ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋರ್ಟಿನಲ್ಲಿ ಅರೆನಗ್ನಳಾದ ಮಾಜಿ 'ರಾ' ಅಧಿಕಾರಿಣಿ!

By Mrutyunjaya Kalmat
|
Google Oneindia Kannada News

RAW logo
ನವದೆಹಲಿ, ಜ. 21 : ಭಾರತೀಯ ಗುಪ್ತಚರ ಇಲಾಖೆ 'ರಾ' ಮಾಜಿ ಅಧಿಕಾರಿಣಿಯೊಬ್ಬರು ವಿಚಾರಣೆ ವೇಳೆಯಲ್ಲಿ ತಮ್ಮ ಬಟ್ಟೆಗಳನ್ನು ಕಳಚಿ ಎಲ್ಲರನ್ನೂ ಚಕಿತಗೊಳಿಸಿದ ಘಟನೆ ನವದೆಹಲಿಯ ನ್ಯಾಯಾಲಯವೊಂದರಲ್ಲಿ ಗುರುವಾರ ನಡೆದಿದೆ. ತಕ್ಷಣ ಮಾಜಿ ಮಹಿಳಾ ಅಧಿಕಾರಿಯ ಮಾನಸಿಕ ಚಿಕಿತ್ಸೆ ನಡೆಸಲು ನ್ಯಾಯಾಧೀಶರು ಆದೇಶ ನೀಡಿರುವ ಪ್ರಸಂಗ ಜರುಗಿದೆ.

ನಿಶಾ ಪ್ರಿಯಾ ಭಾಟಿಯಾ(40) ಎಂಬ ಮಾಜಿ ಅಧಿಕಾರಿಣಿಯೇ ನ್ಯಾಯಾಲಯದಲ್ಲಿ ಬಟ್ಟೆ ಕಳಚಿ ಅರೆನಗ್ನಳಾದ ಮಹಿಳೆ. ಕಳೆದ ಎರಡು ವರ್ಷಗಳ ಹಿಂದೆ ನಿಶಾಪ್ರಿಯಾ ಪ್ರಧಾನಮಂತ್ರಿಗಳ ಕಾರ್ಯಾಲಯದ ಎದುರು ಆತ್ಮಹತ್ಯೆ ಯತ್ನಿಸಿದ್ದರು. ಮಾಜಿ ಅಧಿಕಾರಿಣಿ ನ್ಯಾಯಾಲಯದಲ್ಲಿ ಬಟ್ಟೆ ಕಳಚಿರುವುದು ಖಂಡನೀಯ. ಈಕೆ ಮಾನಸಿಕ ಅಸ್ವಸ್ಥೆ ಇರಬೇಕು. ತನ್ನ ಪ್ರಕರಣದ ವಿಚಾರಣೆ ಮುಂದಕ್ಕೆ ಹೋದಾಗ ಈ ಮಹಿಳೆ ತನ್ನ ರವಿಕೆಯನ್ನು ಬಿಚ್ಚಿದ್ದಾಳೆ. ತಕ್ಷಣ ನ್ಯಾಯಾಧೀಶರು ಮಹಿಳೆಯನ್ನು ಮಾನಸಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವಂತೆ ಆದೇಶಿಸಿದ್ದಾರೆ.

ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅಜಯ್ ಪಾಂಡೆ ಮತ್ತು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪ್ರೀತಮ್ ಸಿಂಗ್ ವಿರುದ್ಧ ನಿಶಾ ಪ್ರಿಯಾ ಭಾಟಿಯಾ ಅರ್ಜಿ ಸಲ್ಲಿಸಿದ್ದು, ವಿಚಾರಣೆ ಮುಂದಕ್ಕೆ ಹೋದಾಗ ಆಕೆಯನ್ನು ಕೆರಳಿಸಿತ್ತು. ಭಾಟಿಯಾ ಅವರು ಗುಪ್ತಚರ ಇಲಾಖೆ ತರಬೇತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ತನ್ನ ಮೇಲಾಧಿಕಾರಿ ಅಶೋಕ್ ಚತುರ್ವೇದಿ ವಿರುದ್ಧ ಇವರು ಲೈಂಗಿತ ಕಿರುಕುಳ ಆರೋಪ ಹೊರಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರು ಮೇಲಾಧಿಕಾರಿಗೆ ನೆರವಾಗುತ್ತಿದ್ದಾರೆ ಎನ್ನುವುದು ಈಕೆ ಆರೋಪವಾಗಿದೆ. ಹೀಗಾಗಿ ನ್ಯಾಯಾಲಯದಲ್ಲಿ ಬಟ್ಟೆ ಕಳಚಿರಬೇಕು ಎನ್ನಲಾಗಿದೆ.

English summary
A year after the Supreme Court refrained from passing an unfavourable judgment against a former Research and Analysis Wing (RAW) officer, declaring her to be “surcharged and emotionally disturbed”, the Delhi High Court was in for a shock when the 50-year-old woman tried to strip before a judge twice on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X