ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೇಸ್ ಭೂಪತಿ ಅಸ್ಟ್ರೇಲಿಯನ್ ಓಪನ್ ಫೈನಲ್ ಗೆ

By Mahesh
|
Google Oneindia Kannada News

Australian Open: Indian Express in final again
ಮೆಲ್ಬೋರ್ನ್, ಜ. 27: ಸುಮಾರು 9 ವರ್ಷಗಳ ನಂತರ ಟೆನ್ನಿಸ್ ಜಗತ್ತಿನಲ್ಲಿ ಇಂಡಿಯನ್ ಎಕ್ಸ್ ಪ್ರೆಸ್ ಎಂದೇ ಖ್ಯಾತರಾಗಿರುವ ಲಿಯಾಂಡರ್ ಪೇಸ್ ಹಾಗೂ ಮಹೇಶ್ ಭೂಪತಿ ಅವರು ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಅಂತಿಮ ಹಂತ ತಲುಪಿದ್ದಾರೆ. ಇಂದು ನಡೆದ ರೋಚಕ ಸೆಮಿಫೈನಲ್ ಪಂದ್ಯದಲ್ಲಿ ಬೆಲಾರುಸ್ ನ ಜೋಡಿಯನ್ನು ಸೋಲಿಸುವ ಮೂಲಕ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ.

ಎರಡನೇ ಸೀಡ್ ಜೋಡಿಯಾದ ಬೆಲಾರುಸ್ ನ ಮ್ಯಾಕ್ಸ್ ಮಿರ್ನಿ ಹಾಗೂ ಕೆನಡಾದ ಡೆನಿಯಲ್ ನೆಸ್ಟರ್ ಅವರನ್ನು 7-6(5) 4-6 6-3 ರಲ್ಲಿ ಪೇಸ್ ಭೂಪತಿ ಜೋಡಿ ಸೋಲಿಸಿದೆ. ಫೈನಲ್ ಪಂದ್ಯದಲ್ಲಿ ಅಮೆರಿಕದ ಅವಳಿಗಳಾದ ಮೈಕ್ ಹಾಗೂ ಬಾಬ್ ಬ್ರಾಯನ್ ಅವರನ್ನು ಇಂಡಿಯನ್ ಎಕ್ಸ್ ಪ್ರೆಸ್ ಜೋಡಿ ಎದುರಿಸಲಿದೆ.

1999ರಲ್ಲಿ ಫೈನಲ್ ಹಂತ ತಲುಪಿದ್ದ ಪೇಸ್ ಹಾಗೂ ಭೂಪತಿ ಜೋಡಿ ಬೋರ್ಕ್ ಮನ್ ಹಾಗೂ ಪ್ಯಾಟ್ ರಾಫ್ಟರ್ ರಂಥ ಬಲಿಷ್ಠ ಎದುರಾಳಿಗಳ ವಿರುದ್ಧ ಐದು ಸೆಟ್ ಗಳಲ್ಲಿ ವಿರೋಚಿತ ಸೋಲು ಕಂಡಿದ್ದರು. ಆದರೆ, ಇತ್ತೀಚೆಗೆ ಚೆನ್ನೈ ಓಪನ್ ಗೆದ್ದಿರುವ ಪೇಸ್-ಭೂಪತಿ ಜೋಡಿ ಒಟ್ಟಾರೆ 24 ಪ್ರಶಸ್ತಿಗಳನ್ನು ಒಟ್ಟಿಗೆ ಗಳಿಸಿದೆ. ವೈಯಕ್ತಿಕವಾಗಿ ಪೇಸ್ 12 ಗ್ರ್ಯಾಂಡ್ ಸ್ಲಾಮ್ ಹಾಗೂ ಭೂಪತಿ 11 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗಳಿಸಿದ್ದಾರೆ. ಭಾರತದ ಇತರೆ ಆಟಗಾರರು ಆಸ್ಟ್ರೇಲಿಯನ್ ಓಪನ್ ನಿಂದ ಹೊರಬಿದ್ದಿರುವುದರಿಂದ ಈ ಜೋಡಿಯ ಮೇಲೆ ಭಾರಿ ನಿರೀಕ್ಷೆಯಿದೆ. [ಟೆನ್ನಿಸ್]

English summary
After 9 years of waiting, the Indian Express - Leander Paes and Mahesh Bhupathi are on the way to grab the title of the grand slam. The duo on Thursday, Jan 27 entered into the men's doubles finals of the Australian Open.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X