ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫಿ ಸಮಾಜಸೇವೆಗೆ ಭಲೇ ಎಂದ ಯಡಿಯೂರಪ್ಪ

By Mrutyunjaya Kalmat
|
Google Oneindia Kannada News

BS Yeddyurappa
ಮೈಸೂರು, ಜ. 17 : ಕಾರ್ಪೋರೇಟ್ ಸಂಸ್ಥೆಗಳು ಸಾಮಾಜಿಕ ಜವಾಬ್ದಾರಿ ಹೊರಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.

ನಗರದ ಹೆಬ್ಬಾಳು ಕೈಗಾರಿಕೆ ಪ್ರದೇಶದಲ್ಲಿ ಇನ್ಫೋಸಿಸ್ ನಿರ್ಮಿಸಿರುವ ಅಧುನಿಕ ಅಗ್ನಿಶಾಮಕ ಠಾಣೆ ಮತ್ತು 14 ವಸತಿಗೃಹಗಳನ್ನು ಉದ್ಘಾಟಿಸಿದ ಬಳಿಕ ಅವರು ಮಾತನಾಡುತ್ತಿದ್ದರು. ದೇಶದ ಸಾಫ್ಟ್ ವೇರ್ ಉದ್ಯಮದಲ್ಲಿ ಉನ್ನತಮಟ್ಟದಲ್ಲಿರುವ ಇನ್ಫೋಸಿಸ್ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಹೆಬ್ಬಾಳು ಕೈಗಾರಿಕೆ ಪ್ರದೇಶದಲ್ಲಿ 5 ಕೋಟಿ ರುಪಾಯಿ ವೆಚ್ಚದಲ್ಲಿ ಸೇವೆಗೆ ಸಮರ್ಪಿಸಿದ ಆಧುನಿಕ ಅಗ್ನಿಶಾಮಕ ಠಾಣೆ ಹಾಗೂ 14 ವಸತಿಗಳು ಗೃಹಗಳು ಇನ್ಫೋಸಿಸ್ ನ ಕೊಡುಗೆಯಾಗಿದ್ದು, ಸಾಮಾಜಿಕ ಜವಾಬ್ದಾರಿಗೆ ಸಾಕ್ಷಿಯಾಗಿದೆ ಎಂದರು.

ದೇಶದ ಎಲ್ಲ ಕಾರ್ಪೋರೇಟ್ ಸಂಸ್ಥೆಗಳು ಇನ್ಫೋಸಿಸ್ ಮಾದರಿಯಲ್ಲೇ ಸಾಮಾಜಿಕ ಕಾರ್ಯಕ್ಕೆ ಮುಂದೆ ಬರಬೇಕು. ರಾಜ್ಯಗಳು ಅಭಿವೃದ್ಧಿಯಾಗಬೇಕಾದರೆ ಇಂತಹ ಕಾರ್ಪೋರೇಟ್ ಸಂಸ್ಥೆಗಳ ಸಹಕಾರ ಅಗತ್ಯ ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟರು. ಸಾಮಾಜಿಕ ಕಾರ್ಯಗಳನ್ನು ತೊಡಗಿಸಿಕೊಳ್ಳುವ ಕಾರ್ಪೋರೇಟ್ ಸಂಸ್ಥೆಗಳಿಗೆ ಸರಕಾರ ಎಲ್ಲ ರೀತಿ ಸಹಾಯ ಸಹಕಾರ ನೀಡಲಿದೆ ಎಂದು ಅವರು ಹೇಳಿದರು.

English summary
Chief Minister Yeddyurappa appealed to the corporate bodies in Karnataka to join hands with the government to take up various projects to provide emergency and social services. Infosys has helped the State government set up a modern fire station complex in Mysore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X