ಮೊಬೈಲ್ ನಂಬರ್ ಪೊರ್ಟೆಬಿಲಿಟಿ ಬಂತು ಡುಂ... ಡುಂ.....
ಹೆಚ್ಚಿನ ಮೊಬೈಲ್ ಸೇವಾದಾರ ಕಂಪನಿಗಳು ಜನವರಿ 20ರಿಂದ ಕರ್ನಾಟಕ ಸೇರಿದಂತೆ ದೇಶದ ನಾನಾ ರಾಜ್ಯಗಳಲ್ಲಿ ಈ ಸೇವೆಯನ್ನು ಆರಂಭಿಸಲಿವೆ. ಐಡಿಯಾ ಸೆಲ್ಯುಲಾರ್ ಇದರಲ್ಲಿ ಮುಂಚೂಣಿಯಲ್ಲಿದ್ದು ನಾಡಿದ್ದು ಅಂದರೆ 20ನೇ ತಾರೀಖಿನಿಂದ ದೇಶಾದ್ಯಂತ ಈ ಸೇವೆಯನ್ನು ಆರಂಭಿಸಲಿದೆ. ಇದಕ್ಕಾಗಿ ದೇಶದ ಸುಮಾರು 700 ಮಿಲಿಯನ್ ಮೊಬೈಲ್ ಬಳಕೆದಾರರಿಗೆ ಅನುಕೂಲವಾಗುವಂತೆ ಸಹಾಯವಾಣಿ ಟೂಲ್ ಫ್ರೀ ನಂಬರ್ 1800-270-0000 ಗೆ ಕರೆ ಮಾಡಬಹುದಾಗಿದೆ. ಐಡಿಯಾ, ವೊಡಾಫೋನ್ ನಂತಹ ಕಂಪನಿಗಳು ಈಗಾಗಲೇ ಎಂಎನ್ ಪಿ ಜಾಹೀರಾತು ಅಭಿಯಾನ ಆರಂಭಿಸಿವೆ.
ಏನಿದು ನಂಬರ್ ಪೊರ್ಟೆಬಿಲಿಟಿ?: ಸಿಂಪಲ್ ಆಗಿ ಹೇಳಬೇಕೆಂದರೆ ಹಳೆಯ ಮೊಬೈಲ್ ನಂಬರ್ ಉಳಿಸಿಕೊಂಡು ಹೊಸ ಮೊಬೈಲ್ ಕಂಪನಿಯ ಸೇವೆಯನ್ನು ಪಡೆಯುವುದು. ಅಂದರೆ ಈಗಿನ ಕಂಪನಿ ನೀಡುತ್ತಿರುವ ಸೇವೆ ನಿಮಗೆ ಇಷ್ಟವಾಗದೇ ಇದ್ದರೆ ಅದೇ ನಂಬರ್ ನ ಬೇರೊಂದು ಕಂಪನಿಯ ಸಿಮ್ ಖರೀದಿಸಬಹುದು.
ಈಗ ಮೊಬೈಲ್ ಸೇವಾದಾರ ಕಂಪನಿಗಳು ನೀಡುವ ಆಫರ್ ಗಳು ಒಂದಕ್ಕಿಂತ ಒಂದು ಅತ್ಯುತ್ತಮವಾಗಿವೆ. ಬೇರೊಂದು ಕಂಪನಿಯ ಆಫರ್ ನೋಡಿ ಛೇ ಆ ಸಿಮ್ ನನ್ನಲ್ಲಿರುತ್ತಿದ್ದರೆ? ಎಂಬ ಬಯಕೆ ನಿಮಗಿರಬಹುದು. ಅಥವಾ ಇಂತಹ ಆಫರ್ ಗಳಿಂದಾಗಿ ನೀವು ಹಲವು ಸಿಮ್ ಗಳ ಒಡೆಯರಾಗಿರಬಹುದು. ಇನ್ನು ಮುಂದೆ ಹಳೆಯ ನಂಬರ್ ಉಳಿಸಿಕೊಂಡೇ ನಿಮಗಿಷ್ಟವಾದ ಯಾವುದೇ ಕಂಪನಿಯ ಸಿಮ್ ಖರೀದಿಸಬಹುದು.
ಕೇವಲ 19 ರೂಪಾಯಿ ವೆಚ್ಚ: ಸಿಮ್ ಬದಲಾಯಿಸಿದರೂ ಹಳೆಯ ನಂಬರ್ ಉಳಿಸಿಕೊಳ್ಳಲು ಕೇವಲ 19 ರೂಪಾಯಿ ಖರ್ಚು ಮಾಡಿದರೆ ಸಾಕು. ಈ ಸೇವೆಯನ್ನು ಪಡೆಯಬಯಸುವವರು PORT ಅಂತ ಮೊಬೈಲ್ ನಲ್ಲಿ ಕೀ ಮಾಡಿ ಅದರ ಮುಂದೆ ಮೊಬೈಲ್ ಸಂಖ್ಯೆ ಹಾಕಿ 1900 ನಂಬರ್ ಗೆ ಸಂದೇಶ ಕಳಿಸಿದರೆ ಸಾಕು. ಅಲ್ಲಿಂದ ಯೂನಿಕ್ಯೂ ಪೊರ್ಟಿಂಗ್ ಕೊಡ್(ಯುಪಿಸಿ) ನಿಮ್ಮ ಮೊಬೈಲ್ ಗೆ ಬರುತ್ತದೆ. ಈ ಎಸ್ಎಂಎಸ್ ನ್ನು ನಿಮ್ಮ ಹಿಂದಿನ ಮೊಬೈಲ್ ಸೇವಾ ಕಂಪನಿಗೆ ಕಳುಹಿಸಬೇಕಾಗುತ್ತದೆ. ಅಥವಾ ನೀವು ಹಿಂದಿನ ಕಂಪನಿ ನೀಡುವ ಫಾರ್ಮ್ ತುಂಬಿಸಿ ಯುಪಿಸಿ ಕೋಡ್ ಪಡೆಯಬಹುದು. ಆದರೆ ಈ ಪ್ರಕ್ರಿಯೆಗೆ ಸುಮಾರು ಒಂದು ವಾರ ಬೇಕಾಗುತ್ತದೆ. ಅದಕ್ಕಿಂತ ಎಸ್ಎಂಎಸ್ ಕಳುಹಿಸುವುದು ಉತ್ತಮ.
