗ ಒಟ್ಟು 6 ಆವೃತ್ತಿಗಳಲ್ಲಿ ಐಪ್ಯಾಡ್ ಲಭ್ಯವಿದೆ. ವೈ-ಫೈ ಸೌಲಭ್ಯ ಮಾತ್ರ ಇರುವ 16ಜಿಬಿ, 32 ಜಿಬಿ ಅಥವಾ 64 ಜಿಬಿ ಅಥವಾ ವೈ-ಫೈ ಮತ್ತು 3ಜಿ ಸೌಲಭ್ಯವಿರುವ ಐಪ್ಯಾಡ್ ದೊರಕುತ್ತವೆ. ಇದರಲ್ಲಿ ವೈ-ಫೈ ಸೌಲಭ್ಯ ಮಾತ್ರವಿರುವ ಐಪ್ಯಾಡ್ ಗೆ 27,990 ರು. ಮತ್ತು ವೈ-ಫೈ+3ಜಿ ಸೌಲಭ್ಯವಿರುವ 64 ಜಿಬಿ ಐಪ್ಯಾಡ್ ಗೆ ಸುಮಾರು 44,990 ರು. ಇರಲಿದೆ.

ಭಾರತೀಯರ ಕೈಗೆ ಇಲ್ಲಿಯವರೆಗೆ ಈ ಐಪ್ಯಾಡ್ ಸಿಕ್ಕಿಲ್ಲ ಅಂತಲ್ಲ. ಒಂದು ವಿಶ್ಲೇಷಣೆ ಪ್ರಕಾರ, ಭಾರತೀಯರಲ್ಲಿ ಈಗ ಸುಮಾರು 40 ಸಾವಿರ ಆಪಲ್ ಐಪ್ಯಾಡ್ ಇವೆ. ಇವರೆಲ್ಲ ವಿದೇಶದಿಂದ ಖರೀದಿಸಿದವರು. ಅಥವಾ ಇ-ಕಾಮರ್ಸ್ ಮೂಲಕ ಖರೀದಿಸಿದವರು. ಇನ್ನು ಈ ಚಿಂತೆಯಿಲ್ಲ. ನಿಮಗೆ ಹತ್ತಿರವಿರುವ ಆಪಲ್ ಸ್ಟೋರ್ ನಿಂದ ಖರೀದಿಸಬಹುದು.

ಐಪ್ಯಾಡ್ ನಲ್ಲಿ ದಟ್ಸ್ ಕನ್ನಡ ಓದಿ : ಈ ಐಪ್ಯಾಡ್ ಈಗ ಕನ್ನಡ ಸೇರಿದಂತೆ ಭಾರತದ ಭಾಷೆಗಳಿಗೆ ಸಪೋರ್ಟ್ ಮಾಡುತ್ತದೆ. ಇದರಲ್ಲಿ ಕನ್ನಡ, ತೆಲುಗು, ಹಿಂದಿ, ತಮಿಳು ಸೇರಿದಂತೆ ಅನೇಕ ಭಾರತೀಯ ಭಾಷೆಗಳನ್ನು ಓದಬಹುದು. ಸಂತೋಷದ ಸುದ್ದಿ ಎಂದರೆ ಇದರಲ್ಲಿ ದಟ್ಸ್ ಕನ್ನಡವನ್ನೂ ಕೂಡ ಓದಬಹುದು.

ಆಪಲ್ ಐಪ್ಯಾಡ್ ಜನರಲ್ಲಿ ಮೂಡಿಸಿದ ಕ್ರೇಜ್ ಸಾಮಾನ್ಯದಲ್ಲ. ಬಿಡುಗಡೆಯ ದಿನವಂತೂ ಎಲ್ಲ ಆಪಲ್ ಸ್ಟೋರ್ ಗಳ ಮುಂದೆ ಕಿಲೋಮೀಟರ್ ಉದ್ದಕ್ಕೆ ಜನರು ಕ್ಯೂ ನಿಂತಿದ್ದರು. ಒಂದು ಅಂದಾಜಿನ ಪ್ರಕಾರ ಐಪ್ಯಾಡ್ ನಿಂದ ಆಪಲ್ ಸುಮಾರು ಒಂದು ಸಾವಿರ ಕೋಟಿ ಡಾಲರ್ ಲಾಭ ಗಳಿಸಿದೆಯಂತೆ! ಇಂಟ್ರೆಸ್ಟಿಂಗ್ ವಿಷಯವೆಂದರೆ, ಕಳೆದ ವರ್ಷ ಜನವರಿ 27ರಂದು ಈ ಐಪಾಡ್ ಅಮೆರಿಕದಲ್ಲಿ ಬಿಡುಗಡೆಗೊಂಡಿತು. ಸರಿಯಾಗಿ ಒಂದು ವರ್ಷದ ನಂತರ ಇಲ್ಲಿಗೆ ಬಂದಿದೆ.

ಭಾರತಕ್ಕೆ ಐಪಾಡ್ ಬಂದಿರುವುದನ್ನು ಕಂಡು ನಮ್ಮ ದೇಶದ ಮೊಬೈಲ್ ಸೇವಾದಾರ ಕಂಪನಿಗಳು ಸುಮ್ಮನೆ ಕೂತಿಲ್ಲ. ಬಿಎಸ್ಎನ್ಎಲ್ ಐಪ್ಯಾಡ್ ಗೆ 3ಜಿ ಸೌಲಭ್ಯ ನೀಡುವ ಯೋಜನೆ ಹೊಂದಿದೆ. ಆದರೆ ಏರ್ ಟೆಲ್, ವೊಡಾಫೋನ್ ಮತ್ತು ಐಡಿಯಾ ಮೈಕ್ರೊ ಸಿಮ್ ಕಾರ್ಡ್ ಮೂಲಕ ಐಪಾಡ್ ಗೆ ಸಪೋರ್ಟ್ ನೀಡಲಿವೆ. [ಕನ್ನಡ ಭಾಷೆ]

English summary
Apple Ipad has been launched in India in January 2011. Do not forget to gift your love an Apple Ipad on Valentine's day. Kannada readers should rejoice as Appla Ipad supports Kannada language. Go to nearby Apple Istore and buy the gadget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X