• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಂದು ಭದ್ರಾವತಿ ಬಂದ್‌ ಅಂತೆ... ಹೌದಾ?

By * ಕೆ.ಆರ್ ಸೋಮನಾಥ್, ಶಿವಮೊಗ್ಗ
|

ಶಿವಮೊಗ್ಗ, ಜ.25: ಭದ್ರಾವತಿ ಬಂದ್‌ಗೆ ಕೆಲವು ಸ್ಥಳೀಯ ರಾಜಕೀಯ ಪಟ್ಟಭದ್ರ ಹಿತಾಸಕ್ತಿಗಳು ಕರೆ ನೀಡಿದ್ದು, ಭದ್ರಾವತಿಯ ಜನತೆ ಹಾಗೂ ಕಾರ್ಮಿಕರುಗಳು ಬಂದ್‌ಗೆ ಸಹಕಾರ ನೀಡದಿರುವಂತೆ ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿಯ ಜಿಲ್ಲಾಧ್ಯಕ್ಷ ಆರ್.ಕೆ.ಸಿದ್ದರಾಮಣ್ಣ ಮನವಿ ಮಾಡಿದ್ದಾರೆ. ಆದರೆ, ಭದ್ರಾವತಿಯಲ್ಲಿ ಇಂದು(ಜ.25) ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಲ್ಲಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು ಬಿಟ್ಟರೆ, ಈ ಸಮಯಕ್ಕೆ ಯಾವುದೇ ಅಹಿತಕರ ಘಟನೆಯ ವರದಿ ಬಂದಿಲ್ಲ.

ಭದ್ರಾವತಿ ನಗರ ಹಾಗೂ ತಾಲ್ಲೂಕಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಸಾಕಾಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿದೆ. ಇದನ್ನು ಸಹಿಸದ ಕೆಲವು ಪಟ್ಟಭದ್ರ ರಾಜಕೀಯ ಹಿತಾಸಕ್ತಿಗಳು ಅನಗತ್ಯವಾಗಿ ಗೊಂದಲ ಉಂಟುಮಾಡಿ ಕಾರ್ಮಿಕರನ್ನು ಹಾಗೂ ನಾಗರೀಕರನ್ನು ದಿಕ್ಕು ತಪ್ಪಿಸಲು ಹೊರಟಿದ್ದಾರೆ ಎಂದು ಸ್ಥಳಿಯ ಶಾಸಕ ಬಿ.ಕೆ.ಸಂಮೇಶ್ವರ್‌ರವರನ್ನು ಪರೋಕ್ಷವಾಗಿ ಟೀಕಿಸಿದರು.

ಎಂಪಿಎಂ ಹಾಗೂ ವಿಎಸ್ ಐಎಲ್ ಕಾರಣ : ಭದ್ರಾವತಿಯ ಹಾಗೂ ರಾಜ್ಯದ ಪ್ರತಿಷ್ಠೆಯ ಕಾರ್ಖಾನೆಗಳಲ್ಲಿ ಒಂದಾದ ಎಂಪಿಎಂ ಕಾಗದ ಮತ್ತು ಸಕ್ಕರೆ ಕಾರ್ಖಾನೆಯು ರಾಜ್ಯ ಸರ್ಕಾರ ಹಾಗೂ ಎಂಪಿಎಂನ ಅಧ್ಯಕ್ಷರ ಪ್ರಯತ್ನದಿಂದಾಗಿ ಅಭಿವೃದ್ಧಿಯ ಕಡೆಗೆ ಮುನ್ನಡೆಯುತ್ತಿದೆ. ಕಾರ್ಖಾನೆಯ ನವೀಕರಣಕ್ಕೆ ರಾಜ್ಯ ಸರ್ಕಾರ ರೂ. 135 ಕೋಟಿಯ ಬ್ಯಾಂಕ್ ಗ್ಯಾರಂಟಿಯನ್ನು ನೀಡಿದೆ. ಎಂಪಿಎಂ ಕಾರ್ಖಾನೆ ಇತ್ತೀಚೆಗೆ ರೋಗಗ್ರಸ್ತ ಉದ್ದಿಮೆ ಪಟ್ಟಿಯಲ್ಲಿ ಸೇರುವ ಹಂತದಲ್ಲಿತ್ತು. ಕಾರ್ಮಿಕ ಹಿತಾರಕ್ಷಣೆಗೋಸ್ಕರ ಕಾರ್ಖಾನೆಯನ್ನು ಅಭಿವೃದ್ಧಿಪಡಿಸುವ ಎಲ್ಲಾ ಯೋಜನೆಯನ್ನು ರಾಜ್ಯಸರ್ಕಾರ ಕೈಗೊಂಡಿದೆ.

