ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೃಹಿಣಿ ಆತ್ಮಹತ್ಯೆ : ಪತಿಯ ಬಂಧನವಿಲ್ಲ...?

By Mrutyunjaya Kalmat
|
Google Oneindia Kannada News

Crimebeat
ಬೆಂಗಳೂರು, ಜ. 18 : ಬಸವೇಶ್ವರ ನಗರದ ಸಮೀಪ ಇರುವ ಮಂಜುನಾಥ ನಗರದಲ್ಲಿ ನಡೆದಿದ್ದ ರೂಪಶ್ರೀ(25) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲು ಪೊಲೀಸರು ಮೀನಮೇಷ ಎಣಿಸುತ್ತಿದ್ದಾರೆ. ರೂಪಶ್ರೀ ಪತಿ ಮತ್ತು ಆತನ ಕುಟುಂಬ ಸದಸ್ಯರನ್ನು ಪೊಲೀಸರು ಈವರಗೊ ಬಂಧಿಸಿಲ್ಲ.

ರೂಪಶ್ರೀ ಪತಿ ಕಿರಣ್ ಕುಮಾರ್ ಅವರು ಹಾಲಿ ವಿಧಾನ ಪರಿಷತ್ ಸದಸ್ಯ ಜಗ್ಗೇಶ್ ಅವರ ಸಂಬಂಧಿ. ಆರೋಪಿಗಳಾದ ಕಿರಣ್ ಕುಮಾರ್, ಆತನ ತಾಯಿ ಗೌರಿ, ಸಹೋದರಿ ರಶ್ಮಿ ಮತ್ತು ತಂದೆ ಹನುಮಯ್ಯ ಅವರನ್ನು ಬಂಧಿಸದಂತೆ ಜಗ್ಗೇಶ್ ಅವರು ಪೊಲೀಸರ ಮೇಲೆ ಒತ್ತಡ ಹೇರಿದ್ದಾರೆ ಎಂದು ರೂಪಶ್ರೀ ಅವರ ತಂದೆ ರಾಮಣ್ಣ ದೂರಿದ್ದಾರೆ.

ಬಿಜೆಪಿ ನಾಯಕರು ಹಾಗೂ ಕೆಲ ಸಚಿವರುಗಳು ಪೊಲೀಸರ ಮೇಲೆ ಪ್ರಭಾವ ಬೀರಿ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ. ರಾಜಕೀಯ ಒತ್ತಡಕ್ಕೆ ಮಣಿದು ಪೊಲೀಸರು ಕೈಚೆಲ್ಲುತ್ತಿದ್ದಾರೆ ಎಂದು ರಾಮಣ್ಣ ಆರೋಪಿಸಿದ್ದಾರೆ. ರಾಮಣ್ಣ ಅವರು ಆಹಾರ ಮತ್ತು ನಾಗರೀಕ ಇಲಾಖೆಯಲ್ಲಿ ನಿರೀಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ವರದಕ್ಷಿಣೆ ಕಿರುಕುಳ ತಾಳಲಾರದೆ ರೂಪಶ್ರೀ ಜ.14 ರಂದು ತವರು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.(ಕ್ರೈಂ)

English summary
A housewife committed suicide at her parents’ house in Manjunathnagar unable to bear the alleged dowry harassment by her in-laws. Rupashree’s father Ramanna, Food Inspector at Food and Civil Supplies Department, alleged that Kiran’s mother Gauri and sister Rashmi, an engineer, harassed his daughter for more dowry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X