ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ 11 ಸಾಧಕರಿಗೆ ಪ್ರತಿಷ್ಠಿತ ಪದ್ಮ ಪ್ರಶಸ್ತಿ

By Prasad
|
Google Oneindia Kannada News

Azim Premji
ನವದೆಹಲಿ, ಜ. 25 : 2010ನೇ ಸಾಲಿನ ಪದ್ಮ ಪ್ರಶಸ್ತಿಗಳಿಗೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅಂಕಿತ ಹಾಕಿದ್ದು, ಕರ್ನಾಟಕದಿಂದ ಉದ್ಯಮಿ ಅಜೀಂ ಪ್ರೇಂಜಿ, ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಪತ್ರಿಕೋದ್ಯಮಿ ಟಿಜೆಎಸ್ ಜಾರ್ಜ್ ಸೇರಿದಂತೆ 11 ಜನರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳು ಸಂದಿವೆ.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿದ್ದಕ್ಕೆ ಒಟ್ಟು 128 ಸಾಧಕರಿಗೆ ಪದ್ಮ ಪ್ರಶಸ್ತಿಗಳು ಸಂದಿವೆ. 13 ಜನರಿಗೆ ಪದ್ಮ ವಿಭೂಷಣ, 31 ಮಂದಿಗೆ ಪದ್ಮಭೂಷಣ ಮತ್ತು 84 ಜನರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. ಇವರಲ್ಲಿ 31 ಮಹಿಳೆಯರು ಇರುವುದು ವಿಶೇಷ. ಈ ಬಾರಿ ಒಟ್ಟು 1303 ಜನರು ಈ ಪ್ರತಿಷ್ಠಿತ ಪ್ರಶಸ್ತಿಗಾಗಿ ಅರ್ಜಿ ಗುಜರಾಯಿಸಿದ್ದರು.

ಕಲೆ, ಸಮಾಜ ಸೇವೆ, ವಿಜ್ಞಾನ ಮತ್ತು ತಂತ್ರಜ್ಞಾನ, ವ್ಯಾಪಾರ ಮತ್ತು ಉದ್ಯಮ, ಸಾಹಿತ್ಯ, ವೈದ್ಯಕೀಯ, ಶಿಕ್ಷಣ, ಕ್ರೀಡೆ ಮುಂತಾದ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದನ್ನು ಗುರುತಿಸಿ ಈ ಗೌರವವನ್ನು ನೀಡಲಾಗುತ್ತದೆ. ರಾಷ್ಟ್ರಪತಿ ಭವನದಲ್ಲಿ ಮಾರ್ಚ್ ಅಥವಾ ಏಪ್ರಿಲ್ ನಲ್ಲಿ ನಡೆಸಲಾಗುವ ಸಮಾರಂಭದಲ್ಲಿ ಈ ಪ್ರಶಸ್ತಿ ವಿಜೇತರನ್ನು ಗೌರವಿಸಲಾಗುತ್ತದೆ.

ಓದಿ : ಸಚಿನ್ ಗೆ 'ಭಾರತ ರತ್ನ' ಹೆಚ್ಚೂಕಡಿಮೆ ಖಚಿತ

ಪ್ರಶಸ್ತಿ ಪಡೆದ ಕರ್ನಾಟಕದ ಗಣ್ಯರು

ಪದ್ಮವಿಭೂಷಣ

* ಅಜೀಂ ಪ್ರೇಂಜಿ - ವ್ಯಾಪಾರ ಮತ್ತು ಉದ್ಯಮ

ಪದ್ಮಭೂಷಣ

* ಆರ್ ಕೆ ಶ್ರೀಕಂಠನ್ - ಕಲೆ, ಸಂಗೀತ
* ಕ್ರಿಸ್ ಗೋಪಾಲಕೃಷ್ಣನ್ - ವ್ಯಾಪಾರ ಮತ್ತು ಉದ್ಯಮ
* ಟಿಜೆಎಸ್ ಜಾರ್ಜ್ - ಸಾಹಿತ್ಯ ಮತ್ತು ಶಿಕ್ಷಣ
* ರಾಮದಾಸ್ ಮಾಧವ ಪೈ - ಸಾಹಿತ್ಯ ಮತ್ತು ಶಿಕ್ಷಣ

ಪದ್ಮಶ್ರೀ

* ಗಿರೀಶ್ ಕಾಸರವಳ್ಳಿ - ಕಲೆ ಮತ್ತು ಚಿತ್ರನಿರ್ಮಾಣ
* ನೋಮಿತಾ ಚಾಂಡಿ - ಸಮಾಜ ಸೇವೆ
* ಅನಿತಾ ರೆಡ್ಡಿ - ಸಮಾಜ ಸೇವೆ
* ಅನಂತ್ ದರ್ಶನ್ ಶಂಕರ್ - ಸಾರ್ವಜನಿಕ ವ್ಯವಹಾರ
* ಪ್ರೊ.ಎಂ. ಅಣ್ಣಾಮಲೈ - ವಿಜ್ಞಾನ ಮತ್ತು ಇಂಜಿನಿಯರಿಂಗ್
* ದೇವನೂರು ಮಹಾದೇವ - ಸಾಹಿತ್ಯ ಮತ್ತು ಶಿಕ್ಷಣ

English summary
11 people from Karnataka have been recognized and selected for Padma awards, India's highest civilian awards. Karnataka Padma awardees include Girish Kasaravalli, TJS George, Azim Premji, Davenur Mahadev etc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X