ಜೊತೆಗೆ ಭದ್ರಾವತಿ ನಗರದ ನಾಗರೀಕರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಹತ್ತು ಹಲವು ಅಭಿವೃದ್ಧಿ ಕಾರ್ಯವನ್ನು ಮಾಡುತ್ತಿದೆ. ಇದಕ್ಕಾಗಿ 5 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದೆ. ಒಂದು ಕೋಟಿ ರೂ. ವೆಚ್ಚದಲ್ಲಿ ಎಂಪಿಎಂ ಕಾರ್ಖಾನೆಯಿಂದ ವಿಐಎಸ್‌ಎಲ್ ಕಾರ್ಖಾನೆಯವರೆಗೆ ರಸ್ತೆ ಅಭಿವೃದ್ಧಿಯನ್ನು ಮಾಡಲಾಗಿದೆ. ವಿಐಎಸ್‌ಎಲ್ ಕಾರ್ಮಿಕರ ಹಿತಾದೃಷ್ಟಿಯಿಂದ ರಾಜ್ಯ ಸರ್ಕಾರ ಗಣಿ ಮಂಜೂರಾತಿಗೆ ಎಲ್ಲಾ ರೀತಿಯ ಪ್ರಕ್ರಿಯೆಯನ್ನು ಕೈಗೊಂಡಿದೆ. ಕೇಂದ್ರದ ಜೊತೆ ಈಗಾಗಲೇ ಪ್ರಕ್ರಿಯೆಯೂ ಕೊನೆಯ ಹಂತದಲ್ಲಿದ್ದು, 800 ರಿಂದ 1000 ಕೋಟಿ ಬಂಡವಾಳ ಹೂಡಲು ಕೇಂದ್ರ ಸರ್ಕಾರ ಮುಂದೆ ಬಂದಿದೆ.

ಕುಡಿಯುವ ನೀರಿಗಾಗಿ ವಿಶೇಷ ಯೋಜನೆಯನ್ನು ಸಿದ್ದಪಡಿಸಿದೆ. ಇಷ್ಟೆಲ್ಲ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದರೂ ಇದನ್ನು ಸಹಿಸದ ಕೆಲವು ಸ್ಥಳೀಯ ರಾಜಕೀಯ ವ್ಯಕ್ತಿಗಳು ಜನರನ್ನು ಎತ್ತಿಕಟ್ಟುವಂತಹ ಕೆಲಸಕ್ಕೆ ಕೈಹಾಕಿರುವುದು ನಿಜಕ್ಕೂ ದುರಾದೃಷ್ಟಕರ ಸಂಗತಿಯಾಗಿದೆ. ಹೀಗಾಗಿ ರಾಜಕೀಯ ಪ್ರೇರಿತ ಹೊಂದಿರುವ ಬಂದ್‌ಗೆ ಕಾರ್ಮಿಕರು ಹಾಗೂ ನಾಗರೀಕರು ಬೆಂಬಲ ನೀಡಬಾರದು ಎಂದರು.

ಶಾಸಕರ ಮೇಲೆ ಆಕ್ರೋಶ: ರಾಜಕೀಯ ಪಟ್ಟಭದ್ರ ಹಿತಾಸಕ್ತಿಗಳು ಎಂದರೆ ಸ್ಥಳೀಯ ಶಾಸಕ ಬಿ.ಕೆ.ಸಂಗಮೇಶ್ ರವರೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ ಅವರು ಹಾಲಿ ಶಾಸಕರಿರಬಹುದು, ಮಾಜಿ ಶಾಸಕರಿರಬಹುದು ಆದರೆ ಇಂತಹ ಪಿತೂರಿ ಕೆಲಸಕ್ಕೆ ಯಾರು ಕೈಹಾಕಬಾರದು ಎಂದು ಹೇಳಿದರಲ್ಲದೆ, ಸ್ಥಳಿಯ ಶಾಸಕರಾದ ಬಿ.ಕೆ.ಸಂಗಮೇಶ್ವರರವರಿಗೆ ಎಂಪಿಎಂ ಹಾಗೂ ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಸ್ಕ್ರಾಫ್ ಮಾಡುವ ಬಯಕೆಯನ್ನು ಹೊಂದಿದ್ದಾರೆ. ಅವರಿಗೆ ಆಸಕ್ತಿ ಇರುವುದು ಅಭಿವೃದ್ಧಿಯಲ್ಲಲ್ಲ, ಬದಲಿಗೆ ರಾಜ್ಯ ಸರ್ಕಾರದ ಮೇಲೆ ಪಿತೂರಿ ನಡೆಸುವುದೇ ಅವರ ಮುಖ್ಯ ಉದ್ದೇಶವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. [ಭದ್ರಾವತಿ]

English summary
BJP leader RK Siddramanna has condemned Bhadravathi Bandh calleg by Bhadravati taluk unit of the Congress and slammed Congress MLA B.K. Sangameshwar. Congress protesting against the discrimination against the VISL and the MPM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X