ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಂಗನತಿಟ್ಟು ಪಕ್ಷಿಧಾಮಕ್ಕೆ ಪ್ರವಾಸಿಗರ ದೌಡು

By * ಬಿ.ಎಂ.ಲವಕುಮಾರ್, ಮೈಸೂರು
|
Google Oneindia Kannada News

Ranganatittu Bird Santuary
ಮೈಸೂರು ಬಳಿಯಿರುವ ಶ್ರೀರಂಗಪಟ್ಟಣದ ರಂಗನತಿಟ್ಟು ಪಕ್ಷಿಧಾಮದಲ್ಲಿ ನೂರಾರು ಬಗೆಯ ಪಕ್ಷಿಗಳು ಬೀಡು ಬಿಟ್ಟಿದ್ದು, ಸಂತಾನೋತ್ಪತ್ತಿಯಲ್ಲಿ ತೊಡಗಿವೆ. ಹಾಗಾಗಿ ಇಲ್ಲಿ ಸದಾ ಹಕ್ಕಿಗಳ ಕಲರವ ಕೇಳಿ ಬರುತ್ತಿದ್ದು, ಹಕ್ಕಿಗಳ ಸೌಂದರ್ಯವನ್ನು ವೀಕ್ಷಿಸಲು ದೇಶ ವಿದೇಶಗಳಿಂದ ದಿನಕ್ಕೆ ನೂರಾರು ಪ್ರವಾಸಿಗರು ಬರುತ್ತಿದ್ದಾರೆ.

ಈಗಾಗಲೇ ಇಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಪಕ್ಷಿಗಳು ಗೂಡು ಕಟ್ಟುವುದರಲ್ಲಿ, ಮೊಟ್ಟೆಯಿಡುವುದರಲ್ಲಿ ನಿರತವಾಗಿವೆ. ಸುತ್ತಮುತ್ತಲಿನ ಹಳ್ಳಿಗಳಿಗೆ ತೆರಳಿ ಹುಲ್ಲು ಕಡ್ಡಿಗಳನ್ನು ತಂದು ಗೂಡು ಕಟ್ಟುತ್ತಿವೆ. ಅಲ್ಲದೆ ಕಾವೇರಿ ನದಿಯಲ್ಲಿರುವ ಮರಿಮೀನುಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿವೆ.

ಇಲ್ಲಿನ ದ್ವೀಪಕ್ಕೆ ಸುತ್ತು ಹೊಡೆಯಲು ಬೋಟಿಂಗ್ ವ್ಯವಸ್ಥೆ ಇರುವುದರಿಂದ ಪ್ರವಾಸಿಗರು ದೋಣಿ ವಿಹಾರ ಮಾಡುತ್ತಾ ಪಕ್ಷಿ ವೀಕ್ಷಣೆ ಮಾಡಬಹುದಾಗಿದೆ. ರಂಗನತಿಟ್ಟು ಪಕ್ಷಿಧಾಮಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಆದಾಯವೂ ಗಣನೀಯವಾಗಿ ಹೆಚ್ಚಿದೆ. ಪ್ರಸಕ್ತ ಇಲ್ಲಿಯವರೆಗೆ ಸುಮಾರು ನಾಲ್ಕುಲಕ್ಷ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ್ದು, ಈಗಾಗಲೇ ಒಂದು ಕೋಟಿ ಹತ್ತು ಲಕ್ಷ ರೂ. ಸಂಗ್ರಹವಾಗಿದೆ ಎಂದು ಹೇಳಲಾಗಿದೆ.

ರಂಗನತಿಟ್ಟು ಹೋಗುವ ಬಗೆ: ಮೈಸೂರಿನಿಂದ 19 ಕಿ.ಮೀ. ಶ್ರೀರಂಗಪಟ್ಟಣದಿಂದ 3 ಕಿ.ಮೀ ದೂರದಲ್ಲಿದೆ. ಪ್ರವಾಸಿಗರಿಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆ ಹಾಗೂ ಮಯೂರ ಹೋಟೆಲ್ ಗಳ ವ್ಯವಸ್ಥೆ ಸಿಗುತ್ತದೆ. [ಕರ್ನಾಟಕ ಪ್ರವಾಸೋದ್ಯಮ]

English summary
Ranganthittu Bird Sanctuary in the Mandya District.The Sanctuary comprises six islets on the banks of the Kaveri River. Ranganthittu is located three kilometers away from the historic town of Srirangapatna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X