ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವಿಟ್ಟರ್ ತಾಣದಲ್ಲಿ ಸತ್ತು ಬದುಕಿರುವ ವಯೋವೃದ್ಧ

By Mahesh
|
Google Oneindia Kannada News

Nelson Mandela
ಜೋಹಾನ್ಸ್‌ಬರ್ಗ್, ಜ.18: ದಕ್ಷಿಣ ಆಫ್ರಿಕದ ಮಾಜಿ ಅಧ್ಯಕ್ಷ, ವರ್ಣಭೇದ ವಿರೋಧಿ ಚಳವಳಿಯ ಅಗ್ರ ನಾಯಕ 92 ವರ್ಷದ ನೆಲ್ಸನ್ ಮಂಡೇಲಾ ನಿಧನ ಹೊಂದಿದ್ದಾರೆಂಬ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಹರಿದಾಡಿರುವುದು ಅವರ ಅಸಂಖ್ಯಾತ ಅಭಿಮಾನಿಗಳನ್ನು ಕೆರಳಿಸಿದೆ. ಮಂಡೇಲಾ ಪ್ರತಿಷ್ಠಾನ, ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಸೇರಿದಂತೆ ಹಲವಾರು ಸಂಘಟನೆಗಳು ಈ ಬಗ್ಗೆ ತನಿಖೆಗೆ ಆಗ್ರಹಿಸಿದ್ದಾರೆ.

ನೆಲ್ಸನ್ ಮಂಡೇಲಾರ ನಿಧನದ ಸುದ್ದಿ ಅಪ್ಪಟ ಸುಳ್ಳು, ಮಂಡೇಲಾ ಅವರಿ ಸಂಪೂರ್ಣ ಸೌಖ್ಯವಾಗಿದ್ದಾರೆ ಹಾಗೂ ರಜಾದಿನಗಳನ್ನು ಕಳೆಯುತ್ತಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷೆ ಸೆಲ್ಲೊ ಹಟಾಂಗ್ ಹೇಳಿದ್ದಾರೆ. ವರ್ಣಭೇದ ವಿರೋಧಿ ನಾಯಕ ಹಾಗೂ ನೊಬೆಲ್ ಪುರಸ್ಕೃತ ಮಂಡೇಲಾ ನಿಧನರಾಗಿದ್ದಾರೆಂದು ಟ್ವಿಟ್ಟರ್ ನಲ್ಲಿ ಭಾನುವಾರ ಸುದ್ದಿ ಹರಡಿತ್ತು. ಆದರೆ ಕೆಲವೇ ಗಂಟೆಗಳ ಬಳಿಕ ಅದು ಸುಳ್ಳು ಸುದ್ದಿಯೆಂದು ಖಚಿತವಾಯಿತು.

ಟ್ವಿಟ್ಟರ್‌ನಲ್ಲಿ ಈ ರೀತಿ ನಿಧನದ ಹುಸಿ ಸುದ್ದಿಗೆ ಮಂಡೇಲಾ ಅವರೇನು ಮೊದಲ ಬಲಿಪಶುವಲ್ಲ. ಖ್ಯಾತ ಗಾಯಕಿ ಆರೆಥಾ ಫ್ರಾಂಕ್ಲಿನ್, ಹಾಲಿವುಡ್ ತಾರೆಯರಾದ ಚಾರ್ಲಿ ಶೀನ್, ಜಾನಿ ಡೆಪ್ ಹಾಗೂ ಮೊರ್ಗಾನ್ ಫ್ರಿಮ್ಯಾನ್ ನಿಧನದ ಹುಸಿ ಸುದ್ದಿಗಳನ್ನು ಟ್ವಿಟ್ಟರ್‌ನಲ್ಲಿ ಕಿಡಿಗೇಡಿಗಳು ಪ್ರಸಾರ ಮಾಡಿದ್ದರು.

ಬ್ರೇಕಿಂಗ್ ಸುದ್ದಿಗಳ ಮೊದಲು ಪ್ರಸಾರ ಮಾಡುವ ತಾಣ ಎಂಬ ಹೆಗ್ಗಳಿಕೆ ಗಳಿಸಿದ್ದ ಟ್ವಿಟ್ಟರ್ ಕೀರ್ತಿಗೆ ಕಪ್ಪು ಮಸಿ ಬಳಿಯಲು ಬ್ಲ್ಯಾಕ್ ಬೆರ್ರಿ ಮೆಸ್ಸೆಂಜರ್ ಮೂಲಕ ಈ ರೀತಿ ಸುಳ್ಳು ಸುದ್ದಿಯನ್ನು ಕಿಡಿಗೇಡಿಗಳು ಹರಡಿದ್ದಾರೆ ಎಂದು ಸದ್ಯಕ್ಕೆ ತಿಳಿದು ಬಂದಿದೆ.[ಟ್ವಿಟ್ಟರ್]

English summary
The African National Congress (ANC) and Nelson Mandela Foundation have dispelled and denied reports on micro blogging site twiter claiming that former South African President Nelson Mandela had passed away. Enraged Mandela Twitter fans asking for an investigation in this regard.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X