ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏನೂ ಮಾಡಕ್ಕಾಗಲ್ಲ ಇಂದು Monday ಬಿಸಿ ಮಾರಾಯ್ರೆ!

By Rajendra
|
Google Oneindia Kannada News

Why you feel gloomy on Blue Monday?
ನ್ಯೂಯಾರ್ಕ್, ಜ.17: ಈ ಸೋಮವಾರ ಬಂದ್ರನೇ ಹೀಗೆ ನೋಡ್ರಿ. ಜಪ್ಪಯ್ಯ ಅಂದ್ರೂ ತಲೆಗೆ ಕವಿದ ಮಂಕು ಒಂಚೂರು ಕಡಿಮೆಯಾಗಲ್ಲ. ಯಾರೋ ಮಂಕು ಬೂದಿ ಎರಚಿದಂತೆ ಏನೋ ಒಂಥರಾ ಆಲಸ್ಯ, ಜಡತ್ವ್ವ. ಏನಿದು? ಯಾಕೀಗೆ ಆಗುತ್ತಿದೆ ಎಂದು ತಲೆ ಚಚ್ಚಿಕೊಂಡರೂ ಪ್ರಯೋಜನವಾಗಲ್ಲ. ಏಕೆಂದರೆ ಇದು ಪ್ರಾದೇಶಿಕ ಸಮಸ್ಯೆಯಲ್ಲ ಜಾಗತಿಕ ಸಮಸ್ಯೆ!

ಸೋಮವಾರವೇ ಯಾಕೆ ಹೀಗಾಗುತ್ತೆ ಎಂದರೆ, ಶನಿವಾರ, ಭಾನುವಾರ ಎರಡೂ ದಿನ ಹಾಯಾಗಿ ಕಳೆದಿರುತ್ತೀವಿ. ಸೋಮವಾರವೂ ತಲೆಗೆ ಹತ್ತಿದ ಮಂಕು ಇಳಿಯಲ್ಲಾ ಅಂತೀರಾ. ಇದ್ಯಾವುದೂ ಅಲ್ಲ ಬಿಡಿ. ಈ ಸೋಮವಾರವೇ ಹಿಂಗೆ. ಅದರಲ್ಲೂ ಮುಖ್ಯವಾಗಿ ಜನವರಿ 17ರ ಸೋಮವಾರವನ್ನಂತೂ ಕೇಳಲೇಬೇಡಿ!

ಪಂಡಿತರು ಒಂಚೂರು ತಲೆ ಖರ್ಚು ಮಾಡಿ ಈ ಸೋಮವಾರಕ್ಕೆ 'Blue Monday' ಎಂದು ಹೆಸರಿಟ್ಟಿದ್ದಾರೆ. ಹಾಗೆಂದರೆ Monday ಬಿಸಿ ಎಂದರ್ಥ! ವರ್ಷದ ಅತ್ಯಧಿಕ ಖಿನ್ನತೆಯ ದಿನ ಇದು. ಪ್ರತಿ ವರ್ಷ ಜನ'ವರಿ' ಮೂರನೇ ಸೋಮವಾರ ಬಂತೆಂದರೆ ಸಾಕು ಈ ಜಡತ್ವದ ಕಾಟ ತಪ್ಪಿದ್ದಲ್ಲ.

ಈ ದಿನ ಯಾಕೆ ಹೀಗಾಗುತ್ತದೆ ಎಂಬುದಕ್ಕೆ ವಿಜ್ಞಾನಿಗಳು ಹಲವಾರು ಕಾರಣಗಳನ್ನು ಪಟ್ಟಿ ಮಾಡಿದ್ದಾರೆ. ಅವುಗಳಲ್ಲಿ ಮುಖ್ಯವಾಗಿ ಕಳೆದ ವರ್ಷ ಮಾಡಿದ ಸಾಲಗಳು ಹಾಗೂ ಹವಾಮಾನ ಬದಲಾವಣೆ, ಹೊಸವರ್ಷದ ಹೊಸ ಗುರಿಗಳು, ಸಂಕಲ್ಪಗಳು ನಮ್ಮನ್ನು ಖಿನ್ನತೆಗೆ ದೂಡುವುದೇ ಈ ಮನಸ್ಥಿತಿಗೆ ಕಾರಣ ಎನ್ನುತ್ತಾರೆ.

