ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಬರಿಮಲೆ ದುರಂತ : ರಾಜ್ಯದ 30 ಸಾವು

By Mrutyunjaya Kalmat
|
Google Oneindia Kannada News

Sabarimala Stempede
ಬೆಂಗಳೂರು, ಜ. 16 : ಶಬರಿಮಲೆ ಅಯ್ಯಪ್ಪ ದೇವಸ್ಥಾನ ಬಳಿ ನಡೆದ ಭೀಕರ ಕಾಲ್ತುಳಿತ ದುರಂತಕ್ಕೆ ಕರ್ನಾಟಕದ ಒಟ್ಟು 30 ಜನ ಸಾವಿಗೀಡಾಗಿದ್ದಾರೆ. ಕೇರಳದ ಇಡುಕ್ಕಿಯ ಜಿಲ್ಲೆಯ ಪುಲಿಮೇಡು ಪ್ರದೇಶದಲ್ಲಿ ನಡೆದ ಅವಘಡಕ್ಕೆ ಒಟ್ಟು 104 ಮಂದಿ ಮೃತಪಟ್ಟಿದ್ದಾರೆ.

ಬೆಂಗಳೂರು, ಬೆಳಗಾವಿ, ಮೈಸೂರು, ಹಾಸನ, ಧಾರವಾಡ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಂದ ಸಾವಿರಾರು ಭಕ್ತರು ಶಬರಿಮಲೆಗೆ ತೆರಳಿದ್ದರು. ಬೆಳಗಾವಿಯ ಗೋಕಾಕ್‌ನಿಂದ ತೆರಳಿದ್ದ 45 ಮಂದಿ ಘಟನೆ ಸಂಭವಿಸಿದ ಬಳಿಕ ನಾಪತ್ತೆಯಾಗಿದ್ದು, ಈ ಪೈಕಿ 9 ಮಂದಿಯ ಶವಗಳು ಪತ್ತೆಯಾಗಿವೆ.

ಮೃತರ ವಿವರ

ಪುರುಷೋತ್ತಮ ಬಾಳಪ್ಪ(53), ಬಸವರಾಜ ಫಕೀರಪ್ಪ(19), ಪ್ರಮೋದ ದೊಡ್ಡಣ್ಣ(35), ಚಂದ್ರಶೇಖರ ಲಕ್ಷ್ಮಪ್ಪ(28), ಪ್ರಕಾಶ ಯಲ್ಲಪ್ಪ(35), ಸಿದ್ಧರಾಮಪ್ಪ ಮಲ್ಲಪ್ಪ(16), ಚಂದ್ರಕಾಂತ್ ಬೋಸ್ಲೆ(25) ಶ್ರೀನಿವಾಸ್ ಶೆಟ್ಟಿ(35), ಮಂಜುನಾಥ್(45), ನಾಗಾರ್ಜುನ್(22), ವೀರಣ್ಣಸ್ವಾಮಿ(45), ಮಹಾಬಲೇಶ್ವರ(24), ಮಂಜುನಾಥ ಕಡೇದ(21), ಶಿವಲಿಂಗಯ್ಯ(15), ಮಂಜುನಾಥ ಗಂಟಿ(12), ಕೃಷ್ಣ(38), ಹರೀಶ್(12), ಸುರೇಶ್(19), ವೆಂಕಟಸ್ವಾಮಿ(35), ಮಂಜುನಾಥ್(34), ಮಂಜುನಾಥ್(27), ತಿಪ್ಪೇರುದ್ರಪ್ಪ(26), ಮೆಹಬೂಬ್(22) ಮತ್ತು ವಿಷ್ಣುಮೂರ್ತಿ(25) ಎಂದು ಗುರುತಿಸಲಾಗಿದೆ.

ವಿಶೇಷ ವಿಮಾನದ ಮೂಲಕ ಇಂದು ಮೃತ ದೇಹಗಳನ್ನು ರಾಜ್ಯಕ್ಕೆ ತರುವ ಸಾಧ್ಯತೆಗಳಿವೆ. ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕರ್ನಾಟಕ ಹಾಗೂ ಕೇರಳ ಸರಕಾರಗಳು ನಿಯಂತ್ರಣ ಕೊಠಡಿಗಳನ್ನು ಆರಂಭಿಸಿದ್ದು, ಘಟನೆಗೆ ಸಂಬಂಧಿಸಿ ಹಾಗೂ ಮೃತರು, ಗಾಯಾಳುಗಳ ಕುರಿತು ದೂರವಾಣಿಯ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಕೇರಳದ ಶಬರಿಮಲೆಗೆ ರಾಜ್ಯದಿಂದ ತೆರಳಿದ್ದ ಭಕ್ತರ ಪೈಕಿ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ಒಂದು ಲಕ್ಷ ರುಪಾಯಿ ಹಾಗೂ ಗಾಯಾಳುಗಳಿಗೆ ತಲಾ 25 ಸಾವಿರ ರೂ. ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಕಟಿಸಿದ್ದಾರೆ. ಕೇಂದ್ರ ಸರಕಾರ ಮೃತರ ಕುಟುಂಬಕ್ಕೆ 1 ಲಕ್ಷ ಮತ್ತು ಗಾಯಗೊಂಡವರಿಗೆ 50 ಸಾವಿರ ರುಪಾಯಿಗಳನ್ನು ಘೋಷಿಸಿದೆ.(ಶಬರಿಮಲೆ)

ಬೆಂಗಳೂರು ನಿಯಂತ್ರಣ ಕೊಠಡಿ: 080-22215911, 22211177, 1800 4250 100.
ಕೇರಳದ ನಿಯಂತ್ರಣ ಕೊಠಡಿ: 04869 222049, 04869 252244, 04869 253456 ಈ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿಯನ್ನು ಪಡೆಯಬಹುದಾಗಿದೆ.

English summary
Till late Saturday night, about 30 persons from Karnataka were confirmed dead in the Sabarimala tragedy. With 13 unidentified bodies at the spot and some pilgrims missing, the state toll could well go up.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X