ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೆಲ್ 3ಜಿ ಆಂಡ್ರಾಯ್ಡ್ ಸ್ಮಾರ್ಟ್ ಫೋನ್

By Mahesh
|
Google Oneindia Kannada News

Dell 3G Android Mobile phone
ಸ್ಮಾರ್ಟ್ ಫೋನ್ ಪ್ರೀಯರಿಗೆ ಡೆಲ್ ಕಡೆಯಿಂದ ಸಿಹಿ ಸುದ್ದಿಯೊಂದಿದೆ. ಡೆಲ್ 3ಜಿ ಆಂಡ್ರಾಯ್ಡ್ ಎಕ್ಸ್ ಸಿಡಿ28 ಎಂಬ ಸ್ಮಾರ್ಟ್ ಫೋನನ್ನು ಕಂಪನಿಯು ಹೊರತಂದಿದ್ದು, ಇದು ಸದ್ಯ ಮಾರುಕಟ್ಟೆಯಲ್ಲಿರುವ ಇತರ ಸ್ಮಾರ್ಟ್ ಫೋನ್ ಗಳಿಗೆ ಹೋಲಿಸಿದರೆ ಅತ್ಯುತ್ತಮ ಗುಣಮಟ್ಟದ್ದು ಎನ್ನಲಾಗಿದೆ.

ನೂತನ ಡೆಲ್ 3ಜಿ ಆಂಡ್ರಾಯ್ಡ್, ಇತರ ಸ್ಮಾರ್ಟ್ ಫೋನ್ ಗಳಲ್ಲಿರುವ ಫೀಚರ್ ಗಳು ಮಾತ್ರವಲ್ಲದೇ ಹಲವು ನೂತನ ಫೀಚರ್ ಗಳಿವೆ. ಡೆಲ್ 3ಜಿ 2.8 ಇಂಚಿನ ಟಚ್ ಸ್ಕ್ರೀನ್, 3.2 ಮೆಗಾಫಿಕ್ಸೆಲ್ ಕ್ಲೀಯರ್ ಕ್ಯಾಮರಾ, ಬ್ಲೂಟೂಥ್, ವೈಫೈ ಕನೆಕ್ಷನ್, ಬ್ಲೂಟೂಥ್, 600 ಮೆಗಾಹರ್ಟ್ಜ್ ಪ್ರೊಸೆಸರ್, ಮ್ಯೂಸಿಕ್ ಪ್ಲೇಯರ್, ಎಂ ರೆಡಿಯೋ ಮತ್ತು ಆಂಡ್ರಾಯ್ಡ್ 2.1 ಒಎಸ್ ಇತ್ಯಾದಿ ಫೀಚರ್ ಗಳೊಂದಿಗೆ ಬಂದಿದೆ.

ಹೊಸ ಸ್ಮಾರ್ಟ್ ಫೋನ್ 3ಜಿ ಸೇವೆಗೆ ಸಪೋರ್ಟ್ ಮಾಡುವುದರಿಂದ ಬಳಕೆದಾರರಿಗೆ ಅತ್ಯುತ್ತಮ ಮೊಬೈಲ್ ಸರ್ಫಿಂಗ್ ಅನುಭವವಾಗಲಿದೆ. "ಕಂಪ್ಯೂಟರ್ ಸೇರಿದಂತೆ ಮೊಬೈಲ್ ಫೋನ್ ಗಳಿಗೆ ಭಾರತವು ಪ್ರಮುಖ ಮಾರುಕಟ್ಟೆ. ಹೀಗಾಗಿ ಇಲ್ಲಿ ನೂತನ ತಂತ್ರಜ್ಞಾನದ ಹ್ಯಾಂಡ್ ಸೆಟ್ ಗಳಿಗೆ ಅತ್ಯುತ್ತಮ ಬೇಡಿಕೆ ಇರುವುದಾಗಿ" ಡೆಲ್ ಉಪಾಧ್ಯಕ್ಷರು ಹೇಳಿದ್ದಾರೆ. ಆಂಡ್ರಾಯ್ಡ್ ಅಲ್ಲದೇ ಕಂಪನಿಯು 3ಜಿ ಸೌಲಭ್ಯವಿರುವ ಎಕ್ಸ್ ಸಿಡಿ 35 ಎಂಬ ಹ್ಯಾಂಡ್ ಸೆಟ್ ಕೂಡ ಹೊರತಂದಿದೆ. [ಮೊಬೈಲ್ ಫೋನ್]

English summary
Dell has come up with the most fascinating mobile phone in town that will blow your senses. Filled with excitement and great features the company Dell brings to its loyal customers the Dell 3g android xcd28 Smartphone. This Mobile phone by Dell when compared to the past is the best in the market.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X