ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ ಸಭಾಪತಿ ವಿಮಲಾಗೌಡರ ಬಯೋಡೇಟಾ

By Mahesh
|
Google Oneindia Kannada News

Vimala Gowda Profile
ವಿಧಾನ ಪರಿಷತ್ ನ ಉಪ ಸಭಾಪತಿಯಾಗಿ ಅವಿರೋಧವಾಗಿ ಆಯ್ಕೆ ಆಗಿರುವ ವಿಮಲಾಗೌಡ ಅವರು ಎಂ.ಆರ್. ಲಕ್ಷ್ಮಮ್ಮ, ರಾಣಿ ಸತೀಶ್ ನಂತರ ಉಪ ಸಭಾಪತಿ ಸ್ಥಾನವನ್ನು ಅಲಂಕರಿಸಿದ ಮೂರನೇ ಮಹಿಳೆಯಾಗಿದ್ದಾರೆ. ಸಚಿವ ಸಂಪುಟದ ಆಕಾಂಕ್ಷಿಯಾಗಿದ್ದ ವಿಮಲಾ ಅವರಿಗೆ ಉಪ ಸಭಾಪತಿ ಸ್ಥಾನ ದೊರಕಿರುವುದು ಸಂತೋಷವಾಗಿದೆಯಂತೆ. ಅವರ ರಾಜಕೀಯ ಬದುಕಿನ ಸಂಕ್ಷಿಪ್ತ ಚಿತ್ರಣ ಇಲ್ಲಿದೆ.

ಹೆಸರು : ಶ್ರೀಮತಿ ವಿಮಲಾಗೌಡ
ಹುಟ್ಟಿದ ದಿನಾಂಕ : 20-11-1955
ತಂದೆ/ತಾಯಿಯ ಹೆಸರು: ಲೇಟ್ ಹೆಚ್. ವೆಂಕಟಪ್ಪ, ಲೇಟ್ ಶ್ರೀಮತಿ ಲಕ್ಷ್ಮಮ್ಮ
ಹುಟ್ಟಿದ ಸ್ಥಳ: ಬೆಂಗಳೂರು, ತಂದೆ, ತಾಯಿ ಹಾಗೂ ಗಂಡನ ಮನೆ ನಾಗಮಂಗಲ, ಮಂಡ್ಯ ಜಿಲ್ಲೆ,

ವಿದ್ಯಾಭ್ಯಾಸ

ವಿದ್ಯಾರ್ಹತೆ: ಪದವೀಧರೆ, ರಾಜಕೀಯ ಶಾಸ್ತ್ರದಲ್ಲಿ ಬಿ.ಎ.
ವಿಳಾಸ : ನಂ. 1113, "ಭುವಿ" 20 ನೇ ಕ್ರಾಸ್ 14 ನೇ ಮೈನ್,
ಬಿ. ಡಿ. ಎ. ಕಾಂಪ್ಲೆಕ್ಸ್ ರಸ್ತೆ, ಮೂರನೇ ಸೆಕ್ಟರ್, ಹೆಚ್.ಎಸ್.ಆರ್. ಬಡಾವಣೆ, ಬೆಂಗಳೂರು -34
ಮಕ್ಕಳು : ಇಬ್ಬರು ಗಂಡು ಮಕ್ಕಳು

ರಾಜಕೀಯ ಪ್ರವೇಶ: 1980 ರಲ್ಲಿ ಭಾರತೀಯ ಜನತಾಪಕ್ಷ ಪ್ರವೇಶ, ಬೆಂಗಳೂರು ರಾಜಾಜಿನಗರದ ಕಾರ್ಯಕರ್ತೆ, ಬೆಂಗಳೂರು ನಗರ ಮಹಿಳಾ ಸಂಚಾಲಕಿಯಾಗಿ ಪ್ರವೇಶ.

