ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಂಬರ್ ಪೊರ್ಟೆಬಿಲಿಟಿಯಿಂದ ಕಂಪನಿ ಲಾಭಕ್ಕೆ ಕುತ್ತು?

By Mahesh
|
Google Oneindia Kannada News

MNP Effect Telcos
ಮೊಬೈಲ್ ನಂಬರ್ ಪೊರ್ಟೆಬಿಲಿಟಿ ಅಳವಡಿಸುವುದರಿಂದ ಮೊಬೈಲ್ ಸೇವಾದಾರ ಕಂಪನಿಗಳು ಹಾಗೂ ಟೆಲಿಕಾಂ ಕಂಪೆನಿಗಳ ಲಾಭದ ಪ್ರಮಾಣದ ಮೇಲೆ ಹೊಡೆತ ಬೀಳಲಿದ್ದು, ಗ್ರಾಹಕರನ್ನು ಸೆಳೆಯಲು ಕಂಪನಿಗಳು ನಾನಾ ಕಸರತ್ತು ಮಾಡುವ ಸಾಧ್ಯತೆಯಿದೆ ಎಂದು ರೇಟಿಂಗ್ ಏಜೆನ್ಸಿ ಐಸಿಆರ್ಎ(ICRA) ವರದಿ ಮಾಡಿದೆ.

ದೇಶದ್ಯಾಂತ ಪೊರ್ಟೆಬಿಲಿಟಿ ಅಳವಡಿಸಿದ ನಂತರ ಗ್ರಾಹಕರಿಗೆ ನಾನಾ ಆಮೀಷಗಳನ್ನು ಒಡ್ಡಿ ಬೇರೊಂದು ಕಂಪನಿಯ ಗ್ರಾಹಕರನ್ನು ಸೆಳೆಯಲು ಕಂಪನಿಗಳು ಪ್ರಯತ್ನಿಸಬಹುದು. ಪೈಪೋಟಿಗೆ ಬಿದ್ದು ವಿನೂತನ ಟಾರೀಫ್ ಯೋಜನೆಗಳನ್ನು ಹೊರತರಬಹುದು. ಇದೆಲ್ಲದರ ಪರಿಣಾಮವಾಗಿ ಕಂಪನಿಗಳಿಗೆ ಗ್ರಾಹಕರಿಂದ ದೊರಕುವ ಸರಾಸರಿ ಆದಾಯಕ್ಕೆ ಕುತ್ತಾಗಬಹುದು ಎಂದು ಏಜೆನ್ಸಿ ಹೇಳಿದೆ.

ಸೇವೆಯ ಗುಣಮಟ್ಟ ಹೆಚ್ಚಿಸಲು ಕಂಪನಿಗಳು ದಕ್ಷತೆಯಿಂದ ಕಸ್ಟಮರ್ ಕೇರ್ ಸೇವೆ ನೀಡಲು ಆದ್ಯತೆ ನೀಡಲಿದ್ದು ನೆಟ್ ವರ್ಕ್ ಗುಣಮಟ್ಟ ಕೂಡ ಸುಧಾರಿಸುವ ಸಾಧ್ಯತೆಯಿದೆ. ಗ್ರಾಹಕರು ಒಂದೇ ಕಂಪನಿಯನ್ನು ಅವಲಂಬಿಸಿಕೊಂಡಿರುವಂತೆ ಮಾಡಲು ಅಥವಾ ಗ್ರಾಹಕರನ್ನು ಉಳಿಸಿಕೊಳ್ಳಲು 3ಜಿ ಇತ್ಯಾದಿ ವೈವಿಧ್ಯಮಯ ಸೇವೆಗಳಿಗೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆಯಿದೆ ಎಂದು ಐಸಿಆರ್ಎ ತಿಳಿಸಿದೆ.

ನಂಬರ್ ಪೊರ್ಟೆಬಿಲಿಟಿ ಎಂಬುದು ಪ್ರಾಕ್ಟಿಕಲ್ ಆಗಿ ಅಷ್ಟೇನೂ ಉತ್ತಮವಾಗಿಲ್ಲ ಎಂದು ಸಮೀಕ್ಷೆಗಳು ತಿಳಿಸುತ್ತಿದ್ದು, ಹಾಗಾಗಿ ಮತ್ತೊಂದು ಮೊಬೈಲ್ ಸೇವಾದಾರ ಕಂಪನಿಗೆ ಹೋಗುವ ಮೊದಲು ಎರಡು ಬಾರಿ ಯೋಚಿಸುವುದು ಒಳ್ಳೆಯದು ಎಂದು ರೇಟಿಂಗ್ ಏಜೆನ್ಸಿ ಬಳಕೆದಾರರಿಗೆ ಸಲಹೆ ನೀಡಿದೆ. [ಮೊಬೈಲ್ ಫೋನ್]

English summary
The implementation of Mobile Number Portability (MNP) will hit the operating margins of service providers and those with deeper pockets would be better placed to cope up (with the new scenario), ratings agency ICRA stated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X