• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇಶಕ್ಕೆ ಬಂತು ತ್ರಿಪಲ್ ಸಿಮ್ ಜಿಎಸ್ಎಂ ಮೊಬೈಲ್

By Mahesh
|
ನವದೆಹಲಿ, ಜ.20: 3 ಸಿಮ್ ಅಳವಡಿಸಬಹುದಾದ ಮೊದಲ ಜಿಎಸ್ಎಂ ಹ್ಯಾಂಡ್ ಸೆಟ್ ದೇಶದಲ್ಲಿ ಬಿಡುಗಡೆಗೊಂಡಿದೆ. ಜಪಾನಿನ ಎಲೆಕ್ಟ್ರಿಕ್ ಉತ್ಪನ್ನಗಳ ತಯಾರಿಕಾ ಕಂಪನಿ ಅಕಾಯ್(akai) "ನ್ಯೂ ಅಕಾಯ್ ಟ್ರಿಯೊ' ಎಂಬ ಮೊಬೈಲ್ ಹೊರತಂದಿದೆ. ಇದು ಭಾರತಕ್ಕೆ ಬಂದಿರುವ ಮೊದಲ ತ್ರಿಬಲ್ ಸಿಮ್ ಎಂದು ಕಂಪನಿ ಹೇಳಿಕೊಂಡರೂ ಇದಕ್ಕೂ ಮೊದಲು ಇಂಟೆಕ್ಸ್ ಸಿಡಿಎಂಎ+ಜಿಎಸ್ಎಂ+ಜಿಎಸ್ಎಂ ಸಿಮ್ ಗಳಿಗೆ ಸಪೋರ್ಟ್ ಮಾಡುವ ಹ್ಯಾಂಡ್ ಸೆಟ್ ಹೊರತಂದಿತ್ತು. ಹೀಗಾಗಿ ನ್ಯೂ ಟ್ರಿಯೊ, ಜಿಎಸ್ಎಂ ಸಪೋರ್ಟ್ ಮಾಡುವ ಮೊದಲ ಹ್ಯಾಂಡ್ ಸೆಟ್ ಆಗಿದೆ ಎನ್ನಬಹುದು.

ನೂತನ ಟ್ರಿಯೊ ಎರಡು ಇಂಚಿನ ಡಿಸ್ ಪ್ಲೇ, 1.3 ಮೆಗಾ ಪಿಕ್ಸೆಲ್ ಕ್ಯಾಮರಾ, ಎಫ್ಎಂ ರೇಡಿಯೊ, ಆಡಿಯೋ ಮತ್ತು ವಿಡಿಯೋ ಪ್ಲೇಯರ್, ಬ್ಲೂಟೂಥ್, ವ್ಯಾಪ್ ಮತ್ತು ಜಿಪಿಆರ್ಎಸ್ ಸೌಲಭ್ಯ, ಟಾರ್ಚ್ ಇತ್ಯಾದಿ ಫೀಚರ್ ಗಳನ್ನು ಹೊಂದಿದೆ. ಇಷ್ಟೇ ಅಲ್ಲ ಇ-ಬುಕ್ ರೀಡರ್, 8 ಜಿಬಿ ವರೆಗೆ ವಿಸ್ತರಿಸಬಹುದಾದ ಮೆಮೋರಿ ಕಾರ್ಡ್, 5 ಗಂಟೆಗಳ ಟಾಕ್ ಟೈಮ್ ಬ್ಯಾಟರಿ ಬಾಳಿಕೆಯ ಫೀಚರ್ ಗಳೂ ಜೊತೆಯಲ್ಲಿವೆ.

ಹೊಸ ಅಕಾಯ್ ಟ್ರಿಯೊ ದರವೆಷ್ಟು ಅಂತ ನೀವು ಕೇಳಬಹುದು. ಕಂಪನಿಯು ನೂತನ ಮೊಬೈಲನ್ನು ಕೈಗೆಟುಕುವ ದರದಲ್ಲಿ ಅಂದರೆ 3,295 ರೂಪಾಯಿಯಲ್ಲಿ ನೀಡುತ್ತಿದೆ. ಇದು ದೇಶದ ಸುಮಾರು 15 ಸಾವಿರ ರಿಟೇಲ್ ಮಳಿಗೆಗಳಲ್ಲಿ ದೊರಕುತ್ತದೆ ಎಂದು ಕಂಪನಿ ಪ್ರಕಟಿಸಿದೆ. [ಮೊಬೈಲ್ ಫೋನ್]

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Japan-based electronic products manufacturer Akai, has come out with a brand new model of mobile phones. The new Akai Trio is said to be the first triple SIM phone in India. However, Intex had already launched a triple SIM (CDMA+GSM+GSM) here, but, Trio is the India's first triple GSM SIM supporting handset.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more