ಪೊರ್ಟೆಬಿಲಿಟಿ
ಆರಂಭವಾದ
ನಂತರ
ಹೀಗೆ
ಮಾಡಿ
*
PORT
ಅಂತ
ಟೈಪ್
ಮಾಡಿ
ಅದರ
ಮುಂದೆ
ನಿಮ್ಮ
ಮೊಬೈಲ್
ಸಂಖೈ
ಬರೆದು
1900ಕ್ಕೆ
ಕಳಿಸಿ.
ನಿಮಗೆ
ಅಲ್ಲಿಂದ
ಯೂನಿಕ್ಯೂ
ಪೊರ್ಟಿಂಗ್
ನಂಬರ್
ಎಸ್
ಎಂ
ಎಸ್
ಮೂಲಕ
ದೊರಕುತ್ತದೆ.
*
ಅಲ್ಲಿ
ದೊರಕಿದ
ಯೂನಿಕ್ಯೂ
ಪೊರ್ಟಿಂಗ್
ನಂಬರ್
ನ್ನು
ನಿಮ್ಮ
ಹಿಂದಿನ
ಮೊಬೈಲ್
ಸೇವಾ
ಕಂಪನಿಗೆ
ಎಸ್
ಎಂ
ಎಸ್
ಮಾಡಿ.
*
ಹಳೆಯ
ಕಂಪನಿ
ನಿಮ್ಮ
ದಾಖಲೆ
ಪರಿಶೀಲಿಸಿ
ಯಾವುದೇ
ಬಾಕಿ
ಇಲ್ಲವೆಂದು
ಪರಿಶೀಲಿಸುತ್ತದೆ.
ಎಲ್ಲ
ಚುಕ್ತಾ
ಮಾಡಿದ
ಮೇಲೆ
ಬೇರೆ
ಸೇವಾದಾರಲ್ಲಿಗೆ
ಹೋಗಲು
ಅವಕಾಶ
ನೀಡುತ್ತದೆ.
*
ಹೊಸ
ಮೊಬೈಲ್
ಸೇವಾದಾರ
ಕಂಪನಿ
ನಿಮಗೆ
ಎಸ್ಎಂಎಸ್
ಕಳುಹಿಸಿ
ಕೊಡುತ್ತದೆ.
ನಂತರದ
ನಾಲ್ಕು
ದಿನಗಳೊಳಗೆ
ಈ
ಸೇವೆ
ನಿಮಗೆ
ದೊರಕಬಹುದು.
*
ನಿಮ್ಮ
ಹಳೆಯ
ಸಿಮ್
ಡೆಡ್
ಆದ
ಎರಡು
ಗಂಟೆಯ
ನಂತರ
ಸುಮಾರು
19
ರೂಪಾಯಿ
ಮತ್ತು
ಸೂಕ್ತ
ದಾಖಲೆ
ನೀಡಿ
ಹೊಸ
ಕಂಪನಿಯಿಂದ
ಸೇವೆ
ಪಡೆದುಕೊಳ್ಳಬಹುದು.
(ಮುಂದಿನ
ದಿನಗಳಲ್ಲಿ
ಈ
ಸೇವೆ
ಪಡೆಯುವುದು
ಇನ್ನಷ್ಟು
ಸುಲಭವಾಗಬಹುದು)
ಸಣ್ಣ ಫ್ಲಾಷ್ ಬ್ಯಾಕ್: ಬ್ರೆಜಿಲ್, ಅಮೆರಿಕಾ, ಆಸ್ಟ್ರೇಲಿಯಾ, ಹಾಂಕಾಂಗ್ ಸೇರಿದಂತೆ ಹೆಚ್ಚಿನ ದೇಶಗಳಿಗೆ ಈ ಸೇವೆ ಆಗಮಿಸಿ ಹಲವು ವರ್ಷಗಳೇ ಕಳೆದಿವೆ. ಕಳೆದ ವರ್ಷವೇ ಈ ಸೇವೆ ಇಲ್ಲಿ ಆರಂಭವಾಗಬೇಕಿತ್ತು. ಆದರೆ ದೂರಸಂಪರ್ಕ ಪ್ರಾಧಿಕಾರ ತಿಳಿಸಿದ ಗಡುವಿನೊಳಗೆ ಸೇವೆಯನ್ನು ನೀಡುವಲ್ಲಿ ಮೊಬೈಲ್ ಸೇವಾದಾರ ಕಂಪನಿಗಳು ವಿಫಲವಾಗಿದ್ದವು. ಕೊನೆಗೂ ಎಲ್ಲರೂ ಕಾಯುತ್ತಿರುವ ದಿನ ಹತ್ತಿರದಲ್ಲಿದೆ.