ಅದು ಏನೇ ಇರಲಿ ಈ Monday ಬಿಸಿಯಿಂದ ಹೊರಬರಲು ಸಾಧ್ಯವಿಲ್ಲವೇ? ಎಂಬ ಬಿಲಿಯನ್ ಡಾಲರ್ ಪ್ರಶ್ನೆಗೆ 'ದಿ ಟೆಲಿಗ್ರಾಫ್' ಪತ್ರಿಕೆ ಕೆಲವೊಂದು ಉತ್ತರಗಳನ್ನು ಹುಡುಕಿದೆ. ಜನವರಿ 17ರ ಸೋಮವಾರವನ್ನು ಎಲ್ಲಾ ಅನಿಷ್ಟ ಸೋಮವಾರಗಳ ತಾಯಿ ಎಂದು ಬಣ್ಣಿಸಲಾಗಿದೆ. Monday ಬಿಸಿಯಿಂದ ಬಳಲುತ್ತಿರುವವರಿಗೆ ಇಲ್ಲಿದೆ ನೋಡಿ ಮದ್ದು.

* ದಾನ, ಧರ್ಮಗಳನ್ನು ಮಾಡಿ
* ನಿಮ್ಮ ಮನದನ್ನೆಯನ್ನು ಪ್ರೀತಿಯಿಂದ ಮಾತನಾಡಿಸಿ
* ಸಾಧ್ಯವಾದರೆ ಹಾಡೊಂದನ್ನು ಹಾಡಿ
* ಯಾರನ್ನಾದರೂ ಗೋಳು ಹೊಯ್ದುಕೊಳ್ಳಿ
* ನೇರವಾಗಿ ಕುಳಿತುಕೊಳ್ಳಿ
* ಸಂತೋಷವಾಗಿ ತಿನ್ನಲು ಪ್ರಯತ್ನಿಸಿ
* ಸಾಧ್ಯವಾದರೆ ಒಂದು ಸ್ಟೆಪ್ ಹಾಕಿ ನೋಡಿ
* ಬರಿಗಾಲಲ್ಲಿ ಹೆಜ್ಜೆ ಹಾಕಿ ನಲಿಯಿರಿ
* ಪ್ರಣಯಚೇಷ್ಟೆ ಯಾಕಾಗಬಾರದು
* ಹಕ್ಕಿಗಳ ಧ್ವನಿಗೆ ಕಿವಿಗೊಡಿ
* ದಿನಪತ್ರಿಕೆಗೆ ಒಂದು ಪತ್ರ ಒಗೆದು ಬಿಸಾಕಿ

ಇದಿಷ್ಟನ್ನು ಮಾಡಿ ನೋಡಿ ನಿಮ್ಮ Monday ಬಿಸಿ ಕ್ಷಣಮಾತ್ರದಲ್ಲಿ ಮಂಗಮಾಯವಾಗುತ್ತದೆ. ಇನ್ನೂ ನಿಮ್ಮ Monday ಬಿಸಿ ತಣ್ಣಗಾಗಲಿಲ್ಲ ಅಂದ್ರೆ ಏನೂ ಮಾಡಲಿಕ್ಕಾಗಲ್ಲ, ಈ ಹೊತ್ತು Monday ಬಿಸಿ ಮಾರಾಯ್ರೆ! ಇಲ್ಲ, ಮಂಡೆ ಬಿಸಿಯೂ ಇಲ್ಲ!

English summary
As the world celebrates 'Blue Monday' on Monday, Jan 17, most our readers get confused about its significance and whereabouts. Here we provides all information and ways to overcome Blue Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X