ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಸ್ಕೋ ದಾಳಿ : ಕರಿ ವಸ್ತ್ರಧಾರಿ ಮೇಲೆ ಶಂಕೆ

By Mahesh
|
Google Oneindia Kannada News

Black Widow Suspect | Moscow Airport BlastBlack Widow Suspect, Moscow Airport Blast
ಮಾಸ್ಕೋ, ಜ. 25: ಡೊಮೊಡೆಡೊವೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಸಂಭವಿಸಿದ ಆತ್ಮಾಹುತಾ ಬಾಂಬ್ ದಾಳಿಗೆ ಸಂಬಂಧಿಸಿದಂತೆ ಕರಿ ವಿಧವೆ ಎಂದು ಹೆಸರಿಸಲಾಗಿರುವ ಕಪ್ಪು ಬಟ್ಟೆ ಧರಿಸಿದ್ದ ಮಹಿಳೆಯೊಬ್ಬಳ ಮೇಲೆ ಶಂಕೆ ವ್ಯಕ್ತವಾಗಿದೆ. ದಾಳಿಕೋರರ ಬಾಂಬ್ ದಾಳಿಗೆ ಕನಿಷ್ಠ 31 ಮಂದಿ ಮೃತಪಟ್ಟು 130ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

ಪ್ರತ್ಯಕ್ಷದರ್ಶಿಗಳ ಪ್ರಕಾರ ಕಪ್ಪು ವಸ್ತ್ರಧಾರಿಯಾದ ಮಧ್ಯ ವಯಸ್ಕ ಮಹಿಳೆ ಹತ್ತಿರ ಬ್ಯಾಗ್ ಅಥವಾ ಸೂಟ್ ಕೇಸ್ ರೀತಿ ವಸ್ತು ಬಿದ್ದಿತ್ತು. ಸ್ಫೋಟಕ್ಕೆ ಇದೇ ಕಾರಣ ಎನ್ನಲಾಗಿದೆ. ಮಾಸ್ಕೋ ಮೆಟ್ರೋ ನಿಲ್ದಾಣದ ಬಳಿ ಅವಳಿ ಸ್ಫೋಟಕ್ಕೆ ಕಾರಣವಾದ ಉಗ್ರರ ತಂಡವೇ ಈ ಸ್ಫೋಟಕ್ಕೂ ಕಾರಣ ಎಂದು ತಿಳಿದುಬಂದಿದೆ.

ಘಟನೆ ಹಿನ್ನೆಲೆಯಲ್ಲಿ ಮಾಸ್ಕೋದಲ್ಲಿ ಟೆರರ್ ಅಲರ್ಟ್ ಘೋಷಿಸಲಾಗಿದೆ. ಮಾಸ್ಕೋ ಸ್ಥಳೀಯ ಸಮಯ ಸಂಜೆ ನಾಲ್ಕು ಗಂಟೆ ಸುಮಾರಿಗೆ ಈ ಸ್ಫೋಟ ನಡೆದಿದ್ದು, ಆ ಪ್ರದೇಶದಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದೆ. ಇದು ಆತ್ಮಹತ್ಯಾ ಬಾಂಬರ್‌ಗಳ ಕೃತ್ಯವಾಗಿದ್ದು, ಮತ್ತೊಂದು ಭಯೋತ್ಪಾದನಾ ಕೃತ್ಯಕ್ಕೆ ವಿಶ್ವವು ಸಾಕ್ಷಿಯಾಗಿದೆ. ರಷ್ಯಾದ ಅತ್ಯಂತ ಜನಸಂದಣಿಯ ಮತ್ತು ಜನಪ್ರಿಯ ವಿಮಾನ ನಿಲ್ದಾಣಗಳಲ್ಲೊಂದು ಇದಾಗಿದೆ. ಮುಖ್ಯವಾಗಿ ವಿದೇಶಿ ಪ್ರವಾಸಿಗರನ್ನು ಗುರಿಯಾಗಿರಿಸಿ ಕೊಂಡು ಈ ದಾಳಿ ನಡೆದಿದೆ ಎನ್ನಲಾಗಿದೆ.

ಚೆಚನ್ಯಾ ಬಂಡುಕೋರ ಸಂಘಟನೆಯ ಶಂಕಿತ ಉಗ್ರರ ಕೈವಾಡವಿದೆ ಎಂದು ಪ್ರಾಥಮಿಕ ವರದಿ ತಿಳಿಸಿದೆ. ಆತ್ಮಹತ್ಯಾ ಬಾಂಬರ್ ತನ್ನನ್ನು ತಾನೇ ಸ್ಪೋಟಿಸಿಕೊಂಡು ಈ ಸಾವು ನೋವಿಗೆ ಕಾರಣವಾಗಿದ್ದಾನೆ. ರಷ್ಯಾದ ರೇಡಿಯೋ ಸ್ಟೇಷನ್ ವರದಿ ಮಾಡಿದ ಪ್ರಕಾರ ಸ್ಪೋಟವನ್ನು ಕಣ್ಣಾರೆ ಕಂಡ ವ್ಯಕ್ತಿಯೊಬ್ಬನಿಂದ ಮಾಹಿತಿ ಪಡೆಯಲಾಗಿದೆ. ತಾನು ವಿಮಾನ ನಿಲ್ದಾಣದ ಹೊರಗೆ ಕಾರಿಗಾಗಿ ಕಾಯುತ್ತಿದ್ದಾಗ ಈ ಸ್ಪೋಟ ಸಂಭವಿಸಿದೆ ಎಂದು ಹೇಳಿಕೆ ನೀಡಿದ್ದಾನೆ. [ವಿಮಾನ ನಿಲ್ದಾಣ]

English summary
A 'black widow' is suspected to have caused the suicide blast at Russia's Demodedovo International Airport that killed 35 persons and injured 178 on Monday, Jan 24.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X