ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್ ಬೆಲೆ ಭಾರಿ ಏರಿಕೆ!

By Mrutyunjaya Kalmat
|
Google Oneindia Kannada News

Petrol pump
ನವದೆಹಲಿ, ಜ.16: ಸರಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಶನಿವಾರ ಪೆಟ್ರೋಲ್ ಬೆಲೆಯನ್ನು ಲೀಟರ್ ಗೆ ರೂ. 2.50ರಿಂದ 2.54ರ ವರೆಗೆ ಏರಿಸಿದೆ. ಇದು ಶನಿವಾರ ಮಧ್ಯರಾತ್ರಿಯಿಂದಲೇ ಜಾರಿಗೊಂಡಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲದ ಬೆಲೆ ಬ್ಯಾರೆಲ್ ಗೆ 92 ಡಾಲರ್ ಗೆ ಏರಿಕೆಯಾಗಿದ್ದರಿಂದ ಒಂದು ತಿಂಗಳ ಅವಧಿಯಲ್ಲಿ ಪೆಟ್ರೋಲ್ ಬೆಲೆಯನ್ನು ಏರಡು ಬಾರಿ ಹೆಚ್ಚಿಸಲಾಗಿದೆ. ದೇಶದ ಬೃಹತ್ ಚಿಲ್ಲರೆ ಇಂಧನ ಮಾರಾಟ ಸಂಸ್ಥೆಗಳಾದ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲೀಟರ್ ಗೆ 2.50 ರುಪಾಯಿ, ಹಿಂದೂಸ್ತಾನ್ ಪೆಟ್ರೋಲಿಯಂ ಲಿಮಿಟೆಡ್ 2.54 ರುಪಾಯಿ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ 2.53 ರುಪಾಯಿ ಏರಿಸಿದೆ. ಡಿಸೆಂಬರ್ 15-16 ರಂದು ಪೆಟ್ರೋಲ್ ಬೆಲೆಯನ್ನು 2.94 ರಿಂದ 2.96ರಷ್ಟು ಹೆಚ್ಚಿಸಲಾಗಿತ್ತು.

ಬೆಂಗಳೂರಿನಲ್ಲಿ ನೂತನ ದರ ಪ್ರತಿ ಲೀಟರ್ ಗೆ 65.65 ರುಪಾಯಿ ಹಾಗೂ ಪ್ರಿಮಿಯಮ್ ಪೆಟ್ರೋಲ್ ದರ 68.35 ರುಪಾಯಿ ಎಂದು ಸಂಸ್ಥೆಗಳು ತಿಳಿಸಿವೆ. ಸಂಕ್ರಮಣದ ಸುಗ್ಗಿಯಲ್ಲಿರುವ ಮಂದಿಗೆ ಕೇಂದ್ರ ಸರಕಾರ ಸದ್ದಿಲ್ಲದೆ ಶಾಕ್ ನೀಡಿರುವುದಂತೂ ಸತ್ಯ. (ಪೆಟ್ರೋಲ್)

English summary
Petrol prices were hiked once again on Saturday evening, much to the dismay of Delhiites, who had been put through a similar hike barely a month ago. With effect from Sunday, petrol will become dearer by Rs 2.54 per litre.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X