ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಸಿಎಸ್ ಗೆ 15 ಸಾವಿರ ಉದ್ಯೋಗಿಗಳು ಬೇಕಂತೆ

By Mrutyunjaya Kalmat
|
Google Oneindia Kannada News

ಮುಂಬೈ, ಜ. 18 : ದೇಶದ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿ ಟಾಟಾ ಕನ್ಸಲ್ಟನ್ಸಿ ಸರ್ವೀಸಸ್(ಟಿಸಿಎಸ್) ನಾಲ್ಕನೇ ತ್ರೈಮಾಸಿಕ (ಜನವರಿಯಿಂದ ಮಾರ್ಚ್ 2011) ಅವಧಿಯೊಳಗೆ 12 ರಿಂದ 15 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಘೋಷಿಸಿದೆ.

ಕೇವಲ ಹತ್ತು ತಿಂಗಳ ಅವಧಿ ಅಂದರೆ 2010ರ ಡಿಸೆಂಬರ್ ಅಂತ್ಯದ ವೇಳೆಗೆ ಕಂಪನಿಯೂ ಸುಮಾರು 50 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿದೆ. ನಾಲ್ಕನೇ ತ್ರೈಮಾಸಿಕ ಮುಗಿಯುವುದರೊಳಗೆ ಇನ್ನು 12 ರಿಂದ 15 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಯೋಚಿಸಲಾಗಿದೆ ಎಂದು ಟಿಸಿಎಸ್ ಉಪಾಧ್ಯಕ್ಷ ಹಾಗೂ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಜಯ್ ಮುಖರ್ಜಿ ತಿಳಿಸಿದ್ದಾರೆ.

ಆರ್ಥಿಕ ಕುಸಿತ ನಂತರ ಕಂಪನಿಗೆ ಜಾಗತಿಕ ಮಟ್ಟದಲ್ಲಿ ನೂತನ ಯೋಜನೆಗಳು ಸಿಕ್ಕಿದ್ದು, ಕೆಲಸ ಹೆಚ್ಚಾಗಿದ್ದರಿಂದ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಮೂರನೇ ತ್ರೈಮಾಸಿಕ ಅವಧಿಯಲ್ಲಿ ಟಿಸಿಎಲ್ 20,219 ಮಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಒಂದೇ ತ್ರೈಮಾಸಿಕದಲ್ಲಿ ಇಷ್ಟು ದೊಡ್ಡ ಮಟ್ಟದ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿರುವುದು ಇದೇ ಪ್ರಥಮ ಎಂದು ಮುಖರ್ಜಿ ವಿವರಿಸಿದರು. ಸದ್ಯ 1,86,914 ಉದ್ಯೋಗಿಗಳು ಟಿಸಿಎಸ್ ನಲ್ಲಿ ಕೆಲಸ ಮಾಡುತ್ತಿದ್ದಾರೆ.(ಟಿಸಿಎಸ್)

English summary
Tata Consultancy Services (TCS), India's largest software exporter, said it has hired 50,000 personnel in the nine-month period ended December 2010 and expects to add another 12,000-15,000 in Q4.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X