ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಮೆಟ್ರೋ ಮೊದಲ ಪಯಣಕ್ಕೆ ಸಿದ್ಧರಾಗಿ

By Mahesh
|
Google Oneindia Kannada News

BMRCL Metro first run from Jan.24,2011
ಬೆಂಗಳೂರು, ಜ.18: ಅಂತೂ ಇಂತೂ ಈ ತಿಂಗಳಿನಲ್ಲೇ ಮೆಟ್ರೋ ರೈಲು ಅಧಿಕೃತವಾಗಿ ತನ್ನ ಮೊದಲ ಓಡಾಟ ಆರಂಭಿಸುವುದು ಖಚಿತವಾಗಿದೆ. ಇಂದು ಜೆಪಿ ನಗರದಲ್ಲಿ ಜಿಆರ್ ವಿಶ್ವನಾಥ್ ಅಂಡರ್ ಪಾಸ್ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ಜ.24 ರಂದು ಭೈಯಪ್ಪನ ಹಳ್ಳಿಯಿಂದ ಎಂಜಿ ರಸ್ತೆಗೆ ಮೆಟ್ರೋ ತನ್ನ ಮೊದಲ ಸಂಚಾರವನ್ನು ಆರಂಭಿಸಲಿದೆ ಎಂದರು.

ನಗರದಲ್ಲಿ ಮೆಟ್ರೋ ಕಾಮಗಾರಿ ತ್ವರಿತ ಗತಿಯಲ್ಲಿ ಸಾಗಿದ್ದು, ರಾಜ್ಯ ಸರ್ಕಾರ ಈಗಾಗಲೆ 2600 ಕೋಟಿ ರುಗಳನ್ನು ಮೊದಲ ಹಂತಕ್ಕೆ ನೀಡಿದೆ. ಮುಂದಿನ ಹಂತದ ಕಾಮಗಾರಿ ಕೂಡಾ ಜೊತೆಜೊತೆಗೆ ಸಾಗಿದೆ ಎಂದರು. ಬೆಂಗಳೂರು ಮಹಾನಗರ ಪಾಲಿಕೆ ಉತ್ತಮ ಕೆಲಸ ನಿರ್ವಹಿಸುತ್ತಿದ್ದು, ಅಗತ್ಯ ಮೂಲ ಸೌಕರ್ಯ ಕಲ್ಪಿಸುತ್ತಿದೆ.

ಮೆಟ್ರೋ ದರ ಎಷ್ಟಿರಬಹುದು?:
ಸಾಮಾನ್ಯ ಬಸ್ ಪಯಣ ದರದ ಒಂದೂವರೆ ಪಟ್ಟು ಹೆಚ್ಚು ದುಡ್ಡು ಮೆಟ್ರೋ ರೈಲಿಗೆ ನೀಡಿದರೆ ತ್ವರಿತವಾಗಿ ಸಂಚರಿಸಬಹುದು. ದರ ಪಟ್ಟಿ ಸಂಪೂರ್ಣವಾಗಿ ಲಭ್ಯವಿಲ್ಲದಿದ್ದರೂ ಮೊದಲ ಹಂತಕ್ಕೆ ರು. 7 ಎಂದು ನಿಗದಿಪಡಿಸಲಾಗಿದೆ. ಮುಂದಿನ ಹಂತದಲ್ಲಿ ರು.7 ರಿಂದ ರು. 15 ರ ಮಧ್ಯದಲ್ಲಿ ದರ ಇರುತ್ತದೆ. ಇದಲ್ಲದೆ ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕಿಸುವ ಬಿಎಂಟಿಸಿ ಬಸ್ ಗಳಲ್ಲಿ ಉಚಿತ ಪಯಣ ಸೌಲಭ್ಯವಿರುತ್ತದೆ. ಮೆಟ್ರೋ ಪ್ಲಸ್ ಬಿಎಂಟಿಸಿ ಪಾಸ್ ಪಡೆದು ಒಂದು ಮೆಟ್ರೋ ನಿಲ್ದಾಣದಲ್ಲಿ ಹತ್ತಿ ಇನ್ನೊಂದು ನಿಲ್ದಾಣದಲ್ಲಿ ಇಳಿದು ಮತ್ತೆ ಬಿಎಂಟಿಸಿಯ ಮೂಲಕ ಸಂಚರಿಸಬಹುದಾಗಿದೆ.

