ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಿಸ್ ಬ್ಯಾಂಕಿನಲ್ಲಿ ರೊಕ್ಕ ಇಟ್ಟವರಾರು ಗೊತ್ತಾ : ವಿಕಿಲೀಕ್ಸ್

By Mrutyunjaya Kalmat
|
Google Oneindia Kannada News

WikiLeaks founder Julian Assange
ಲಂಡನ್, ಜ. 18 : ಸ್ವಿಸ್ ಬ್ಯಾಂಕ್ ನಲ್ಲಿ ಭಾರತದ ಅಪಾರ ಪ್ರಮಾಣದ ಹಣ ಇದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಅಲ್ಲಿ ಹಣ ಇಟ್ಟವರು ಯಾರು ಎಂಬುದು ಯಾರಿಗೂ ಗೊತ್ತಿಲ್ಲ. ಜಗತ್ತಿನ ದೊಡ್ಡಣ್ಣ ಅಮೆರಿಕದ ಜನ್ಮ ಜಾಲಾಡಿದ ವಿಕಿಲೀಕ್ಸ್ ಇದೀಗ ಸ್ವಿಸ್ ಬ್ಯಾಂಕಿನಲ್ಲಿ ಕಳ್ಳ ಹಣ ಕೂಡಿಟ್ಟ ಗೂಳಿಗಳ ಹೆಸರನ್ನು ಬಹಿರಂಗಪಡಿಸುವ ಸಾಧ್ಯತೆ ಇದೆ.

ಸ್ವಿಸ್ ಬ್ಯಾಂಕಿನಲ್ಲಿ ಆಕೌಂಟ್ ಹೊಂದಿರುವವರ ಸಮಗ್ರ ಮಾಹಿತಿ ಒಳಗೊಂಡ ಎರಡು ಸೀಡಿಗಳನ್ನು ಸ್ವಿಸ್ ಬ್ಯಾಂಕಿನ ನಿವೃತ್ತ ಅಧಿಕಾರಿ ರುಡಾಲ್ಫ್ ಎಲ್ಮರ್ ಲಂಡನ್ ನಲ್ಲಿ ಸೋಮವಾರ ಸಂಜೆ ಜೂಲಿಯನ್ ಅಸ್ಸೇಂಜ್ ಅವರಿಗೆ ನೀಡಿದ್ದಾರೆ. ಅಮೆರಿಕದ ಅನೇಕ ರಹಸ್ಯಗಳನ್ನು ಬಹಿರಂಗಗೊಳಿಸಿ ವಿಶ್ವ ಖ್ಯಾತಿ ಗಳಿಸಿದ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸೇಂಜ್ ಅವರು ಸ್ವಿಸ್ ಬ್ಯಾಂಕ್ ಬುಡಕ್ಕೆ ಕೈಹಾಕಿದ್ದು, ಸ್ವಿಸ್ ಬ್ಯಾಂಕ್ ಹಣ ಇಟ್ಟಿರುವ ಜಗತ್ತಿನ ಸುಮಾರು 2000 ಮಂದಿಯ ಹೆಸರನ್ನು ಬಹಿರಂಗಪಡಿಸುವುದಾಗಿ ಘೋಷಿಸಿದ್ದಾರೆ. ಬ್ಯಾಂಕ್ ಅಧಿಕಾರಿ ನೀಡಿರುವ ಮಾಹಿತಿಯನ್ನು ಒಳಗೊಂಡ ಸೀಡಿಯನ್ನು ಪರಿಶೀಲನೆ ನಡೆಸಿದ ನಂತರ ವಿಕಿಲೀಕ್ಸ್ ನಲ್ಲಿ ಸಂಪೂರ್ಣ ವಿವರವನ್ನು ಬಿಡುಗಡೆ ಮಾಡಲಾಗುವುದು ಎಂದು ಜೂಲಿಯನ್ ಅಸ್ಸೇಂಜ್ ಸ್ಪಷ್ಟಪಡಿಸಿದ್ದಾರೆ.

ಸ್ವಿಸ್ ಬ್ಯಾಂಕಿನಲ್ಲಿರುವ ಭಾರತೀಯ ಹಣಕ್ಕೆ ಸಂಬಂಧಿಸಿದಂತೆ ಅನೇಕ ವರ್ಷಗಳಿಂದ ವಾದ ವಿವಾದಗಳು ನಡೆಯುತ್ತಲೇ ಇವೆ. ಬಿಜೆಪಿ ಹಾಗೂ ಇತರೆ ಪ್ರತಿಪಕ್ಷಗಳು ಸ್ವಿಸ್ ಬ್ಯಾಂಕಿನಲ್ಲಿರುವ ಹಣ ತರಲು ತೀವ್ರ ಒತ್ತಡ ಹೇರುತ್ತಲೇ ಬಂದಿವೆ. ಆದರೆ, ಆಡಳಿತರೂಢ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಮಾತ್ರ ವಿರೋಧ ಪಕ್ಷಗಳ ಒತ್ತಾಯವನ್ನು ನಿರ್ಲಕ್ಷಿಸುತ್ತಲೇ ಬಂದಿದೆ. ಸ್ವಿಸ್ ಬ್ಯಾಂಕಿನಲ್ಲಿರುವ ಹಣಕ್ಕೆ ಸಂಬಂಧಿಸಿದಂತೆ ವಿಕಿಲೀಕ್ಸ್ ಬಾಯಿಬಿಟ್ಟಿರುವುದು ಬಿಜೆಪಿ ಸೇರಿದಂತೆ ವಿರೋಧ ಪಕ್ಷಗಳಿಗೆ ಸಹಿ ಸುದ್ದಿ ಆಗಿದೆ. ಮೂಲಗಳ ಪ್ರಕಾರ ಸ್ವಿಸ್ ಬ್ಯಾಂಕಿನಲ್ಲಿ ಭಾರತದ ಸುಮಾರು 64 ಲಕ್ಷ ಕೋಟಿ ರುಪಾಯಿ ಕಪ್ಪು ಹಣವಿದೆ ಎನ್ನಲಾಗಿದೆ.

English summary
A former Swiss Bank executive, Rudolf Elmer empowered Whistleblower WikiLeaks by rendering two CDs containing details of more than 2000 Swiss bank accounts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X