ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಸ್ ನ ಹುಟ್ಟುಹಬ್ಬ, ಮೈಸೂರು ಮಲ್ಲಿಗೆ 100

By Mahesh
|
Google Oneindia Kannada News

Mysore Mallige 100th show, Rangashankara
ಬೆಂಗಳೂರು, ಜ.25: ಪ್ರೇಮ ಕವಿ, ಒಲವಿನ ಕವಿ ಕೆಎಸ್ ನರಸಿಂಹಸ್ವಾಮಿ ಅವರ ಹುಟ್ಟುಹಬ್ಬ ಹಾಗೂ ಬಹು ಜನಪ್ರಿಯ "ಮೈಸೂರು ಮಲ್ಲಿಗೆ" ಕವನ ಮಾಲಿಕೆಯ ನಾಟಕ ರೂಪಾಂತರದ ನೂರನೇ ಪ್ರದರ್ಶನ ಒಟ್ಟಿಗೆ ಸೇರಿ ಕಲಾರಸಿಕರಿಗೆ ರಸದೌತಣ ನೀಡಲಿದೆ. ನಗರದ ಆಪ್ತ ರಂಗಮಂದಿರ ರಂಗಶಂಕರದಲ್ಲಿ ನಾಳೆ(ಜ.26)ರಂದು ಕಲಾಗಂಗೋತ್ರಿ ತಂಡದಿಂದ ಯಶಸ್ವಿ ನೂರನೇ ಪ್ರದರ್ಶನವನ್ನು ಮೈಸೂರು ಮಲ್ಲಿಗೆ ನಾಟಕ ಕಾಣಲಿದೆ.

40ನೇ ವಾರ್ಷಿಕೋತ್ಸವ ಮುಗಿಸಿರುವ ಕಲಾಗಂಗೋತ್ರಿ ತಂಡ ಇತ್ತೀಚೆಗಷ್ಟೇ ತನ್ನ ಇನ್ನೊಂದು ಉತ್ತಮ ಯಶಸ್ವಿ ಪ್ರಯೋಗವಾದ 'ಮುಖ್ಯಮಂತ್ರಿ' ನಾಟಕದ 500ನೇ ಪ್ರದರ್ಶನ ಮಾಡಿ ಸಂಭ್ರಮಿಸಿತ್ತು. ಜ.26ರಂದು ಮೈಸೂರು ಮಲ್ಲಿಗೆ ಎರಡು ಪ್ರದರ್ಶನ ಕಾಣಲಿದೆ. ಮಧ್ಯಾಹ್ನ 3.30ಕ್ಕೆ ಹಾಗೂ ಸಂಜೆ 7.30ಕ್ಕೆ. ಕೆಎಸ್ ನ ಅವರ ಆಯ್ದ ಕವನಗಳ ಮೂಲಕ ಕಥೆ ತೆರೆದುಕೊಳ್ಳುತ್ತಾ, 120 ನಿಮಿಷಗಳಲ್ಲಿ ಕವಿಯ ಜೀವನವನ್ನು ಪ್ರೇಕ್ಷಕರ ಮುಂದಿಡಲು ಕಲಾಗಂಗೋತ್ರಿ ತಂಡ ಸಿದ್ಧವಾಗಿದೆ.

'ಮುಖ್ಯಮಂತ್ರಿ' ನಾಟಕ ಮೂಲತಃ ಬಂಗಾಳಿ ಲೇಖಕ ಚಾಣಕ್ಯ ಸೇನ್ ಅವರ ಕೃತಿ. ಅವರ ಕೃತಿಯನ್ನು ಕನ್ನಡಕ್ಕೆ ಹಿರಿಯ ನಟ ಲೋಹಿತಾಶ್ವ ಅನುವಾದಿಸಿದ್ದಾರೆ. ನೂರನೇ ಪ್ರದರ್ಶನ ಕಾಣಲು ಸಜ್ಜಾಗಿರುವ ಕೆ.ಎಸ್.ನರಸಿಂಹಸ್ವಾಮಿ ಅವರ ಜೀವನ ಹಾಗೂ ಕಾವ್ಯಗಳ ಸಾರವಾದ 'ಮೈಸೂರು ಮಲ್ಲಿಗೆ' ನಾಟಕದ ರಚನೆಯನ್ನು ರಾಜೇಂದ್ರ ಕಾರಂತರು ಮಾಡಿದ್ದಾರೆ. ನಾಟಕದ ನಿರ್ದೇಶನದ ಹೊಣೆಯನ್ನು ನಾಟಕ ಅಕಾಡೆಮಿ ಅಧ್ಯಕ್ಷ ಬಿ.ವಿ.ರಾಜರಾಂ ಅವರು ಹೊತ್ತಿದ್ದಾರೆ.

ಟಿಕೇಟ್ ವಿವರಗಳಿಗೆ ಸಂಪರ್ಕಿಸಿ: ಬಿ.ವಿ.ರಾಜಾರಾಂ: 94480 69667 ಅಥವಾ ಅನ್ ಲೈನ್ ಬುಕ್ಕಿಂಗ್ ಗೆ www.indianstage.in ಗೆ ಭೇಟಿ ಕೊಡಿ. [ಮೈಸೂರು ಮಲ್ಲಿಗೆ]

English summary
Kalagangothri team is staging 100th show of famous Mysore Mallige Play based on selected poems of Poet KS Narasimha Swamy on Jan.26. which is also birthday of poet at Rangashankar, JP Nagar, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X