• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಪ್ಪಾಜಿ ಪುತ್ಥಳಿಯಲ್ಲಿ ಜೀವಕಳೆಯಿದೆ: ಶಿವರಾಜ್

By ರೋಹಿಣಿ, ಬಳ್ಳಾರಿ
|

ಬಳ್ಳಾರಿ, ಜ.18: 'ಮೈಲಾರಿ" ಚಿತ್ರದ ಯಶಸ್ಸಿನ ಹಿನ್ನಲೆಯಲ್ಲಿ ಬಳ್ಳಾರಿಗೆ ಸೋಮವಾರ ಭೇಟಿ ನೀಡಿದ್ದ ಚಿತ್ರ ತಂಡದ ಸದಸ್ಯರು ಹಾಗೂ ನಾಯಕ ನಟ ಶಿವರಾಜಕುಮಾರ್ ಅವರ ಜೊತೆ ಬಳ್ಳಾರಿಯ ಅಧಿದೇವತೆ ಶ್ರೀ ಕನಕ ದುರ್ಗಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ - ಪ್ರಾರ್ಥನೆ ಸಲ್ಲಿಸಿದ್ದಾರೆ.

ಹೊಸಪೇಟೆಯಿಂದ ಬಳ್ಳಾರಿಗೆ ಆಗಮಿಸಿದ ಚಿತ್ರತಂಡವನ್ನು ಕನ್ನಡಪರ ವಿವಿಧ ಸಂಘಟನೆಗಳ ಮುಖಂಡರು, ಶಾಸಕ ಜಿ. ಸೋಮಶೇಖರರೆಡ್ಡಿ ಹಾಗೂ ಕಾರ್ಪೊರೇಟರ್‌ಗಳು ಆಹ್ವಾನಿಸಿದ ನಂತರ, ಶ್ರೀ ಕನಕದುರ್ಗಮ್ಮ ದೇವಸ್ಥಾನಕ್ಕೆ ಎಲ್ಲರೂ ಹೊರಟರು.

ಶ್ರದ್ಧೆ - ಭಕ್ತಿಯಿಂದ ಶ್ರೀ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ - ಪ್ರಾರ್ಥನೆ ಸಲ್ಲಿಸಿದ ಚಿತ್ರ ತಂಡ, ದೇವಿಯ ಮಹಾತ್ಮೆಯನ್ನು ಕೇಳಿ ತಿಳಿದುಕೊಂಡರು. ಬಳ್ಳಾರಿ ಮಹಾನಗರ ಪಾಲಿಕೆ ನಿರ್ವಹಿಸುತ್ತಿರುವ ಡಾ. ರಾಜಕುಮಾರ್ ಪಾರ್ಕ್‌ಗೆ ಆಗಮಿಸಿದ ಚಿತ್ರತಂಡ, ಡಾ. ರಾಜಕುಮಾರ್ ಅವರ ಪುತ್ಥಳಿಗೆ ಹೂಮಾಲೆ ಹಾಕಿ ಗೌರವ ನಮನ ಸಲ್ಲಿಸಿತು.

ಪುತ್ಥಳಿ ಜೀವಂತವಾಗಿದೆ:ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಜಕುಮಾರ್ ಅವರು, 'ಪುತ್ಥಳಿ ಜೀವಂತವಾಗಿದೆ. ಆಕರ್ಷಕವಾಗಿದೆ. ಈ ಪುತ್ಥಳಿಯನ್ನು ನೋಡಿ ಖುಷಿ ಆಯಿತು. ನನ್ನ ತಂದೆಯವರ ಮುಂದೆಯೇ ನಿಂತಂತೆ ಅನುಭವ ಆಗುತ್ತಿದೆ" ಎಂದು ಹರ್ಷ ವ್ಯಕ್ತಪಡಿಸಿದರು.

