ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂ.ಭೀಮಸೇನ ಜೋಶಿ ಆರೋಗ್ಯ ಏರುಪೇರು

By Mrutyunjaya Kalmat
|
Google Oneindia Kannada News

Bhimsen Joshi
ಬೆಂಗಳೂರು, ಜ. 14 : ಕಳೆದ ನಾಲ್ಕು ದಿನಗಳ ಹಿಂದೆ ಪುಣೆಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಹಿಂದೂಸ್ತಾನಿ ಗಾಯಕ ಭಾರತರತ್ನ ಪಂಡಿತ ಭೀಮಸೇನ ಜೋಶಿ(88) ಅವರ ಆರೋಗ್ಯ ಮತ್ತಷ್ಟು ವಿಷಮಿಸಿದ್ದರಿಂದ ಅವರನ್ನು ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿದೆ. ಜೋಶಿ ಅವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

2005ರಿಂದಲೇ ಆನಾರೋಗ್ಯಕ್ಕೆ ಒಳಗಾಗಿರುವ ಜೋಶಿ ಅವರು 2009ರಲ್ಲಿ ಭಾರತರತ್ನ ಘೋಷಣೆಯಾದಾಗಲೂ ಪ್ರಶಸ್ತಿ ಸ್ವೀಕರಿಸಲು ದೆಹಲಿಗೆ ಹೋಗಲು ಆಗಿರಲಿಲ್ಲ. ಪುಣೆಯಲ್ಲಿರುವ ಅವರ ಮನೆಯಲ್ಲಿಯೇ ಭಾರತರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಭೀಮಸೇನ ಜೋಶಿ ಅವರ ಆರೋಗ್ಯ ಕ್ಷೀಣಿಸಿರುವುದು ಅವರ ಅಪಾರ ಸಂಗೀತ ಅಭಿಮಾನಿಗಳಲ್ಲಿ ಆತಂಕ ಉಂಟು ಮಾಡಿದೆ.(ಭೀಮಸೇನ ಜೋಶಿ)

English summary
Noted Hindustani classical meastro Bharat Ratna awardee pandit Bhimsen Joshi hospitalized. He is suffering from respiratory problem, hospital source said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X