ಮೆಟ್ರೋ ವೋಲ್ವೋ ಕಾರ್ಡ್: ದಿನದ ಪಾಸ್ ರೀತಿಯಲ್ಲಿ ಮೆಟ್ರೋ ಹಾಗೂ ವೋಲ್ವೋ ಕಾರ್ಡ್ ಹೊರ ತರಲು ಸಾರಿಗೆ ಇಲಾಖೆ ಚಿಂತಿಸುತ್ತಿದೆ. ಸುಮಾರು 1110 ರು ನೀಡಿ ಪಾಸ್ ಪಡೆದು ವೋಲ್ವೋ ಹಾಗೂ ಮೆಟ್ರೋ ಎರಡರಲ್ಲೂ ದಿನಪೂರ್ತಿ ಸಂಚರಿಸುವ ಸೌಲಭ್ಯ ನೀಡಲು ಯೋಜಿಸಲಾಗಿದೆ. ಆದರೆ, ಬಿಎಂಟಿಸಿ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.

ಬಿಎಂಆರ್ ಸಿಎಲ್ ಎಸ್ ಬಿಐ ಕಾರ್ಡ್: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ಹಾಗೂ ಬಿಎಂಆರ್ ಸಿಎಲ್ ಕಾಂಬೋ ಕಾರ್ಡ್ (ಕ್ರೆಡಿಟ್/ಡೆಬಿಟ್) ಅನ್ನು ಮೆಟ್ರೋದಲ್ಲಿ ಟ್ರಾವೆಲ್ ಕಾರ್ಡ್ ರೀತಿ ಉಪಯೋಗಿಸುವ ಸೌಲಭ್ಯ ನೀಡಲು ಚಿಂತನೆ ನಡೆದಿದೆ. ಹಲವು ಬಾರಿ ಸಂಚರಿಸುವವರಿಗೆ ಈ ಕಾರ್ಡ್ ಅನುಕೂಲವಾಗಲಿದೆ. ಅಲ್ಲದೆ ಈ ಕಾರ್ಡ್ ಅನ್ನು ಪಾರ್ಕಿಂಗ್, ಕಾಫಿ ಶಾಪ್ ಮುಂತಾದ ಫೀಡರ್ ಸರ್ವೀಸ್ ಗಳಲ್ಲಿ ಬಳಸಲು ಬಿಎಂಆರ್ ಸಿಎಲ್ ಯೋಜಿಸಿದೆ.

ಪೂರ್ವ ದಿಂದ ಪಶ್ಚಿಮಭಾಗಕ್ಕೆ ಸುಮಾರು 33 ನಿಮಿಷದ ಮೆಟ್ರೋ ರೈಲಿನ ಪಯಣ, ಉತ್ತರ ಭಾಗದಿಂದ ದಕ್ಷಿಣಕ್ಕೆ 44 ನಿಮಿಷ ತಗಲುತ್ತದೆ. ಮೆಟ್ರೋ ರೈಲಿನ ಗರಿಷ್ಠ ವೇಗಮಿತಿ 80 ಕಿ.ಮೀ/ಗಂಟೆ. ಪ್ರತಿ ದಿನ ಸುಮಾರು 10 ರಿಂದ 12 ಲಕ್ಷ ಜನರನ್ನು ಹೊತ್ತೊಯ್ಯಲಿದೆ ಎಂದು ಬಿಎಂಆರ್ ಸಿ ವ್ಯವಸ್ಥಾಪಕ ನಿರ್ದೇಶಕ ಎನ್ ಶಿವಶೈಲಂ ಹೇಳುತ್ತಾರೆ.

ಮೊದಲ ಹಂತದ ಮಾರ್ಗ: ಭೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆ ಟರ್ಮಿನಲ್ (18.10 ಕಿ.ಮೀ)
ಈಗಿನ ಮಾರ್ಗ: ಓಲ್ಡ್ ಮದ್ರಾಸ್ ರಸ್ತೆ, ಸಿಎಂಎಚ್ ರಸ್ತೆ, ಹಲಸೂರು, ಟ್ರಿನಿಟಿ ಸರ್ಕಲ್, ಎಂಜಿ ರಸ್ತೆ, ಕೆಎಸ್ ಸಿಎ ಸ್ಟೇಡಿಯಂ
ಮುಂದುವರೆದು : ವಿಧಾನಸೌಧ, ಸೆಂಟ್ರಲ್ ಕಾಲೇಜು, ಮೆಜೆಸ್ಟಿಕ್, ಸಿಟಿ ರೈಲ್ವೇ ನಿಲ್ದಾಣ, ಮಾಗಡಿ ರಸ್ತೆ, ಹೊಸಹಳ್ಳಿ, ವಿಜಯನಗರ ಹಾಗೂ ದೀಪಾಂಜಲಿ ನಗರ. [ಬಿಎಂಆರ್ ಸಿಎಲ್]

English summary
CM B S Yeddyurappa today announced that ''the much awaited Metro train service will begin from Byappanahalli to M G Road in the first phase, from Jan.24. Karnataka government had already spent Rs 2,600 crore for the BMRCL project phase I. BMRCL Metro fare will be at about 1.5 times the ordinary bus fare.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X