'ಮೈಲಾರಿ" ಚಿತ್ರವನ್ನು ಕೆಲ ಹೊತ್ತು ವೀಕ್ಷಿಸಿದ ಶಿವರಾಜಕುಮಾರ್ ಅವರು, ಸಿನಿಮಾ ಥಿಯೇಟರ್‌ನ ಮುಂಭಾಗದಲ್ಲಿ ಜಮಾವಣೆ ಆಗಿದ್ದ ಸಾವಿರಾರು ಸಂಖ್ಯೆಯ ಅಭಿಮಾನಿಗಳನ್ನು ಉದ್ದೇಶಿಸಿ 'ಮೈಲಾಪುರ ಮೈಲಾರಿ..." ಹಾಡನ್ನು ಹಾಡಿ ಕಲಾಸಕ್ತರು, ಕಲಾ ಪೋಷಕರನ್ನು ರಂಜಿಸಿದರು.

ನಂತರ ಬಳ್ಳಾರಿಯ ಎಪಿಎಂಸಿಯ ಕ್ರಿಯಾಶೀಲ ಕನ್ನಡಿಗರ ವಿವಿಧ ಸಂಘಟನೆಗಳ ಆಹ್ವಾನದ ಮೇರೆಗೆ ಎಪಿಎಂಸಿ ಆವರಣಕ್ಕೆ ಭೇಟಿ ನೀಡಿ ಅಲ್ಲಿಯ ಕನ್ನಡ ಧ್ವಜಾರೋಹಣ ನಡೆಸಿ ಸಂಘಟನೆಗಳು ಹಾಗೂ ಪದಾಧಿಕಾರಿಗಳಿಗೆ ಶುಭ ಹಾರೈಸಿ ಅಭಿನಂದಿಸಿದರು.

ಗ್ಯಾಲರಿ: ಅಪ್ಪಾಜಿ ಪುತ್ಥಳಿಗೆ ನಮಿಸಿದ ಶಿವಣ್ಣ

ಗಡಿನಾಡಾಗಿರುವ ಬಳ್ಳಾರಿಯಲ್ಲಿ ಕನ್ನಡವನ್ನು ಬೆಳೆಸಲಿಕ್ಕೆ ಅಗತ್ಯ ಸಹಕಾರವನ್ನು ನೀಡಲು ಡಾ. ರಾಜಕುಮಾರ್ ಕುಟುಂಬ ಸದಾ ಸಿದ್ಧ. ಈ ನಿಟ್ಟಿನಲ್ಲಿ ಸ್ಥಳೀಯ ಸಂಘಟನೆಗಳು ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಭಾಷೆಯನ್ನು ಬೆಳೆಸಲು, ಪ್ರತಿಭೆಗಳನ್ನು ಉಳಿಸಲು ಮುಂದಾಗಬೇಕು ಎಂದು ಹೇಳಿದರು.

ಬಳ್ಳಾರಿಯ ರೆಡ್ಡಿ ಸಹೋದರರ ಬ್ಯಾನರ್‌ನಲ್ಲಿ ಅಪ್ಪು ಪ್ರಸ್ತುತ ದಿನಗಳಲ್ಲಿ ನಟಿಸುವ ಸಾಧ್ಯತೆಗಳಿವೆ. ಮುಂದಿನ ದಿನಗಳಲ್ಲಿ ನಾನು ಕೂಡ ನಟಿಸಬಹುದು ಎಂದ ಅವರು, ಕನ್ನಡಿಗರ ಭಾಷಾ ಸೌಹಾರ್ದತೆಯನ್ನು ಕೊಂಡಾಡಿದರು. ಈ ಸಂದರ್ಭದಲ್ಲಿ ಶಾಸಕ ಜಿ. ಸೋಮಶೇಖರರೆಡ್ಡಿ, ವಿ.ಕೆ. ಬಸಪ್ಪ, ಚಿತ್ರ ತಂಡದ ಕಲಾವಿದರು ಹಾಗೂ ಇನ್ನಿತರರು ಉಪಸ್ಥಿತರಿದ್ದರು. [ಬಳ್ಳಾರಿ]

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mylari Vijaya Yatra- success rally of Hatrick hero Shivaraj kumar's latest movie Mylari held in Bellary. MLA Somashekar Reddy welcomed the Shivaraj Kumar. Later they visited temples and Dr.Raj Statue park in Bellary
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more