ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಪು ಪುತ್ರಿ ಆತ್ಮಹತ್ಯೆ ಪ್ರಕರಣ ಚಾರ್ಜ್ ಶೀಟ್ ಸಲ್ಲಿಕೆ

By Mrutyunjaya Kalmat
|
Google Oneindia Kannada News

Crimebeat
ಬೆಂಗಳೂರು, ಜ. 19 : ಹಿರಿಯ ಪತ್ರಕರ್ತ ಪಾಟೀಲ್ ಪುಟ್ಟಪ್ಪ ಅವರ ಮಗಳು ಶಾಂತಲಾ(55) ಅವರ ಅತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಪೂರ್ಣಗೊಂಡಿದ್ದು, ಮೃತರ ಪತಿ ಸೇರಿ ಮೂವರ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ.

ಶಾಂತಲಾ ಅವರ ಪತಿ ಬಸವರಾಜು, ಆವರ ಸಹೋದರಿ ಬಿನೀತಾ ಚೌಹಾನ್ ಮತ್ತು ಸ್ನೇಹಿತೆ ಜಯಾ ಚಾಕೋ ಆರೋಪಿಗಳು. ಬಸವರಾಜು ಅವರು ಜಯಾ ಚಾಕೋ ಎಂಬುವವರೊಂದಿಗೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದರಿಂದ ದಂಪತಿಗಳ ಮಧ್ಯೆ ಆಗಾಗ್ಗೆ ಜಗಳ ನಡೆಯತ್ತಿತ್ತು. ಅಲ್ಲದೆ, ಬಸವರಾಜು ಅವರ ಸಹೋದರಿ ಬಿನೀತಾ ಚೌಹಾನ್ ಮತ್ತು ಜಯಾ ಸೇರಿಕೊಂಡು ಶಾಂತಲಾ ಅವರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತ ಅವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ.

2010ರ ಜುಲೈ 21 ರಂದು ಶಾಂತಲಾ ಅವರು ಆತ್ಮಹತ್ಯೆಗೆ ಯತ್ನಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಜುಲೈ 24 ರಂದು ಶಾಂತಲಾ ಮೃತಪಟ್ಟಿದ್ದರು. ಜೀವನ್ ಭೀಮಾನಗರದ ಪೊಲೀಸರು ಇದೊಂದು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಪಾಟೀಲ್ ಪುಟ್ಟಪ್ಪ ಅವರು ನನ್ನ ಮಗಳನ್ನು ಕೊಲೆ ಮಾಡಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಜೀವನ್ ಭೀಮಾನಗರ ಪೊಲೀಸರಿಗೆ ದೂರು ನೀಡಿದ್ದರು. ಹೀಗಾಗಿ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು.(ಕ್ರೈಂ)

English summary
The Criminal Investigation Department claims to have achieved a breakthrough in the acse pertaining to the suicide of Shantala Patil, daughter of veteran journalist Patil Puttappa. CID said that the agency had filed a chargesheet in which it has named Shantala's husband Basavaraju, sister in law Binitha Chauhan and Basavaraju's friend Jaya Chacko as accused.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X