* 1980 ರಿಂದ 1983 ರವರೆಗೆ ರಾಷ್ಟ್ರ ಸೇವಿಕಾ ಸಮಿತಿ ಕಾರ್ಯಕರ್ತೆ.
* 1985 ರಿಂದ 1995 ರವರೆಗೆ ರಾಜ್ಯ ಬಿ.ಜೆ.ಪಿ. ಕಾರ್ಯದರ್ಶಿ.
* 1994 ರಲ್ಲಿ ಬಿನ್ನಿಪೇಟೆ ವಿಧಾನ ಸಭಾ ಕ್ಷೇತ್ರಕ್ಕೆ ಸ್ವರ್ಧೆ, 11 ವರ್ಷ ಸಹಕಾರಿ ಕ್ಷೇತ್ರದಲ್ಲಿ ದಿ ಬೆಂಗಳೂರು ಸೆಂಟ್ರಲ್ ಕೋ. ಆಫ್ ಬ್ಯಾಂಕ್( 1994 ರಿಂದ 2005) ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
* 2000ನೇ ಇಸವಿ ವಿಧಾನ ಪರಿಷತ್ ಸದಸ್ಯೆಯಾಗಿ ನೇಮಕ (ವಿಧಾನಸಭೆಯಿಂದ ಚುನಾಯಿತ).
* 2001 ರಿಂದ 2004 ರವರೆಗೆ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ, ಅಖಿಲ ಭಾರತ ಮಹಿಳಾ ಮೋರ್ಚ ಕಾರ್ಯದರ್ಶಿ ಹಾಗೂ ಅಖಿಲ ಭಾರತ ಮಹಿಳಾ ಮೋರ್ಚ ಉಪಾಧ್ಯಕ್ಷೆ.
* 2006 ನೇ ಇಸವಿಯಲ್ಲಿ ವಿಧಾನ ಪರಿಷತ್ ಸದಸ್ಯೆಯಾಗಿ ಎರಡನೇ ಅವಧಿಗೆ ಮರು ನೇಮಕ.
* ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್.ಡಿ.ಎ ಸರ್ಕಾರದಲ್ಲಿ ಮೂರು ವರ್ಷ women empowerment advisory ಕಮಿಟಿಯಲ್ಲಿ ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಪಾಂಡಿಚೇರಿ ರಾಜ್ಯಗಳಲ್ಲಿ ಛೇರ್ ಪರ್ಸನ್ ಆಗಿ ಅತ್ಯುತ್ತಮ ಕಾರ್ಯ ನಿರ್ವಹಣೆ.

ಹೋರಾಟಗಳು: ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಅಶ್ಲೀಲ ಭಿತ್ತಿ ಚಿತ್ರಗಳು, ಆನ್‌ಲೈನ್ ಲಾಟರಿ ನಿಷೇಧ ಬಗ್ಗೆ ಹಾಗೂ ಮುಖ್ಯವಾಗಿ ಲೈವ್ ಬ್ಯಾಂಡ್ ಮುಚ್ಚಿಸುವಲ್ಲಿ ಯಶಸ್ವಿಯಾಗಿರುವುದು.

ಭಾಷೆ ಜ್ಞಾನ: ಕನ್ನಡ, ಇಂಗ್ಲೀಷ್, ಹಿಂದಿ, ತಮಿಳು, ತೆಲಗು

ಹವ್ಯಾಸಗಳು: ಪುಸ್ತಕ ಓದುವುದು, ಸಾಹಿತ್ಯ ಸಂಗೀತದ ಮೇಲೆ ಆಸಕ್ತಿ, ನಾಟಕ ನೋಡುವುದು, ಉತ್ತಮ ಧಾರಾವಾಹಿ ನೋಡುವುದು, ಚರ್ಚಾಸ್ಪರ್ದೆ, ಸಂವಾದಗಳಲ್ಲಿ ಭಾಗಿಯಾಗುವುದು, ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಆಸಕ್ತಿ, ಜನಪರ ಕಾಳಜಿಯಿಂದ ಕೆಲಸ ಮಾಡುವುದು, ಮಹಿಳೆಯರ ಸಾಮಾಜಿಕ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುವುದು.

ವೃತ್ತಿ : ಸಣ್ಣ ಕೈಗಾರಿಕಾ ಮಹಿಳಾ ಉದ್ಯಮಿ (ವಿಮಲ್ ಸ್ಟೋನ್ ಕ್ರಷರ್, ವಿಮಲ್ ಕಾಂಕ್ರೀಟ್ ಬ್ಲಾಕ್ಸ್ )

ದೂರವಾಣಿ: 99001 62739, 94807 01130, 080-2572 9019 [ವಿಧಾನ ಪರಿಷತ್]

English summary
BJP member Vimala Gowda has been elected as the new Deputy Chairman of Karnataka Legislative Council.Here is Vidhan Parishad deputy chairmen Vimala Gowda's Profile. Apart from Politics she successfully runs a small scale firm of Stone crusher and concrete blocks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X