ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರ ಜೈಲಿಗೆ ಸ್ಥಳಾಂತರಿಸಿ : ಅಫ್ಜಲ್ ಗುರು

By Mrutyunjaya Kalmat
|
Google Oneindia Kannada News

Afzal Guru
ನವದೆಹಲಿ, ಜ. 28 : ಮರಣದಂಡನೆ ಶಿಕ್ಷೆ ಎದುರಿಸುತ್ತಿರುವ ಸಂಸತ್ ದಾಳಿಯ ರೂವಾರಿ ಮೊಹಮದ್ ಅಫ್ಜಲ್ ಗುರು ತನ್ನನ್ನು ದೆಹಲಿ ಜೈಲಿನಿಂದ ಜಮ್ಮು ಕಾಶ್ಮೀರ ಜೈಲಿಗೆ ಸ್ಥಳಾಂತರಿಸುವಂತೆ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ದಾಖಲಿಸಿದ್ದಾನೆ.

ತನ್ನನ್ನು ನೋಡಲು ಬರುವ ಕುಟುಂಬದ ಸದಸ್ಯರಿಗೆ ಇದರಿಂದ ಅನುಕೂಲವಾಗುತ್ತದೆ ಎಂದು ಅರ್ಜಿಯಲ್ಲಿ ಅಫ್ಜಲ್ ತಿಳಿಸಿದ್ದಾನೆ. ಡಿಸೆಂಬರ್ 13 , 2001 ರಲ್ಲಿ ಐವರು ಪಾತಕಿಗಳೊಂದಿಗೆ ಕಾರಿಗೆ ಸರಕಾರದ ಸ್ಟಿಕರ್ ಅಂಟಿಸಿ ಸಂಸತ್ ಪ್ರವೇಶಿಸಿ 5 ಜನ ಪೋಲಿಸ್ ಸೇರಿ 7 ಜನರ ಮೇಲೆ ಗುಂಡಿನ ಮಳೆಗೈದು ಹತ್ಯೆ ಮಾಡಿದ್ದ. ಡಿಸೆಂಬರ್ 2002 ರಲ್ಲಿ ದೆಹಲಿ ಟ್ರಯಲ್ ಕೋರ್ಟ್ ಉಗ್ರನಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು.

ಈ ತೀರ್ಪಿನ ಒಂದು ವರ್ಷದ ನಂತರ ದೆಹಲಿ ಉಚ್ಚ ನ್ಯಾಯಾಲಯ ಕೂಡ ತೀರ್ಪನ್ನು ಎತ್ತಿ ಹಿಡಿದಿತ್ತು. 2005 ರಲ್ಲಿ ಸರ್ವೋಚ್ಚ ನ್ಯಾಯಾಲಯ ಅಫ್ಜಲ್ ಗುರು ಮಾಡಿದ್ದ ಮನವಿಯನ್ನು ತಿರಸ್ಕರಿಸಿ ಮರಣದಂಡನೆ ಖಾಯಂ ಆದೇಶ ನೀಡಿತ್ತು. ಈಗ ಕೇಂದ್ರ ಗೃಹ ಖಾತೆಯ ಮೂಲಕ ರಾಷ್ಟ್ರಪತಿ ಬಳಿ ಅಫ್ಜಲ್ ದಯಾ ಅರ್ಜಿ ಸಲ್ಲಿಸಿದ್ದು, ಇದರ ತೀರ್ಪು ಇನ್ನೂ ಇತ್ಯರ್ಥವಾಗಬೇಕಿದೆ.(ಅಫ್ಜಲ್ ಗುರು)

English summary
Mohammed Afzal Guru, given the death sentence for his role in the attack on the Indian Parliament in 2001, has asked to be moved from a jail in Delhi to one in Jammu and Kashmir
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X